logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಪಂಚಗವ್ಯ
[ನಾ] ಗೋವಿನ ಐದು ಉತ್ಪನ್ನಗಳಾದ ಹಾಲು ಮೊಸರು, ಬೆಣ್ಣೆ, ಗಂಜಳ ಮತ್ತು ಸೆಗಣಿ (ಬೀದಿಗಳೊಳೆಲ್ಲಂ ಗಂಧೋದಕ ಪಂಚಗವ್ಯಂಗಳಿಂ ತಳಿಯಿಸಿ: ಪಂಪಭಾ, ೪. ೫ ವ)

ಪಂಚಗುರು
[ನಾ] ಪಂಚಪರಮೇಷ್ಠಿಗಳು: ಅರ್ಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ ಮತ್ತು ಸರ್ವಸಾಧುಗಳು (ಪಂಚಗುರುಸಮಕ್ಷದೊಳ್ ಬಾಹ್ಯಾಂಭ್ಯಂತರಪರಿಗ್ರಹ ಪರಿತ್ಯಾಗಪುರಸ್ಸರಂ ವೀರಸಂಸ್ಥಾನಾರೂಢನಂ ಮಹಾಬಳನಂ ಜಾತರೂಧರನಂ ಮಾಡಿ: ಆದಿಪು, ೨. ೫೧ ವ)

ಪಂಚತ್ವ
[ನಾ] ಪಂಚತೆ, ಸಾವು (ಖಳಂ ಪಂಚತ್ವಮನೈದಿ ಮರುಚ್ಚಂಚಳಮನನೀಗಳಲ್ತೆ ವಾನರನಾದಂ: ಆದಿಪು, ೫. ೧೮)

ಪಂಚದಶ
[ನಾ] ಹದಿನೈದು (ಮತ್ತಂ ಚತುರಶೀತಿಸಹಸ್ರ ಗುಣಮಣಿಭೂಷಣವಿಭೂಷಿತನುಂ ಅಷ್ಟಾದಶಸಹಸ್ರ ಶೀಲರತ್ನಾಕರನುಂ ಆಗಿ ಪಂಚದಶಪ್ರಮಾದಂಗಳಂ ಬಂಚಿಸಿ: ಆದಿಪು, ೬. ೨೯ ವ)

ಪಂಚಧನುಶ್ಶತ
[ನಾ] [ಜೈನ] ಐನೂರು ಧನುಸ್ಸು (ಪಂಚಧನುಶ್ಶತಂ ಪವಣ್ಣೆಲೆ ನರರ್ಗೆಂದೊಡೆ ಇನ್ನಿಮಿರೆ ಬಣ್ಣಿಸಲಾನಱಿಯೆಂ ವಿದೇಹಮಂ: ಆದಿಪು, ೧. ೫೨)

ಪಂಚನಮಸ್ಕೃತಿ
[ನಾ] [ಜೈನ] ಪಂಚನಮಸ್ಕಾರಗಳು: ಣಮೋ ಅರಹಂತಾಣಂ, ಣಮೋ ಸಿದ್ಧಾಣಂ, ಣಮೋ ಅಯಾರಿಯಾಣಂ, ಣಮೋ ಉವಜ್ಝಾಯಾಣಂ, ಣಮೋ ಳೋಏ ಸಬ್ಬಸಾಹೂಣಂ ಎಂಬ ಐದು ಮಂತ್ರಗಳು (ಮುನಿವೃಂದೋಚ್ಚಾರಿತ ಪಂಚನಮಸ್ಕೃತಿಗಾಂತು ಕಿವಿಯನರ್ಹತ್ಪದಮಂ ನೆನೆಯುತ್ತುಂ: ಆದಿಪು, ೨. ೫೭)

ಪಂಚಪಂಚಾಶತ್
[ನಾ] ಐವತ್ತೈದು (ಪ್ರತ್ಯೇಕ ಶೀರ್ಷಕ ಅವಘಾಟಕ ಪ್ರಕಾಂಡ ತರಳತರ ಬಂಧ ಉಪಪದಪಂಚಕ ಸಮೇತಂಗಳಾಗಿ ಪಂಚಪಂಚಾಶತ್ಪ್ರಮಾಣಂಗಳೊಳಾದ ಹಾರಂಗಳುಮಂ: ಆದಿಪು, ೮. ೫೪ ವ)

ಪಂಚಪದಂಗಳ್
[ನಾ] [ಜೈನ] ಪಂಚನಮಸ್ಕಾರ (ಮಂಗಳಕಾರಣ ಪಂಚಪದಂಗಳಂ ಅಪವರ್ಗಮಾರ್ಗವಿರಚಿತ ಸೋಪಾನಂಗಳಂ ಅಕ್ಷಯಮಂತ್ರೊದಂಗಳಂ: ಆದಿಪು, ೨. ೫೪)

ಪಂಚಪಾಂಡವರು
[ನಾ] ದ್ರೌಪದಿಯಲ್ಲಿ ಪಾಂಡವರು ಧರ್ಮರಾಯನೇ ಮೊದಲಾಗಿ ಕ್ರಮವಾಗಿ ಪಡೆದ ಪ್ರತಿವಿಂಧ್ಯ, ಶ್ರುತಸೋಮ, ಶ್ರುತಕೀರ್ತಿ, ಶತಾನೀಕ ಮತ್ತು ಶ್ರುತಸೇನ ಎಂಬ ಮಕ್ಕಳು (ಶ್ರುತಸೋಮಕಪ್ರಮುಖರಪ್ಪ ಪಂಚಪಾಂಡವರಂ ಪಾಂಡವರೆ ಗೆತ್ತು ಕೊಂದು ತದುತ್ತಮಾಂಗಂಗಳಂ ಕೊಂಡು: ಪಂಪಭಾ, ೧೩. ೧೦೬ ವ)

ಪಂಚಭೂತ
[ನಾ] ಪೃಥ್ವಿ, ಅಪ್ಪು, ತೇಜಸ್, ವಾಯು, ಆಕಾಶಗಳೆಂಬ ಪ್ರಕೃತಿಯ ಐದು ಮೂಲವಸ್ತುಗಳು (ಪರಮಾನಂದಪರಂಪರೆ ದೊರೆಕೊಂಡಂತಿತ್ತು ಪಂಚಭೂತಂಗಳೊಳಂ: ಆದಿಪು, ೭. ೩೭)


logo