logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಪತ್ತಿ
[ನಾ] ಪದಾತಿ ಸೈನ್ಯ (ಪತ್ತಿ ಶಸ್ತ್ರ ದ್ಯುತಿಪರಿಕg ಸಾಂದ್ರೀಭವಚ್ಚಂಡರೋಚಿಃ ಕಿರಣೌಘಂ: ಆದಿಪು, ೪. ೨೪)

ಪತ್ತಿದ ಕಣ್
[ನಾ] ಮೆತ್ತಿಕೊಂಡ ಕಣ್ಣು (ಆಕೆಯ ಪತ್ತಿದ ಕಣ್ಣುಮಂ ಉೞ್ಗಿದ ಮನಮುಮಂ ಜೋಲ್ದ ನಾಣ್ಪುಮಂ ನೀಳ್ದ ಸರಮುಮಂ ಅಱಿದು: ಪಂಪಭಾ, ೪. ೪೦ ವ)

ಪತ್ತಿಸು
[ಕ್ರಿ] ರಂಜಿಸು, ಸಂತಸಗೊಳಿಸು (ಉತ್ತಮವಿದ್ಯೆಗಳ್ಗೆ ಗುಱಿಯಾದ ತನೂಭವರೆಯ್ದೆ ಚಿತ್ತಮಂ ಪತ್ತಿಸೆ: ಆದಿಪು, ೮. ೬೧); [ಕ್ರಿ][ಕಾಮದ] ಬೆಂಕಿ ಹೊತ್ತಿಸು (ನಯದೊಳೆ ನೋಡಿ ನೋಟದೊಳೆ ಮೇಳಿಸಿ ಮೇಳದೊಳ್ ಅಪ್ಪುಕೆಯ್ದು ಗೊಟ್ಟಿಯೊಳ್ ಒಳಪೊಯ್ದು ಪತ್ತಿಸುವ ಸೂಳೆಯರಂದಂ: ಪಂಪಭಾ, ೪. ೯೪)

ಪತ್ತು
[ಕ್ರಿ] ಒಡಗೂಡು (ಸುರತಾಮೃತದೊಳ್ ತಣಿದು ಅೞ್ಕಱಿಂ ಜಿಗಿಲ್ತಂತಿರೆ ಪತ್ತಿ ಮೆಯ್ಗಳೆರಡಾದೊಡಮೇನಸುವೊಂದೆ: ಆದಿಪು, ೩. ೫); [ಕ್ರಿ] ಅಂಟಿಕೊ (ಮಱಸಿರ್ದಂಬರಮೆಯ್ದೆ ನಾಂದ ತನುವಂ ಪತ್ತಿರ್ದು ಕಣ್ಗೆಲ್ಲಿಯುಂ ತೆಱಪಂ ಮಾಡಿ ಮನೋಜಚಕ್ರಿಯ ಜಯಶ್ರೀರಾಜ್ಯಚಿಹ್ನಂಗಳಂ ಮೆಱೆದು: ಆದಿಪು, ೧೧. ೧೫೩); [ಕ್ರಿ] ಲಭ್ಯವಾಗು (ತವೆ ಮಾಱಾಂತ ಬಲಂ ಕಱುತ್ತಿಱಿದು ತನ್ನಾಳ್ದಂ ಕರಂ ಮೆಚ್ಚೆ ಗೆಲ್ದವನಂ ಶ್ರೀವಧು ಪತ್ತುಗುಂ: ಪಂಪಭಾ, ೧೦. ೪೪); [ಕ್ರಿ] ಸೇರು (ಹರನೊಳೆ ಪತ್ತಿ ತೆತ್ತಿಸಿದ ಚಿತ್ತಮಂ ಇರ್ಬಗಿಯಾಗೆ ಮೋಹಮೊತ್ತರಿಸೆ ಸುಯೋಧನಂಗೆ: ಪಂಪಭಾ, ೧೩. ೬೩)

ಪತ್ತುಗೆ
[ನಾ] ಪ್ರಾಪ್ತಿ (ಮಗಳ ಮನೋರಮೆಯ ಮದುವೆಗಂ ರಾಜ್ಯದ ಪತ್ತುಗೆಗಂ ಗುರೂಪರೋಧಕ್ಕಗಿದು: ಆದಿಪು, ೬. ೨); [ನಾ] ಸಂಬಂಧ (ಎನ್ನ ನಿನ್ನ ಪತ್ತುಗೆಯ ತೊಡರ್ಪದಿಂದು ಪಱಿದತ್ತು ಮನಂ: ಆದಿಪು, ೧೨. ೩೭)

ಪತ್ತುವಿಡಿಸು
[ಕ್ರಿ] [ಪತ್ತು+ಬಿಡಿಸು] ಸಂಬಂಧ ತಪ್ಪಿಸು (ದೆಸೆಗಳ ಸಂದಂ ಪಱಿದು ಆಗಸದಿಂದಂ ಪತ್ತುವಿಡಿಸುವಂತೆವೊಲ್ ಇಳೆಯಂ: ಆದಿಪು, ೧೨. ೫೪)

ಪತ್ತುವಿಡು
[ಕ್ರಿ] ಸಂಬಂಧ ತಪ್ಪು (ಮೌನದೊಳಿಂತು ನೀನಿರೆ ರುವದ್ಭೃಂಗಾಳಿಯಿಂ ಪತ್ತುವಿಟ್ಟುಡುಗಿರ್ದಬ್ಜಮನೆಯ್ದೆ ಪೋಲ್ತುದು: ಆದಿಪು, ೩. ೩೧); [ಕ್ರಿ] ದೂರಮಾಡು (ಶ್ರೀಮತ್ಯಾರ್ಯೆಯುಂ ಸಮ್ಯಕ್ತ್ವಮಾಹಾತ್ಮ್ಯದಿಂ ಸ್ತ್ರೀರೂಪಮಂ ಪತ್ತುವಿಟ್ಟು: ಆದಿಪು, ೫. ೭೦ ವ); [ಕ್ರಿ] ನಿವಾರಣೆಗೊಳ್ಳು, ಪರಿಹಾರವಾಗು (ಅಂತು ನಿಜಶೌರ್ಯಮದಜ್ವರಂ ಮಂತ್ರಿವರ್ಗವೈದ್ಯವಚನೌಷಧಿಗಳಿಂ ಪತ್ತುವಿಡೆ: ಆದಿಪು, ೧೨, ೧೦೯ ವ); [ಕ್ರಿ] ಮುಗಿದುಹೋಗು (ಮಾನಕಷಾಯಮವರ್ಗಿನ್ನುಂ ಪತ್ತುವಿಟ್ಟುದಲ್ತದಱಿಂ ಕೇಲಜ್ಞಾನೋತ್ಪತ್ತಿ ಆಗದಿರ್ದುದು: ಆದಿಪು, ೧೪. ೧೪೩ ವ); [ಕ್ರಿ] ಬಿಟ್ಟು ಹೋಗು (ಆಗಳ್ ತನ್ನ ರಾಗರಸಮಂ ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ ಕೆಂಪು ಪತ್ತುವಿಡೆ: ಪಂಪಭಾ, ೪. ೫೦ ವ); [ಕ್ರಿ] ಅಂಟಿರುವುದನ್ನು ಕೊಡವಿಕೊ (ಸತ್ತುಂ ನೆಲನಂ ಪತ್ತುವಿಡೆಂ ಎಂಬಂತೆ ನೆಲನಂ ಪತ್ತಿ ಮೂರ್ಛಾಗತನಾಗಿರ್ದ: ಪಂಪಭಾ, ೧೩. ೯೭ ವ)

ಪತ್ತೆಂಟು
[ನಾ] ಅನೇಕ (ಆದರದಿಂದೆ ಕೊಂಡನವಱೊಳ್ ಪತ್ತೆಂಟು ರತ್ನಂಗಳಂ: ಆದಿಪು, ೧೨. ೧೨೦)

ಪತ್ರ
[ನಾ] ಎಲೆ (ಲಲಿತ ವಿಚಿತ್ರ ಪತ್ರಫಲಪುಷ್ಪಯುತಾಟವಿ ಸೊರ್ಕಿದಾನೆಯಂ ಬೆಳೆವುದು: ಪಂಪಭಾ, ೧. ೫೪)

ಪತ್ರಚ್ಛೇದ
[ನಾ] ಎಲೆಗಳ ಆಕಾರದಲ್ಲಿ ಕತ್ತರಿಸುವುದು (ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ: ಪಂಪಭಾ, ೨. ೩೪ ವ)


logo