logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಭುಜಾರ್ಗಳ
[ನಾ] ಅಗಳಿಯ ಹಾಗಿರುವ ಭುಜ (ಪನ್ನತರ ನಡುವಂ ಉಡಿಯಲ್ಕೆನ್ನ ಭುಜಾರ್ಗಳಮೆ ಸಾಲ್ಗುಂ ಒಸೆ ಮೇಣ್ ಮುನಿ ಮೇಣ್ ಎನ್ನ ನುಡಿ ಟಾಠಡಾಢಣಂ ಎನ್ನಂ ಬೆಸಸುವುದು ರಾಜಸೂಯಂ ಬೇಳಲ್: ಪಂಪಭಾ, ೬. ೨೬)

ಭುವನತ್ರಯ
[ನಾ] ಮೂರು ಲೋಕಗಳು (ಅತ್ರಿಯ ಪಿರಿಯ ಮಗಂ ಭುವನತ್ರಯ ಸಂಗೀತ ಕೀರ್ತಿ ಸೋಮಂ: ಪಂಪಭಾ, ೧. ೬೧)

ಭುವನಪ್ರದೀಪ
[ನಾ] ಲೋಕಕ್ಕೆ ಬೆಳಕಾದವನು (ನರಸಿಂಗಂಗತಿ ಧವಳಯಶಂ ಯುದ್ಧಮಲ್ಲನಗ್ರಸುತಂ ತದ್ಭುವನ ಪ್ರದೀಪನಾಗಿರ್ದವಾರ್ಯ ವೀರ್ಯಂಗೆ ಬದ್ದೆಗಂ ಪಿರಿಯ ಮಗಂ: ಪಂಪಭಾ, ೧. ೨೩)

ಭುವನಭವನ
[ನಾ] ಲೋಕವೆಂಬ ಮನೆ (ಚಾಗದ ನೆಗೞ್ತೆಯೊಳ್ ಬೀರದ ಏೞ್ಗೆಯೊಳ್ ನೆಗೞೆ ಮಗಂ ಮಗನೆನೆ ಪುಟ್ಟಲೊಡಂ ಕೋೞ್ಮೊಗಗೊಂಡುದು ಭುವನಭವನಂ ಅರಿಕೇಸರಿಯೊಳ್: ಪಂಪಭಾ, ೧. ೪೨)

ಭುವಾ
ಭೂಮಿಗೆ (ಸದಿಗ್ವಳಯಯಾ ಭುವಾ ಸಗಿರಿಸಾಗರದ್ವೀಪಯಾ: ಪಂಪಭಾ, ೪) ೨೭

ಭೂಚಕ್ರ
[ನಾ] ಭೂಮಂಡಲ (ನಿಮ್ಮೀ ಕ್ರಮಕಮಲಕ್ಕೆ ಎಱಗದೆ ವಕ್ರಿಸಿ ಭೂಚಕ್ರದೊಳಗೆ ಬಾೞ್ವರುಂ ಒಳರೇ: ಪಂಪಭಾ, ೧೧. ೩೦)

ಭೂಚರಿ
[ನಾ] ಮನುಷ್ಯಸ್ತ್ರೀ (ಖೇಚರಿಯೋ ಭೂಚರಿಯೋ ನಿಶಾಚರಿಯೋ ರೂಪು ಬಣ್ಣಿಸಲ್ಕೆ ಆರ್ಗಂ ಅವಾಗ್ಗೋಚರಂ ಈ ಕಾನನಮುಂ ಅಗೋಚರಂ ಇವಳ್ ಇಲ್ಲಿಗೇಕೆ ಬಂದಳೊ ಪೇೞಿಂ: ಪಂಪಭಾ, ೩. ೧೪)

ಭೂಜ
[ನಾ] ಮರ (ಸರಳ ತಮಾಳ ತಾಳ ಹರಿಚಂದನ ನಂದನ ಭೂಜರಾಜಿಯಿಂ ಸುರಿವ ಅಲರೋಳಿ ತದ್ವನಲತಾಂಗಿಯ ಸೂಸುವ ಸೇಸೆಯಾಯ್ತು: ಪಂಪಭಾ, ೫. ೫೨)

ಭೂಜಾತ
[ನಾ] ಮರ (ಬಾಲಸಹಕಾರತರು ನವಮಾಲಿಕೆಗೆ ಅತಿಲಲಿತ ಪೂಗಭೂಜಾತಂ ತಾಂಬೂಲಲತೆಗೆ ಎಂಬವೊಲ್ ಸ್ಮರಲೀಲಂ ನಿಜತನಯಂ ಎನ್ನ ತನುಜೆಗೆ ತಕ್ಕಂ: ಆದಿಪು, ೪. ೨೮)

ಭೂತಧಾತ್ರಿ
[ನಾ] ಭೂಮಿ (ಭಯಮೇಕಕ್ಕುಂ ಅದೆಂತೆಂದು ಅದಟುಮಂ ಪೆರ್ಮಾತುಮಂ ಭೂತಧಾತ್ರಿಯೊಳೋರಂತೆ ನೆಗೞ್ಚಿ : ಪಂಪಭಾ, ೧೨. ೧೭೫)


logo