logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಪಂಚಲೋಹ
[ನಾ] ಕಿವಿಗೆ ಧರಿಸುವ ಓಲೆ ? (ಮುಖಚಂದ್ರನಂ ಚಂದ್ರಕವಳದಿಂ ತೊಡೆದು ಓರೊಂದೆ ವಜ್ರದ ಪಂಚಲೋಹಮುಮಂ ಅವರ್ಕೆ ಅಮರ್ಕೆವೆತ್ತ ಮುತ್ತಿನ ಮುಗುಳ್ಗಳುಮನಿಟ್ಟು: ಆದಿಪು, ೪. ೪೧ ವ)

ಪಂಚವರ್ಗಾಧಿಕಪಂಚಶತ
[ನಾ] ಐದು ನೂರ ಇಪ್ಪತ್ತೈದು (ಶಶಿವಿಶದಯಶಂ ನಿಜಕುಲವಿಶೇಷಕಂ ಕರುಣಿ ಪಂಚವರ್ಗಾಧಿಕಪಂಚಶತ ಶರಾಸನತನು: ಆದಿಪು, ೬. ೬೬)

ಪಂಚವಿಂಶತಿ
[ನಾ] ಇಪ್ಪತ್ತೈದು (ಪಂಚವಿಂಶತಿ ಯೋಜನ ಅವಗಾಹಮುಮಾಗಿ ಸಂದುತ್ತರಭರತಮಧ್ಯಮಖಂಡದ ನಟ್ಟನಡುವಣೆಡೆಯೊಳ್: ಆದಿಪು, ೧೩. ೬೯ ವ)

ಪಂಚವಿಂಶತ್ಯಧಿಕಷಟ್ಛತ
[ನಾ] ಆರುನೂರ ಇಪ್ಪತ್ತೈದು (ಆತನಿಂ ಬೞಿಯಂ ಅನೇಕ ಸಂವತ್ಸರಸಹಸ್ರಾತಿಕ್ರಮದೊಳ್ ಪಂಚವಿಂಶತ್ಯಧಿಕಷಟ್ಛತ ಧನುರುತ್ಸೇಧನುಂ: ಆದಿಪು, ೬. ೬೦ ವ)

ಪಂಚವಿಂಶತ್ಯನ್ವಿತಸಪ್ತಶತ
[ನಾ] ಏಳುನೂರ ಇಪ್ಪತ್ತೈದು (ಅನೇಕಾಬ್ಧಕೋಟಿಗಳ ಕಡೆಯೊಳ್ ಪಂಚವಿಂಶತ್ಯನ್ವಿತಸಪ್ತಶತ ಬಾಣಾಸನೋಚ್ಛ್ರಯನುಂ: ಆದಿಪು, ೬. ೫೭ ವ)

ಪಂಚವಿಶತ್ಯುತ್ತರಪಂಚಶತ
[ನಾ] ಐನೂರ ಇಪ್ಪತ್ತೈದು (ಪಂಚವಿಂಶತ್ಯುತ್ತರಪಂಚಶತ ಶರಾಸನೋತ್ಸೇಧನಪ್ಪ ಬಾಹುಬಲಿಕುಮಾರನ ಮೇಗೆ: ಆದಿಪು, ೧೪. ೧೦೭ ವ)

ಪಂಚಶತ
[ನಾ] ಐನೂರು (ಭರತೇಶ್ವರಂ ಪಂಚಶತ ಶರಾಸನೋತ್ಸೇಧನಪ್ಪುದಱಿಂ: ಆದಿಪು, ೧೪. ೧೦೭ ವ)

ಪಂಚಶರ
[ನಾ] ಮನ್ಮಥ (ಪಂಪಂ ಧಾತ್ರೀವಳಯನಿಳಿಂಪಂ ಚತುರಂಗಭಯಭಯಂಕರಣಂ ನಿಷ್ಕಂಪಂ ಲಲಿತಾಲಂಕರಣಂ ಪಂಚಶರೈಕರೂಪಂ: ಪಂಪಭಾ, ೧೪. ೪೯)

ಪಂಚಷಟ್
[ನಾ] ಐದಾರು (ಶತಯೋಜನ ವಿಷ್ಕಂಭದೊಳಂ ಪಂಚಷಡ್ಯೋಜನ ವಿಸ್ತಾರದೊಳಂ ಅಷ್ಟಯೋಜನ ಉತ್ಸೇಧದೊಳಂ: ಆದಿಪು, ೭. ೭೩ ವ)

ಪಂಚಸಪ್ತತ್ಯುತ್ತರಪಂಚಶತ
[ನಾ] ಐನೂರ ಎಪ್ಪತ್ತೈದು (ಅಸಂಖ್ಯೇಯ ವರ್ಷವಿರಾಮದೊಳ್ ಪಂಚಸಪ್ತತ್ಯುತ್ತರಪಂಚಶತ ಶರಾಸನೋತ್ಸೇಧಸಂಹನನುಂ: ಆದಿಪು, ೬. ೬೧ ವ)


logo