logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಪತ್ರಚ್ಛೇದ್ಯ
[ನಾ] ಎಲೆಗಳಲ್ಲಿ ಚಿತ್ರ ಬಿಡಿಸುವುದು (ಹಸ್ತಕೌಶಲ ಕಳಿತಮಪ್ಪ ಚಿತ್ರಕಳಾಪ ಪತ್ರಚ್ಚೇದ್ಯಾದಿ ಸಮನ್ವಿತಮಪ್ಪ ಶಿಲ್ಪಮುಮಂ: ಆದಿಪು, ೮. ೬೪ ವ)

ಪತ್ರಭಂಗ
[ನಾ] ಕೆನ್ನೆ ಮೊದಲಾದವುಗಳ ಮೇಲೆ ಬರೆಯುವ ಚಿತ್ರ, ಮಕರಿಕೆ (ಶರದದ ಬಿಸಿಲಳುರೆ ಪೊಣ್ಮಿದ ಘರ್ಮಬಿಂದುಗಳಿಂ ನಾಂದು ಪುಚ್ಚೞಿದರೆವೊರೆಕನಾದ ಕುಂಕುಮಪತ್ರಭಂಗದ ಕೊರಗಿದ ನಗೆಮೊಗಂಗಳುಮಂ: ಆದಿಪು, ೧೧. ೭೦ ವ)

ಪತ್ರಲೇಖಾವಳಿ
[ನಾ] ಪತ್ರಭಂಗ (ಲಲಾಟಕುಂಕುಮಸ್ವೇದಜಳಂ ಕಿಡಿಸಿದುದು ಕದಪಿನೊಳ್ ಪೊೞ್ತಡೆ ಬರೆದರಸಿಯರ ಪತ್ರಲೇಖಾವಳಿಯಂ: ಆದಿಪು, ೧೧. ೫೪)

ಪತ್ರಿಲ
[ನಾ] ಗಿಡಮರ (ಉದ್ಯಾನಕೇಳೀಚಳತ್ ಪತ್ರಿಲಶಾಖಾಕಾರ ಜೈತ್ರದ್ವಿರದಕದಳಿಕಾಡಂಬರಂ: ಆದಿಪು, ನರಸಿಂ. ೧೩. ೮)

ಪಥಚ್ಯುತ
[ಗು] ದಾರಿ ತಪ್ಪಿದ (ಉಪಗೂಹನಮುಂ ಸದ್ಧರ್ಮ ಪಥಚ್ಯುತ ಭವ್ಯಸಂಹತಿ ಸಂಸ್ಥಾಪನಮುಂ: ಆದಿಪು, ೫. ೫೮)

ಪಥಪರಿಶ್ರಮ
[ನಾ] ಪ್ರಯಾಣಿಸಿದ ಆಯಾಸ (ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಮೆಲ್ಲಮಂ ಕಳೆದು: ಪಂಪಭಾ, ೩. ೧೮ ವ)

ಪದ
[ನಾ] ಸ್ಥಿತಿ (ಕ್ಷಮಿಯಿಪುದೆಂದು ಕಾಲ್ಗೆಱಗಿದ ನಿನ್ನದೊಂದುಪಶಮಮಂ ಪಡೆದತ್ತು ಮನುಷ್ಯಜ್ನಮಂ ಮಱುಗಿಸಿ ನಿನ್ನನೀ ಪದಕ್ಕೆ ತಂದುದು: ಆದಿಪು, ೩. ೪೦); [ನಾ] ಪದವಿ (ಅೞಿಪದೆ ಪದ ಗೞಿಪದೆ ಪೊಂಪುೞಿವೋಗೆ ಯಶಃಪ್ರಕಾಶಂ ಈಗಳೆ ಧರೆಯಂ ಪೞಿಕೆಯ್ದು: ಆದಿಪು, ೪. ೮೭); [ನಾ] ಹೆಜ್ಜೆ (ಷಟ್ಖಂಡಮಂಡಳ ವಿಜಯವಿಳಾಸ ವಿಹಾರಶೀಲಂ ಕತಿಪಯಪದಂಗಳಂ ವಿಹಾರಿಸಿ: ಆದಿಪು, ೧೧. ೨೭ವ); [ನಾ] ಸುರತದ್ರವ (ಅಮರ್ದಿನ ಧಾರೆಯಂತೆ ನುಡಿಯಿಂಪು ಅಮರ್ಧಂ ತಳಿದಂತೆ ಸೋಂಕಿನಿಂಪು ಅಮರ್ದಿನ ಧಾರೆಯಂತೆ ಪದದಿಂಪು: ಆದಿಪು, ೧೨. ೨೭); ರೀತಿ, [ನಾ] ಹದ (ನೆಲನಂ ನಿಱುಗೆಯಂ ನಡೆವೊಂದು ಪದಮುಮಂ ಸೋವಳಿ ಮೇವಳಿ ಬಿಸುವಳಿಯಂ; ಪಂಪಭಾ, ೫. ೪೬); [ನಾ] ಸಂದರ್ಭ (ಆವುದು ಉಣ್ಬ ಉಣಿಸು ಎನೆ ಪೇೞ್ವೆನೆಂಬ ಪದದೊಳ್ ನರಕಾಂತಕಂ ಅಗ್ನಿದೇವನಂ ಕಾಣಲೊಡಂ: ಪಂಪಭಾ, ೫. ೭೧ ಮತ್ತು ೭೧ ವ); [ನಾ] ಸಮಂಜಸ, ಸೂಕ್ತ (ಜಳಪ್ರವೇಶಂ ಇಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥಂ ಅನಾಥನಾಗಿ ತೊಟ್ಟನೆ ಮುೞುಪಂತೆವೊಲ್ ಮುೞುಗಿದಂ: ಪಂಪಭಾ, ೧೩. ೧೦೬)

ಪದಂಗಳಂ ಪುಗಿಸು
[ಕ್ರಿ] ಪದವಿಗಳನ್ನು ಆರೋಪಿಸು (ಪೂರ್ವ ಭೂಮಿಪರ ಪದಂಗಳಂ ಪುಗಿಸಿ ಪೋಲಿಪೊಡೆ ಈತನುದಾತ್ತ ಪೂರ್ವ ಭೂಮಿಪರನೊಳ್ಪಿನೊಳ್ ತಗುಳೆವಂದೊಡೆ ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್: ಪಂಪಭಾ, ೧. ೧೪)

ಪದಂಗಾಸು
[ಕ್ರಿ] ಹದವಾಗಿ ಕಾಸು (ಉದಯಾದ್ರಿಯೊಳ್ ಪದಂಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಗೆ ಹಿಮಾಂಶುಮಂಡಲಂ: ಪಂಪಭಾ, ೩. ೮೧)

ಪದಕೊರಲ್
[ನಾ] ಹದವಾದ ಶಾರೀರ (ಪದಕೊರಲ್ ಇಂಪಂ ಅಪ್ಪುಕೆಯೆ ಕೊಂಕು ನಯಂ ಗಮಕಂಗಳಿಂ ಪೊಡರ್ ಕೊದಳ್ ಎೞೆದಿಕ್ಕಿದಂತೆ ಸುತಿಯೊಳ್ ಸಮವಾಗಿರೆ: ಪಂಪಭಾ, ೭. ೮೮)


logo