logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಭೂಭಾಗ
[ನಾ] ನೆಲದ ಮೇಲೆ (ಭೂಭಾಗದೊಳ್ ತಂದು ತಾಟಿಸುತುಂ ಕೋಟಲೆಗೊಳ್ವ ರತ್ನಮಕುಟದ್ಯೋತ ಉತ್ತಮಾಂಗಂ ವಿರಾಜಿಸುವನ್ನಂ ಪೊರಳ್ವ ಪಗೆಯಂ ಕಣ್ಣಾರ್ವಿನಂ ನೋಡಿದಳ್: ಪಂಪಭಾ, ೧೨. ೧೫೧)

ಭೂಭುಜ
[ನಾ] ರಾಜ (ಗುಣಾರ್ಣವಭೂಭುಜಂಗೆ ಬಟ್ಟೆದೋಱುವವೊಲಂದು ಒಗೆದಂ ಕಮಲೈಕಬಾಂಧವಂ: ಪಂಪಭಾ, ೪. ೧೧೧)

ಭೂಭೃತ್
[ನಾ] ಪರ್ವತ (ಪತ್ತುವಿಡಲ್ ಭೂಭರತ್ಕುಳಂಗಳ್ ಬಗೆದುವು: ಆದಿಪು, ೧೨. ೮೮); [ನಾ] ರಾಜ (ಅಂತು ಪಾಂಡುರಾಜಂ ಅಧಿಕತೇಜನುಂ ಅವನತವೈರಿಭೂಭೃತ್ ಸಮಾಜನುಂ ಆಗಿ ನೆಗೞುತ್ತಿರ್ದೊಂದು ದಿವಸಂ: ಪಂಪಭಾ, ೧. ೧೧೦ ವ)

ಭೂಭೃತ್ಪತಿ
[ನಾ] ರಾಜಾಧಿರಾಜ (ಶಾಂತರೂಪದಿನಿರ್ದತ್ತು ಅಳುರುತ್ತಮಿರ್ದ ಕೋಪಾನಳನಿಂದುಪಶಾಂತನಾದ ಭೂಭೃತ್ಪತಿವೋಲ್: ಆದಿಪು, ೧೩. ೪೦)

ಭೂಭೃನ್ಮುಖ್ಯ
[ನಾ] [ಭೂಭೃತ್+ಮುಖ್ಯ] ರಾಜರುಗಳಲ್ಲಿ ಮುಖ್ಯ, ಸಾರ್ವಭೌಮ (ಪರಿಪೂರ್ಣೇಂದುವಿಂ ಅನ್ವಯಾಭ್ರತಿಳಕಂ ತಿಗ್ಮಾಂಶುವಿಂ ತೀವ್ರಭಾಸುರತೇಜಂ ಸುರಶೈಲದಿಂ ಸಕಳಭೂಭೃನ್ಮುಖ್ಯಂ: ಆದಿಪು, ೮. ೨೭)

ಭೂಮಿ
[ನಾ] ನೆಲೆ (ಆಂ ತನಗೆ ಪರಮವಿಶ್ವಾಸಭೂಮಿಯೆನಾಗಿ ಕಿಱಿಯಂದಿಂದಿತ್ತ ನಡೆಪಿದ ಓದಿಸಿದ ದಾದಿಯೆನಪ್ಪುದಱಿಂ: ಆದಿಪು, ೪. ೨೧ ವ)

ಭೂಮಿಭಾಗ
[ನಾ] ಭೂಪ್ರದೇಶ (ನಭೋಭಾಗದಿಂ ಭೂಮಿಭಾಗಕ್ಕಿೞಿದು ತನ್ನ ಮುಂದೆ ನಿಂದ ಅರವಿಂದ ಬಾಂಧವನಂ ನೋಡಿ ನೋಡಿ: ಪಂಪಭಾ, ೧. ೯೧ ವ)

ಭೂರಿ
[ನಾ] ಮಹತ್ತರವಾದ, ಹಿರಿದಾದ (ಎಱೆದಂ ಭೂತಳರಾಜ್ಯಭೂರಿಭರಮಂ ತಾಳಲ್ಕೆ ಮತ್ಪುತ್ರಂ ಈ ಪೊಱೆಗೆ ಇನ್ನೀತನೆ ಯೋಗ್ಯಂ ಎಂಬ ಬಗೆಯಿಂ: ಆದಿಪು, ೬. ೨೩)

ಭೂರಿಭೂತಲ
[ನಾ] ವಿಶಾಲವಾದ ಭೂಮಂಡಲ (ಬಲಿಯಂ ವಾಮನರೂಪದಿಂದಮೆ ವಲಂ ಮುಂ ಬೇಡಿದೆಂ ಭೂರಿಭೂತಲಮಂ ಕುಂದೆನಗಾಯ್ತೆ ಕೊಂಡೆನಿಳೆಯಂ: ಪಂಪಭಾ, ೯. ೨೦)

ಭೂರುಹ
[ನಾ] ಮರ (ಸರಿತ್ ಗಿರಿ ದರಿ ಭೂರುಹ ಸೇತು ವನ ಸೀಮೋಪಲಕ್ಷಿತಂಗಳಪ್ಪ ಖೇಡಂಗಳುಮಂ: ಆದಿಪು, ೮. ೬೩ ವ)


logo