logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಬಲ್ಮುಗುಳ್
[ನಾ] ದೊಡ್ಡ ಮೊಗ್ಗು (ಪರೆಯೆ ಪಸುರ್ಪು ಬೆಳ್ಪಡರೆ ಬಲ್ಮುಗುಳೊಳ್ ಪೊರೆದೋಱೆ ತಂಬೆಲರ್: ಆದಿಪು, ೧೧. ೧೧೦)

ಬಲ್ಮೆ
[ನಾ] ಶ್ರೇಷ್ಠತೆ, ಪ್ರೌಢಿಮೆ (ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನಂ ಉಗ್ರ ಪರಶು ಪಾಟಿತರಿಪುವಂಶಾರಾಮನಂ ಇಷುವಿದ್ಯಾ ಪಾರಗನೆನಿಸಿದುದು ಬಲ್ಮೆ ವೈಕರ್ತನನಾ: ಪಂಪಭಾ, ೧. ೧೦೪); [ನಾ] ಅರಿವು (ಏರ್ವೆಸನದೊಳಾದ ಬಲ್ಮೆಯೊಳ್ ಒಡಂಬಡೆ ತಳ್ತಿಱಿವಲ್ಲಿ ಮಿಂಚಿನೊಳ್ ಮುಸುಕಿದ ಮಾೞ್ಕೆಯಾಯ್ತು ಸಮರಾಂಗಣಂ ಉಳ್ಕುವ ಬಾಳ್ಗಳ ಉಳ್ಕದಿಂ: ಪಂಪಭಾ, ೧೦. ೭೮)

ಬಲ್ಲಡವಿ
[ನಾ] ದೊಡ್ಡ ಕಾಡು (ಗುಡಿಯ ಗೂಂಟಕ್ಕೆ ಬಲ್ಲಡವಿಗಳುಂ ದಂಡಿಗೆಗೆ ವೇಣುವನಂಗಳುಂ ಆನೆಗಂಬಕ್ಕೆ ಪೆರ್ಮರಂಗಳುಮಂ ಆ ಪಡೆಗೆ ನೆಱೆಯವೆನಿಸಿ: ಪಂಪಭಾ, ೯. ೧೦೪ ವ)

ಬಲ್ಲಣಿ
[ನಾ] ಬಲವಾದ ಕಾಲಾಳುಸೈನ್ಯ (ಪಸರಿಸಿ ಪೊಕ್ಕು ಕೂಕಿಱಿದು ಕಾದುವ ಬಲ್ಲಣಿಗಳ್ ಪಳಂಚೆ: ಪಂಪಭಾ, ೮. ೯೩)

ಬಲ್ಲರ್
[ನಾ] ಬಲ್ಲವರು, ತಿಳಿದವರು (ತಗುಳ್ದಿರೆ ಬಲ್ಲರ್ ನಡೆ ನೋಡಿ ಕೂಡೆ ಪಡೆದತ್ತು ಅಕ್ಷೆಕ್ಷೋಹಿಣೀಸಂಖ್ಯೆಯಂ: ಪಂಪಭಾ, ೯. ೯೫)

ಬಲ್ಲಹ
[ನಾ] [ವಲ್ಲಭ] ಯಜಮಾನ, ರಾಷ್ಟ್ರಕೂಟ ಚಕ್ರವರ್ತಿ ವಲ್ಲಭರಾಜ (ಕೊಡುವ ಬಾಡಕ್ಕಂ ಜೀವಧನಂಗಳ್ಗಂ ಬಿಡುವೆಣ್ಗಂ ಲೆಕ್ಕಮಿಲ್ಲೆನಿಸಿ ರಾಗಂಗಿಡದೆ ಕೊಂಡಾಡಿದಂ ಬಲ್ಲಹನಱಿಯೆ ಗುಣಾರ್ಣವಂ ಕವಿತಾಗುಣಾರ್ಣವನಂ: ಪಂಪಭಾ, ೧೪. ೫೫)

ಬಲ್ಲಾಯ
[ನಾ] ಅಧಿಕ ಸಾಮರ್ಥ್ಯ, ದಪ್ಪ (ನಿಡಿಯರ್ ಬಲ್ಲಾಯದ ಬಲ್ದಡಿಗರ್ ವಂದಿರ್ದರಯ್ವರ್: ಪಂಪಭಾ, ೩. ೧೨)

ಬಲ್ಲಾಳ್ತನ
[ನಾ] ಶೌರ್ಯ (ಈಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮಂ ಅವರವರ ದೆಸೆಗಳಿಂ ತೆಗೆದೊಂದುಮಾಡಿ: ಪಂಪಭಾ, ೧. ೧೩೯ ವ)

ಬಲ್ಲಿತ್ತಱ ಕೋಡು ಕೂರಿತು
ಬಲಿಷ್ಠರ ಕೊಂಬು ಹರಿತ, ಬಲಿಷ್ಠರನ್ನು ಅವಗಣಿಸಲಾಗದು (ಇನ್ನಿದು ಬಲ್ಲಿತ್ತರ ಕೋಡು ಕೂರಿತು ಅದನಂತಿಂತಿಂತುನಲ್ ಬರ್ಕುಮೇ: ಆದಿಪು, ೧. ೨೫)

ಬಲ್ಲಿದ
[ನಾ] ಶೂರ (ಬಲ್ಲಿದಂ ಸುರನಾ ಮಾಗಧನಲ್ಲಿ ಭೂಭುಜನ ದೋರ್ದಂಡಕ್ಕೆ ಪುಣ್ಯೋದಯಂ ನೆರಮಕ್ಕೆ: ಆದಿಪು, ೧೨. ೧೨೫)


logo