logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಬಳಗ
[ನಾ] ಗುಂಪು (ಅೞಿದೞ್ಗಿದ ಕರಿಘಟೆಗಳ ಬಳಗದಿಂ ಉಚ್ಚಳಿಸಿ ಮೊರೆವ ನೆತ್ತರ ತೆರೆಗಳ್: ಪಂಪಭಾ, ೫. ೩೨)

ಬಳಮರ್ದುಕಾಱ
[ನಾ] ವೀರ್ಯಪುಷ್ಟಿಕರ ಮದ್ದನ್ನು ತಯಾರಿಸುವವನು (ಕಾಮದೇವನೆಂಬ ಬಳಮರ್ದುಕಾಱನ ಮಾಡಿದ ಮರ್ದಿನಂತೆ ಬಳೆದು ದಳಂಬಡೆದು: ಪಂಪಭಾ, ೪. ೮೭ ವ)

ಬಳವತ್
[ಗು] ಬಲಿಷ್ಠವಾದ, ಪ್ರಬಲವಾದ (ಬಳವತ್ ಕಾಮಾಗ್ನಿ ಹೋಮಾಗ್ನಿ ಚಂದನ ಕರ್ಪೂರ ಮೃಣಾಳನಾಳಮೆ ಪೊದಳ್ದ ಇಧ್ಮಂಗಳ್ ಇಂತಾಗೆ ತಾನಿನಿತುಂ ಕಾಮನ ಬೇಳ್ವೆಯೆಂದು ಸುಗಿದಳ್ ತನ್ವಂಗಿ ಬೆಳ್ದಿಂಗಳೊಳ್; ಪಂಪಭಾ, ೪. ೫೯)

ಬಳವಳ ಬಳೆ
[ಕ್ರಿ] ಸರ ಸರ ಎಂದು ಹೆಚ್ಚಾಗು (ಅಳವಱಿಯದ ಎಗ್ಗು ಬಳವಳ ಬಳೆವಿನೆಗಂ ಪಚ್ಚಪಸಿಯ ತುಱುಕಾಱಂಗೆ ಅಗ್ಗಳಿಕೆಯನೆ ಮಾಡಿ: ಪಂಪಭಾ, ೬. ೪೬)

ಬಳವಿವಡೆ
[ಕ್ರಿ] [ಬಳವಿ+ಪಡೆ] ಬೆಳವಣಿಗೆ ಹೊಂದು, ಹೆಚ್ಚು (ಅಳವಿಗೞಿದಲಂಪುಂ ಬಳವಿಗವಡೆದೞ್ಕಱುಮಂ ಓರೋರ್ವರೊಳ್ ನೆಱೆದು: ಆದಿಪು, ೪. ೫೨ ವ)

ಬಳವ್ಯಸನ
[ನಾ] ಸೈನ್ಯದ ಪಿತೂರಿ (ಸಪ್ತವ್ಯಸನಂಗಳ್ ಅಯ್ವರುಮನೊಂದುಂ ಗೆಲ್ವುವಲ್ಲವು ರಾಷ್ಟ್ರವ್ಯಸನಮಂ ಬಳವ್ಯಸನಮಂ ಪಾರ್ವೆಮಪ್ಪೊಡೆ ಅವು ಮುನ್ನಮಿಲ್ಲ: ಪಂಪಭಾ, ೬. ೬೭ ವ); [ನಾ] ಸೈನ್ಯದ [ಒಳ] ಜಗಳ (ಅಸದಳಮಾಗಿಯುಂ ಈ ನಮ್ಮ ಸೈನ್ಯಂ ಇಂತೊರ್ವರೊರ್ವರೊಳ್ ಸೆಣಸಿ ಬಳವ್ಯಸನದೊಳೆ ಕೆಟ್ಟುದು: ಪಂಪಭಾ, ೧೨. ೪೨)

ಬಳವ್ಯಾಘಾತ
[ನಾ] ಶೌರ್ಯದ ಕೇಡು, ಪರಾಕ್ರಮದ ಸೋಲು (ಮೞೆ ಶೌರ್ಯಾಘಾತಂ ನೆಗೞೆ ಬಳವ್ಯಾಘಾತಂ ನಿನ್ನ ಪತಿಗಾದುದು ಪುಸಿಯೇ: ಆದಿಪು, ೧೪. ೭೧)

ಬಳಸಂಪನ್ನ
[ನಾ] ಸೈನ್ಯಸಂಪತ್ತಿಯಿಂದ ಕೂಡಿದವನು (ಬಳಸಂಪನ್ನರಂ ಆಸೆಗೆಯ್ಗೆ ಚತುರಂಗಾನೀಕಮಂ ಕೂಡಿ ಕೊಳ್ಗುಳಮಂ ಗಂಡುಮಂ ಅಪ್ಪುಕೆಯ್ಗೆ: ಪಂಪಭಾ, ೯. ೯೦)

ಬಳಸಿ
[ಕ್ರಿ] ಸುತ್ತು, ಆಸುಪಾಸು (ರಿಪುನೃಪರಂ ಚಲದಲೆದು ಬಂದು ಚಾತುರ್ಬಲಯುತನಾ ನಗದೆ ಬಳಸಿ ಬೀಡಂ ಬಿಟ್ಟಂ: ಆದಿಪು, ೫. ೫)

ಬಳಸು
[ಕ್ರಿ] ಸುತ್ತುಗಟ್ಟು (ಬಳಸುವ ಕಣ್ ಮಿಳಿರ್ವ ಕುರುಳ್ ನಳಿಮೊಗಮೆನೆ ಸೊಬಗಿವಳ್ಗೆ ನಾೞ್ವರ್ತನಮೇ: ಆದಿಪು, ೪. ೪೪); [ಕ್ರಿ] ಆವರಿಸು (ಮಗಮಗಿಸಲ್ಕೆ ಮಂದಯಿಸಿ ದಿಕ್ತಟಮಂ ಬಳಸಲ್ಕೆ ಪೀರ್ವ ತುಂಬಿಗೆ ತಣಿಪಲ್ಕೆ ನಮ್ಮ ಜಸಮಂ ಬೆಳಗಲ್ಕೆ ಇವೆ ಸಾಲ್ಗುಂ: ಆದಿಪು, ೧೧. ೧೦೭); [ಕ್ರಿ] ಸುತ್ತುಮುತ್ತು ಓಡಾಡು (ಅದು ಬಿೞ್ದೊಡೆ ಪುರಾಣಕೂಪದೊಳ್ ಅದಂ ಇನ್ನು ಅರಿದು ತೆಗೆವಂದಂ ಎಂದವರಿರೆ ಬಳಸಿಯುಮಲ್ಲಿ ಕಂಡು ನಕ್ಕಂ ದ್ರೋಣಂ: ಪಂಪಭಾ, ೨. ೫೧); [ನಾ] ಆವರಿಸುವಿಕೆ (ಆಗಳ್ ಅಶ್ವತ್ಥಾಮಂ ಭೀಮೋದ್ದಾಮ ಶ್ಯಾಮಜಳಧೃವಿಮುಕ್ತ ಶರಾವಳಿಯ ಬಳಸಂ ಕಂಡು ಮುಗುಳ್ನಗೆ ನಕ್ಕು: ಪಂಪಭಾ, ೧೨. ೬೭ ವ)


logo