logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಪಡಲ್ವಡಿಸು
[ಕ್ರಿ] ಕೆಡವು, ಕತ್ತರಿಸು (ಅತಿನಿಬಿಡ ಬಾಳಕದಳೀಷಂಡಂಗಳಂ ವನದುರ್ಗಂಗಳೆಂದೆ ಪಡಲ್ವಡಿಸಿಯುಂ: ಆದಿಪು, ೮. ೪೧ ವ); [ಕ್ರಿ] ಚೆಲ್ಲಾಪಿಲ್ಲಿಯಾಗಿಸು (ಭೀಕರಕರ್ಮದ್ವಿಷರಂ ಪಡಲ್ವಡಿಸಲುಂ ಭವ್ಯರ್ಕಳಂ ಘೋರಸಂಸರಣ ಅಂಭೋನಿಧಿಪಾರಮಂ ಸಲಿಸಲುಂ: ಆದಿಪು, ೯. ೬೧)

ಪಡಲ್ವಡು
[ಕ್ರಿ] ಧ್ವಂಸವಾಗು (ಬಲ್ವರಿಕೆಯೊಳರಿ ನೃಪರ ಪಡಲ್ವಡೆ ತಳ್ತಿಱಿದು ರಣದೊಳಾ ವಿಕ್ರಮಮಂ ಸೊಲ್ವಿನಮಾವರ್ತಿಸಿದಂ ನಾಲ್ವತ್ತೆರಡಱಿಕೆಗಾಳೆಗಂಗಳೊಳೀತಂ: ಪಂಪಭಾ, ೧. ೨೫);

ಪಡಿ
[ನಾ] [ಪ್ರತಿ] ಕದ (ತಮಿಸ್ರಗುಹೆಯ ವಜ್ರದ ಪಡಿ ತತ್ ಕ್ಷಿತಿಧರದೆರ್ದೆಯಂತೆ ಚಮೂಪತಿಯಿಂ ತೆಱೆದತ್ತು: ಆದಿಪು, ೧೪. ೫೭)

ಪಡಿಗ
[ನಾ] ಪೀಕದಾನಿ (ಎರಡನೆಯ ಮೊಗಸಾಲೆಯೊಳಿಟ್ಟ ಪೊನ್ನ ಪಡಿಗಂಗಳೊಳಮಿಕ್ಕಿದ ಪೞಿಯ ಸುಖಾಸನಂಗಳೊಳಂ: ಪಂಪಭಾ, ೪. ೪೩ ವ)

ಪಡಿಗರ್ಚ್ಚು
[ನಾ] ಮುಸುರೆ, ಕಲಗಚ್ಚು ? (ಇದಿರಾಂತ ಮಾರ್ಪಡೆಯೆಲ್ಲಮಂ ಜವನ ಪಡೆಗೆ ಪಡಿಗರ್ಚ್ಚಿಕ್ಕಿದಂತೆ ಇಕ್ಕಿ ನಿಂದ ನರನಂದನನಂ ಕಂಡು: ಪಂಪಭಾ, ೧೧. ೯೪ ವ)

ಪಡಿಚಂದ
[ನಾ] [ಪ್ರತಿಚ್ಛಂದ] ಪ್ರತಿಕೃತಿ, ಪ್ರತಿಬಿಂಬ (ಅಣ್ಮಿನ ಪಡೆಮಾತದೊಂದೆ ನೆವಮಾಗಿರೆ ಕೆಯ್ದುವನಿಕ್ಕಿ ಸತ್ತ ಸಾವಿನ ಪಡಿಚಂದಮಾಗಿಯುಂ ಇದೇಂ ನಿಮಗೞ್ತಿಯೊ ಗಂಡವಾತುಗಳ್: ಪಂಪಭಾ, ೧೨. ೪೧); [ನಾ] ಮಾದರಿ (ನೀನುಂ ಆಜಿಗೆ ಸೆಡೆದಿರ್ದೆಯಪ್ಪೊಡೆ ಇರು ಚಕ್ರನಿಘಾತದಿಂ ಇಕ್ಕಿ ಬೀರಂ ಉರ್ವಿಗೆ ಪಡಿಚಂದಮಾಗೆ ತಱಿದೊಟ್ಟಿ ಜಯಾಂಗನೆಗೆ ಆಣ್ಮನಾದಪೆಂ: ಪಂಪಭಾ, ೧೨. ೨೦೮)

ಪಡಿದೆಱೆ
[ಕ್ರಿ] [ಪಡಿ+ತೆಱೆ] ಬಾಗಿಲು ತೆಗಿ (ಪಡಿದೆಱೆದಂದದಿಂದಂ ತೆಱೆದತ್ತು ಪೊದಳ್ದ ಸಂಕೆಯಿಂ ನಡುಕಂ: ಪಂಪಭಾ, ೫. ೧೫)

ಪಡಿಯಱ
[ನಾ] [ಪ್ರತೀಹಾರ] ಕಾವಲುಗಾರಿಕೆ (ಬನದ ಪಡಿಯಱನನಂಗಂ ನಿನಗಿತ್ತೊಡೆ ಪುಗಲಿಂ ಎಂಬುದೇಂ ದೋಷಮೆ: ಆದಿಪು, ೧೧. ೧೩೫);

ಪಡಿವಡೆ
[ನಾ] [ಪಡಿ+ಪಡೆ] ಪ್ರತಿ ಸೈನ್ಯ, ಶತ್ರು ಸೈನ್ಯ (ಮದಕರಿಯಂ ಹರಿಯಂ ಪಡಿವಡೆಗುರ್ಚಿದ ಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ: ಪಂಪಭಾ, ೧. ೧೯)

ಪಡಿಸಣ
[ನಾ] [ಪ್ರತೀಕ್ಷಣ} ಮೇಲ್ವಿಚಾರಣೆ (ಮನೋಹರಿಯಂ ಪಡಿಸಣವಂ ನೋಡಲುಂ ಮಾಳತಿಕೆಯಂ ಬಡ್ಡಿಸಲುಂ: ಆದಿಪು, ೭.. ೨೧ ವ)


logo