logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಬಯ್ತಿಡು
[ಕ್ರಿ] ಕಾಪಾಡು, ಸಂಗ್ರಹಿಸು (ನಾನಾವಿಧ ಧಾನ್ಯಂಗಳಂ ಪದನಱಿದುಡುಗುವ ಕಣಂ ಮಾಡುವ ಒಕ್ಕುವ ಅಡಕುವ ಬಯ್ತಿಡುವ ವಿವಿಧಭಾಜನಂಗಳೊಳಡುವ: ಆದಿಪು, ೬. ೭೭ ವ); [ಕ್ರಿ] ಅಡಗಿಸಿಡು (ಎಮೆಯಿಕ್ಕದೆ ನೋಡುವ ನರರ ಅಮರರ ಕಣ್ಗಳೊಳನಂಗರಾಜನ ಬಯ್ತಿಟ್ಟ ಅಮರ್ದಂ ಕೊಳೆ ತಳಿದುದು ನಾಭಿಮೂಳಮುಂ ಬಾಹುಮೂಳಮುಂ ಸುರವಧುವಾ: ಆದಿಪು, ೯. ೩೫)

ಬರ
[ನಾ] ವರ (ಮತ್ತೊರ್ವ ಮಗನಂ ಬೇಡೆಂದಂಬಿಕೆಗೆ ಪೇೞ್ದೊಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂಳೆಯಂ ತನ್ನವೊಲೆ ಕಯ್ಗೆಯ್ದು ಬರವಂ ಬೇಡಲಟ್ಟಿದೊಡೆ: ಪಂಪಭಾ, ೧. ೮೫ ವ)

ಬರಂಬಡೆ
[ಕ್ರಿ] ವರವನ್ನು ಹೊಂದು (ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರ ಮುನೀಂದ್ರನೊಳ್ ಬರಂಬಡೆದಳ್ ಎಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿನಿಯಾಗಲ್ ಬಗೆದು: ಪಂಪಭಾ, ೧. ೧೧೬ ವ)

ಬರಗಲೆ
[ನಾ] ಒಂದು ಆಭರಣವಿಶೇಷ (ಸರಿಗೆಗಿವು ಲಂಬಣಕ್ಕಿವು ಬರಗಲೆಗಿವು ಮುಗುಳ್ಗಳೆಮ್ಮ ಮೇಖಳೆಗಿವು ನೂಪುರರಚನೆಗಿಂತಿವು: ಆದಿಪು, ೭. ೬೯)

ಬರಲೀ
[ಕ್ರಿ] [ಬರಲ್+ಈ] ಬರಲು ಅವಕಾಶ ಕೊಡು (ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಣ್ದ ನನ್ನಿಗೆ ಬನ್ನಂ ಬರಲೀಯದೆ: ಪಂಪಭಾ, ೧. ೮೧)

ಬರವು
[ನಾ] ಬರುವಿಕೆ (ಮೆಚ್ಚಿ ಬರವಂ ಅಗ್ನಿದೇವಂ ಬೇಡಿಕೊಳ್ಳಿಂ ಎಂದೊಡೆ ಎಮ್ಮನ್ವಯಕ್ಕೆ ನೀನ್ ತಣ್ಣಿದೆಯಾಗು ಎಂದು ಬೇಡುವುದುಂ: ಪಂಪಭಾ, ೫. ೧೦೦ ವ)

ಬರಿ
[ನಾ] ಮಗ್ಗುಲು, ಪಕ್ಕೆ (ನೆತ್ತರಂ ಪಡೆಯದೆ ಆಕಾಶಕ್ಕೆ ಬಾಯಂ ತೆಱೆದು ಊಳ್ವ ಬಳ್ಳುಗಳುಮಂ ನರವುಮಂ ಬರಿಯುಮಂ ಪತ್ತಿ ತೆಗೆದು ಪೆಡಸಾರ್ವ ನರಿಗಳುಮಂ ತಾನೆ ಸೋದು: ಪಂಪಭಾ, ೧೩. ೫೬ ವ)

ಬರಿಸ
[ನಾ] ವರುಷ (ನೆಱೆದುವು ಪನ್ನೆರೞ್ಬರಿಸಂ ಉಗ್ರವಿರೋಧಿಜನಕ್ಕೆ ಮಿೞ್ತುಗಳ್ ನೆಱೆವವೊಲ್: ಪಂಪಭಾ, ೮. ೪೮ ವ)

ಬರಿಸು
[ಕ್ರಿ] ಬರಮಾಡಿಕೊಳ್ಳು (ಬರಿಸಿದ ಕಾರಣಮಾವುದೊ ತರುಣಿ ಮುನೀಶ್ವರನ ಮಂತ್ರಮೇದೊರೆಯೆಂದಾಂ ಮರುಳಿಯೆನೆ ಅಱಿದುಮಱಿಯದೆ ಬರಿಸಿದೆನಿನ್ನೇೞಿಮೆಂದೊಡಾಗದು ಪೋಗಲ್: ಪಂಪಭಾ, ೧. ೯೩)

ಬರೆ
[ನಾ] ಅಭ್ಯಾಸಕ್ಕಾಗಿ ತಿದ್ದು (ಬರೆಯದೆ ಬಂದ ಸುದ್ದಗೆಯ ಸೂತ್ರಮನೊಂದೆ ಮುಹೂರ್ತಮಾತ್ರದಿಂ ಬರಿಸಿದುದು: ಪಂಪಭಾ, ೭. ೩೪); [ನಾ] ಚಿತ್ರಿಸು (ಬರೆಯಲ್ ಬ್ರಹ್ಮಂಗಮೇಂ ಬರ್ಕುಮೇ ಎಂದು ಮುನ್ನಂ ವಿಚಿತ್ರ ಚಿತ್ರವಿದ್ಯಾಕೌಶಲಮಂ .. .. ಭಾವಿಸಿ ನೋಡಿ: ಆದಿಪು, ೪. ೪)


logo