logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಪಂದಿ
[ನಾ] ಹಂದಿ, [ವಿಷ್ಣುವಿನ] ವರಾಹಾವತಾರ (ಮೀನ್ ಆವೆ ಪಂದಿ ಎಂದು ಎನಿತಾನುಂ ತೆಱನಾಗಿ ಡೊಂಬವಿದ್ಯೆಯನಾಡಲ್ ನೀನಱಿವೆ: ಪಂಪಭಾ, ೭. ೫೭)

ಪಂದಿವೇಂಟೆ
[ನಾ] ಹಂದಿಯ ಬೇಟೆ (ಮತ್ತಂ ಪಂದಿವೇಂಟೆಯ ಮಾತಂ ಬಿನ್ನಪಂಗೆಯ್ವೆಂ: ಪಂಪಭಾ, ೫. ೪೫ ವ)

ಪಂದೆ
[ನಾ] ಹೇಡಿ (ರೌದ್ರಘೋಷಮ್ ಏರ್ವೆಸನಮಂ ಉಂಟುಮಾಡಿದುದು ಪಂದೆಗಮಂದಿನ ವೀರಗೋಷ್ಠಿಯೊಳ್: ಆದಿಪು, ೧೪. ೯೦)

ಪಂದೆಯಂ ಪಾವಡರ್
ಪುಕ್ಕಲನ ಮೇಲೆ ಹಾವು ಬೀಳು, ಮತ್ತಷ್ಟು ಗಾಬರಿಗೊಳಿಸು (ಸಭಾಸದರೆಲ್ಲಂ ಎಲೆಮಿಡುಕದೆ ಪಂದೆಯಂ ಪಾವಡರ್ದವೊಲ್ ಉಸಿರದಿರೆ: ಪಂಪಭಾ, ೬. ೫೯ ವ)

ಪಂಬಲ್
[ನಾ] ಹಂಬಲ, ಆಸೆ, ನಿರೀಕ್ಷೆ (ನೀಂ ಗಳ ಪಂಬಲನೆ ಬಿಸುಡಿಂ ಇನ್ ಎನ್ನ ಎಡೆಯೊಳ್: ಪಂಪಭಾ, ೯. ೮೫)

ಪಂಬಲಿಸು
[ಕ್ರಿ] ಹಂಬಲಿಸು, ತವಕಿಸು (ಅಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂಬಲಿಸದೆ ನಿದ್ದೆಗೆಟ್ಟು ನಿಡುಜಾಗರದೊಳ್ ತೊಡರ್ದು: ಪಂಪಭಾ, ೧. ೧೩೬)

ಪಕ್ಕ
[ನಾ] ಹತ್ತಿರ (ಕಲ್ಪಮಹೀಜದ ಪಕ್ಕದ ಇರ್ಕೆಲಂಬಿಡಿದು ಮಡಲ್ತು ತೋಱುವ ಲತಾವಳಿಗಳ್ಗೆಣೆಯಾಯ್ತು: ಆದಿಪು, ೨. ೪); [ನಾ] ಎದುರು, ಸಮಕ್ಷಮ (ನುಡಿ ನಿನಗಂ ದಿನೇಶತನಯಂಗಂ ಅದೆನ್ನಯ ಪಕ್ಕದೆ ಆದೊಡಂ ಮಿಡುಕದೆ ಕೇಳ್ವೆಂ ಅಲ್ಲಿ ಸಮಂ ಇರ್ವರುಂ: ಪಂಪಭಾ, ೧೩. ೨೮)

ಪಕ್ಕರೆ
[ನಾ] [ಪಕ್ಷರಕ್ಷೆ] ಪಕ್ಕದಲ್ಲಿ ಹಾಕುವ ಗುಳ, ಜೀನು (ಪಕ್ಕರೆಯಿಕ್ಕಿ ಬಂದುವು ಹಯಂ ಘಟೆ ಪಣ್ಣಿದುವಾಯುಧಂಗಳಿಂ ತೆಕ್ಕನೆ ತೀವಿ ಬಂದುವು ರಥಂ: ಪಂಪಭಾ, ೩. ೬೭)

ಪಕ್ಕಾಗು
[ಕ್ರಿ] ಆಶ್ರಯಿಸು (ಕುಳಿರ್ಕೋೞ್ವ ನಂದನಕಂ ಚಂದನಕಂ ಪಸುರ್ಪೆಸೆವ ಬಾೞ್ಜೊಂಪಕ್ಕಂ ಒಂದೊಂದೆ ತಣ್ಬನಿಯೊಳ್ ಕೋಡಿಸುತಿರ್ಪ ಬಿಜ್ಜಣಿಗೆಗಂ ಪಕ್ಕಾಗದೇಂ ಪೋಪರೇ: ಆದಿಪು, ೧. ೭೫); [ಕ್ರಿ] ಗುರಿಯಾಗು (ನೂಪುರರವವಿಳಸತ್ ವಾಮಪಾದಪ್ರಹಾರಕ್ಕಿದಱೊಳ್ ಪಕ್ಕಾಗಿ ಗೋತ್ರಸ್ಖಲನೆ ನೆಗೞೆ: ಆದಿಪು, ೪. ೯)

ಪಕ್ಕುಗೊಡು
[ಕ್ರಿ] ಎಡೆ ಮಾಡಿಕೊಡು (ಮನಂ ಮಱುಕಕ್ಕೆ ನೀಳ್ದ ಕಣ್ ಒಱೆದು ಉಗುವ ಅಶ್ರುವಾರಿಗೆ ತೊದಳ್ನುಡಿ ಲಲ್ಲೆಗೆ ಪಕ್ಕುಗೊಟ್ಟು: ಪಂಪಭಾ, ೪. ೧೨)


logo