logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಭುಜಂಗ
[ನಾ] ಹಾವು (ಮಾಗಧಾಮರಂ ವಿನಮಿತಸರ್ವಾಂಗಂ ಚಚ್ಚಾರವಕೆ ಭುಜಂಗನ ಕೊರಲಂತೆ ಬಾಗಿದಂ ಮೂಱೆಡೆಯೊಳ್: ಆದಿಪು, ೧೨. ೧೧೧)

ಭುಜಂಗಮ
[ನಾ] ಹಾವು (ಕ್ರಮದೊಳ್ ಅಸಂಜ್ಞಿಯುಂ ಸರಿಸೃಪಾಳಿಯುಂ ವಿಹಗಾಳಿಯುಂ ಭುಜಂಗಮತತಿಯುಂ ಮೃಗಾರಿಗಣಮುಂ ಲಲನಾಜನಮುಂ: ಆದಿಪು, ೫. ೯೩)

ಭುಜಂಗಮೂರ್ತಿ
[ನಾ] ಸರ್ಪಾಕಾರವುಳ್ಳವನು (ಅಂತು ಅಜಾತಶತ್ರು ಶತ್ರುಪಕ್ಷಕ್ಷಯಕರ ಕರವಾಳದಂಷ್ಟ್ರಾಭೀಳ ಭುಜಂಗಮೂರ್ತಿ .. .. ಅಪ್ಪ ಅರಿಕೇಸರಿಯ ತೋಳ್ವಲದೊಳ್: ಪಂಪಭಾ, ೪. ೧೦ ವ)

ಭುಜಂಗೀ
[ನಾ] ಸರ್ಪಿಣಿ (ವೀರಶ್ರೀಭುಜಂಗೀಸಮಾಶ್ರಯ ಶ್ರೀಖಂಡಕಾಂಡಗಳುಮಪ್ಪ ದೋರ್ದಂಡಂಗಳಿಂದಂ ಅತಿನಿಬಿಡಾಲಿಂಗನಂಗೆಯ್ದು ಕಾರ್ಯಮಮಂ ಬೆಸಸಿರ್ಕುಂ: ಆದಿಪು, ೧೪. ೪೬ ವ)

ಭುಜಗ
[ನಾ] ಹಾವು, ನಾಗ (ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್ ಎಂದು ಶಕ್ತಿಯನಿತ್ತಂ: ಪಂಪಭಾ, ೧. ೧೦೩)

ಭುಜಗಶಿಶು
[ನಾ] ಹಾವಿನ ಮರಿ (ಅಸಿತ ಭುಜಶಿಶುತರಳತರವಾರಿ ಖಡ್ಗಖೇಟಕ ವ್ಯಗ್ರಕರದ್ವಯ ಉದ್ದಾಮಪದಾತಿಬಹಳಂ: ಆದಿಪು, ೧೩. ೪೫ ವ)

ಭುಜಪರಿಘ
[ನಾ] ತೋಳು ಎಂಬ ಪರಿಘಾಯುಧ (ವೀರವೈರಿಕ್ಷಿತಿಪ ಗಜಘಟಾಟೋಪ ಕುಂಭಸ್ಥಳೀಭೇದನಂ ಉಗ್ರೋದ್ಘಾಸಿ ಭಾಸ್ವತ್ ಭುಜಪರಿಘನಂ ಆರೂಢಸರ್ವಜ್ಞನಂ: ಪಂಪಭಾ, ೧. ೫೧)

ಭುಜಬಲಿ
[ನಾ] [ಜೈನ] ಆದಿತೀರ್ಥಂಕರನ ಮಗನಾದ ಬಾಹುಬಲಿ (ಪುರತನಯರ್ ಭುಜಬಲಿಯುಂ ಭರತನುಮೆನೆ ದೊರೆಗೆವಂದೊಡೆ: ಆದಿಪು, ೧೪. ೮೧)

ಭುಜಲತಾ
[ನಾ] ತೋಳೆಂಬ ಬಳ್ಳಿ (ರಸ ಭಾವಾಭಿನಯಂಗಳಂ ಭುಜಲತಾ ಭ್ರೂಚಾಪ ನೇತ್ರೋತ್ಪಲ ಪ್ರಸರಂಗಳ್ ಪಸರಂಗೆಯ್ಯುತ್ತಿರೆ: ಆದಿಪು, ೭. ೧೨೩)

ಭುಜಶಿಖರ
[ನಾ] ತೋಳಿನ ಮೇಲ್ಭಾಗ, ಹೆಗಲು (ಕುಲಶಿಖರಿ ಶಿಖರೋತ್ತುಂಗಂಗಳಾದ ಭುಜಶಿಖರಂಗಳುಂ: ಆದಿಪು, ೩. ೯ ವ)


logo