logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಬಹಳ
[ಗು] ಅಧಿಕ (ಅತಿ ಬಹಳ ದಹ್ಯಮಾನ ಕಾಳಾಗರು ಧೂಪಧೂಮಯಷ್ಟಿಘಟಿತ .. .. ಧೂಪಂಗಳಿಂದಂ: ಆದಿಪು, ೨. ೩೨ ವ)

ಬಹಿತ್ರ
[ನಾ] ಹಡಗು (ನೋಡುತ್ತಿರ್ಪನ್ನೆಗಂ ಗಗನತಳಜಳಧಿಯೊಳ್ ಬಹಿತ್ರದಂತೆ ಪರಿವ ಸೂರ್ಯಪ್ರಭನೆಂಬ ದೇವನ ವಿಮಾನಮಂ ನೋಡಿ: ಆದಿಪು, ೫. ೪೫ ವ)

ಬಹಿರ್ಮಂಡಳ
[ನಾ] ಪರರಾಜ್ಯ, ಶತ್ರುರಾಜ್ಯ (ನಿನಗರಸ ಬಹಿರ್ಮಂಡಳಮನೆ ಸಮಱಲ್ಕಿನಿತು ಬರಿಸಮುಂ ಪೋದುವು: ಆದಿಪು, ೧೪. ೧೫)

ಬಹಿರ್ಯಾನ
[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ, ಮಗುವನ್ನು ಬಾಣಂತಿಮನೆಯಿಂದ ಹೊರಗೆ ಒಯ್ಯುವುದು (ಬಹಿರ್ಯಾನ .. .. ಆಗ್ರನಿರ್ವೃತಿಯೆಂಬಯ್ವತ್ಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಬಹು ಚಿಂತಂ
[ನಾ] ಬಹಳ ಚಿಂತೆಗಳನ್ನು ಹೊಂದಿದವನು (ಎಂತಾನುಂ ನೆನೆದಂ ಬಹುಚಿಂತಂ ಚಕ್ರೇಶನೆಮ್ಮ: ಆದಿಪು, ೧೪. ೪೮)

ಬಹುವೇಗ
[ನಾ] ಅತಿಶಯ ವೇಗ (ಪಾತಂ ಲಕ್ಷ್ಯಂ ಶೀಘ್ರಂ ಘಾತಂ ಬಹುವೇಗಂ ಎಂಬಿವಯ್ದೇಸಿನೊಳಂ ಅಂತು ಈತನ ದೊರೆಯಲ್ಲ: ಪಂಪಭಾ, ೧೨. ೧೮೫)

ಬಹುಳ
[ನಾ] ಕೃಷ್ಣಪಕ್ಷ (ವಿತತಾಷಾಢದ ಬಹುಳ ಪ್ರತಿಪದ್ದಿನದಂದು ಕೀರ್ತಿ ನೆಗೞ್ದಿರೆ ಭಗವತ್ಕೃತಯುಗಮಾದುದರಿಂದಂ ಕೃತಯುಗಮೆಂಬರ್ ಪುರಾಣವಿದರಿದನೀಗಳ್: ಆದಿಪು, ೮. ೬೬); [ಗು] ಶೇಷವಾದ (ಭಸಿತಂ ಕರ್ಪೂರಕಾಳಾಗರು ಬಹುಳರಜಂ ವಲ್ಕಲಂ ಕಲ್ಪವೃಕ್ಷಪ್ರಸವಂ ಯಜ್ಞೋಪವೀತಂ ಕನಕಕಮಳನಾಳೋತ್ಕರಂ: ಪಂಪಭಾ, ೭. ೭೮)

ಬಹ್ವಾರಂಭ
[ನಾ] ನಾನಾ ಕಾರ್ಯಚಟುವಟಿಕೆಗಳು (ಬಹ್ವಾರಂಭ ಸಂರಂಭ ರೌದ್ರಧ್ಯಾನ ಪರಿಣತನುಂ ಉಪಾರ್ಜಿತ ನರಕಾಯುಷ್ಯಂ ಪ್ರತ್ಯಾಸನ್ನಮೃತ್ಯುವಾಗಿ: ಆದಿಪು, ೨. ೧೧ ವ)

ಬಹ್ವಾರಂಭಪರಿಗ್ರಹ
[ನಾ] [ಜೈನ] ಪಂಚಮಹಾಪಾತಕಗಳಲ್ಲಿ ಒಂದು, ತುಂಬ ಪ್ರಯತ್ನದಿಂದ ಹಣ ಸಂಪಾದಿಸುವುದು (ಬಹ್ವಾರಂಭಪರಿಗ್ರಹವಿಹ್ವಳಂ ಇಂದ್ರಿಯಸುಖಾರ್ಥಿ ಸಂಸಾರಗುಹಾಗಹ್ವರದೊಳಗಿರುಳಿನ ಚಕ್ರಾಹ್ವದವೊಲ್ ಮಱುಗದೇಂ ಸುಖಂಬಡೆದಪನೇ: ಆದಿಪು, ೩. ೬೮)

ಬಹ್ವಾರಂಭಪರಿಗ್ರಹತ್ವ
[ನಾ] [ಜೈನ] ಜೀವದ ಮೇಲಾಗುವ ಒಂದು ಅಶುಭ ಪರಿಣಾಮ (ಕೃಷ್ಣ ನೀಲ ಕಪೋತ ಲೇಶ್ಯಾ ಬಹ್ವಾರಂಭ ಪರಿಗ್ರಹತ್ವ ಆದಿ ಅಶುಭ ಪರಿಣಾಮಂಗಳಿಂ ಜೀವಂ ನೆಲಸಿ: ಆದಿಪು, ೫. ೮೩ ವ)


logo