logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಪಂಚಸಪ್ತತ್ಯುತ್ತರಷಟ್ಛತ
[ನಾ] ಆರುನೂರ ಎಪ್ಪತ್ತೈದು (ಅಸಂಖ್ಯಾತವರ್ಷಂಗಳ್ ಸಲೆ ಪಂಚಸಪ್ತತ್ಯುತ್ತರಷಟ್ಛತ ಬಾಣಾಸನೋತ್ಸೇಧನುಂ: ಆದಿಪು, ೬. ೫೮ ವ)

ಪಂಚಾಂಗಮಂತ್ರ
[ನಾ] ವೇದಕ್ಕೆ ಸಂಬಂಧಿಸಿದ ಐದು ಮಂತ್ರಗಳು: ಸ್ತುತಿ, ನೈವೇದ್ಯ, ಅಭಿಷೇಕ, ತರ್ಪಣ ಮತ್ತು ಸಮಾರಾಧನೆ (ಅರಾತಿಜನಕ್ಕೆ ಕಾಳಕೂಟಾಂಕುರಗಳುಮಂ ಪೋಲ್ತು ಪಂಚಾಂಗಮಂತ್ರಸ್ವರೂಪದೊಳ್ ಮೂರ್ತಿಮಂತ್ರಂಗಳಾದಂತೆ ಸೊಗಯಿಸಿ ಬಳೆಯೆ: ಪಂಪಭಾ, ೨. ೩ ವ)

ಪಂಚಾಂಗವ್ಯಾಕರಣ
[ನಾ] ಸೂತ್ರಪಾಠ, ಧಾತುಪಾಠ, ಉಣಾದಿಪಾಠ, ಗಣಪಾಠ ಮತ್ತು ಲಿಂಗಾನುಶಾಸನ ಎಂಬ ಐದು ಅಂಗಗಳುಳ್ಳ ವ್ಯಾಕರಣ (ಅಂತು ಪಂಚಾಂಗವ್ಯಾಕರಣದೊಳಂ ವೃತ್ತಭೇದಮಪ್ಪ ಛಂದೋವಿಚಿತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪ ಅಲಂಕಾರದೊಳಂ: ಪಂಪಭಾ, ೨. ೩೪ ವ)

ಪಂಚಾಂಶದಧಿಕಷಟ್ಛತ
[ನಾ] ಆರು ನೂರೈವತ್ತು (ಅಂತಾತನಿಂ ಬೞಿಯಂ ಕೆಲವು ಕಾಲಂ ಕೞಿಯೆ ಪಂಚಾಂಶದಧಿಕಷಟ್ಛತ ಚಾಪೋತ್ಸೇಧವಪುವುಂ: ಆದಿಪು, ೬. ೫೯ ವ)

ಪಂಚಾಣುವ್ರತ
[ನಾ] [ಜೈನ] ಗೃಹಸ್ಥರು ಅನುಸರಿಸಬೇಕಾದ ಅಹಿಂಸೆ ಸತ್ಯ ಅಸ್ತೇಯ ಬ್ರಹ್ಮಚರ್ಯ ಮತ್ತು ಅಪರಿಗ್ರಹವೆಂಬ ಐದಯ ವ್ರತಗಳು (ಪಂಚಾಣುವ್ರತಾದಿ ಪ್ರವರ್ತನ ಸ್ವಭಾವಸಂಯಮಮುಂ: ಆದಿಪು, ೧೫. ೧೩ ವ)

ಪಂಚಾಶತ್
[ನಾ] ಐವತ್ತು (ಪಶ್ಚಿಮಾಭಿಮುಖನಾಗಿ ಪೋಗಿ ಪಂಚಾಶದ್ಯೋಜನಾಯಾಮದೊಳಂ ದ್ವಾದಶಯೋಜನವಿಸ್ತಾರ ಅಷ್ಟಯೋಜನೋತ್ಸೇಧ ವಜ್ರಕವಾಟಪುಟಮುಂ: ಆದಿಪು, ೧೩. ೪೬ ವ)

ಪಂಚಾಶದಧಿಕಸಪ್ತಶತ
ಏಳುನೂರೈವತ್ತು (ಪಂಚಾಶದಧಿಕ ಸಪ್ತಶತ ಧನುರ್ವ್ಯಾಪ್ತಂಗಳುಂ ಏಕಚಾಪೋತ್ಸೇಧ ಚಿತ್ರಧರ್ಮಚಕ್ರಧರ ಯಕ್ಷಾದಿಷ್ಠಿತಂಗಳುಮಪ್ಪ: ಆದಿಪು, ೧೦. ೩೬ ವ)

ಪಂಚಾಶದಭ್ಯಧಿಕಸಪ್ತಶತ
[ನಾ] ಏಳುನೂರೈವತ್ತು (ಅಲ್ಲಿಂ ಬೞಿಯಂ ಅನೇಕ ಕೋಟಿ ಸಂವತ್ಸರಂಗಳ್ ಪೊಂದಿದಿಂ ಬೞಿಯಂ ಪಂಚಾಶದಭ್ಯಧಿಕಸಪ್ತಶತ ಕೋದಂಡಪ್ರಮಾಣಮೂರ್ತಿಯುಂ: ಆದಿಪು, ೬. ೫೬ ವ)

ಪಂಚಾಶ್ಚರ್ಯ
[ನಾ] [ಜೈನ] ಆಹಾರದಾನ ಸಮಯದಲ್ಲಿ ಆಗುವ ಐದು ಅತಿಮಾನುಷ ಸೋಜಿಗಗಳು: ದೇವದುಂದುಭಿ ಸ್ವನ, ಪುಷ್ಪವೃಷ್ಟಿ, ಸುವರ್ಣವೃಷ್ಟಿ, ಮೆಲುಗಾಳಿ, ದೇವಪ್ರಶಂಸೆ (ಸುರತೂರ್ಯಧ್ವಾನಂ ಎಯ್ತರ್ಪ ಅಲರ ಸರಿ ಪೊದಳ್ದಿರ್ದ ರೈಧಾರೆ ದೇವೇಂದ್ರರ ಅಹೋದಾನಪ್ರಸಿದ್ಧಧ್ವನಿ ಸುರಭಿಸಮೀರಪ್ರಚಾರಂ ಜಗಕ್ಕೆ ಅಚ್ಚರಿ ಪಂಚಾಶ್ಚರ್ಯಮೆತ್ತಂ ನೆಗೞೆ: ಆದಿಪು, ೪. ೯೮)

ಪಂಚಾಸ್ಯ
[ನಾ] ಸಿಂಹ (ಕದನಪ್ರಾರಂಭಶೌಂಡಂ ರಿಪುನೃಪಬಲ ದಾವಾನಲಂ ವೈರಿಭೂಭೃತ್ ಮದವತ್ ಮಾತಂಗಕುಂಭಸ್ಥಳ ದಳನಖರೋಗ್ರಾಸಿ ಪಂಚಾಸ್ಯಧೈರ್ಯಂ: ಪಂಪಭಾ, ೬. ೭೭)


logo