logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಧಾರಾಜಳಂ
[ನಾ] [ಮಳೆಯಂತೆ] ಸುರಿಯುವ ನೀರು (ಎಯ್ತಂದರಂ ತೊಱೆಕೊಳ್ವಂತಿರೆ ಕೊಂಡುವು ಅಂದು ಅರಿಗನೆಚ್ಚ ಉಗ್ರೇಷುಧಾರಾಜಳಂ: ಪಂಪಭಾ, ೫. ೨೧)

ಧಾರಾಸಾರ
[ನಾ] ಧಾರಾಕಾರವಾದ ಮಳೆ (ತದಂಘ್ರಿಪದ ದಳಂ ನವಕುಸುಮಾಳಿಗಳೆನಿಸಿದುವು ಅವಿರಳತರ ರತ್ನಪುಷ್ಪ ಧಾರಾಸಾರಂ: ಆದಿಪು, ೧೦. ೩)

ಧಾರೆ
[ನಾ] ಆಯುಧಧ ಅಲಗು (ಇರ್ಪತ್ತೊಂದು ಸೂೞ್ವರಂ ಪೇೞೆ ಪೆಸರಿಲ್ಲದಂತು ಕೊಂದು ತಂದೆಯ ಪಗೆಗೆಂದಲ್ಲಿಯೆ ತಂದು ನಿಜನಿಶಿತಪರಶುಧಾರೆಗಳಿಂ ನೆತ್ತರ್ ಸೂಸಿ ಪಾಯೆ ಕಡಿದು: ಪಂಪಭಾ, ೯. ೧೦೪ ವ); [ನಾ] ಪ್ರವಾಹ (ಅವರ ನೆತ್ತರ ಧಾರೆಯೊಳ್ ತೀವಿ ತನ್ನ ತಾಯಂ ನೀರಿೞಿಪಲುಂ ತಾನುಂ ಮಿಂದು ತಂದೆಗೆ ನೀರ್ಗುಡಲುಂ ಎಂದು ಮಾಡಿದ: ಪಂಪಭಾ, ೯. ೧೦೪ ವ)

ಧಾರ್ತರಾಷ್ಟ್ರ
[ನಾ] ಧೃತರಾಷ್ಟ್ರನ ಮಗ, ದುರ್ಯೋಧನ (ಊರುಯುಗ್ಮಂ ಮುಱಿದೆತ್ತಂ ನುಚ್ಚುನೂಱಾಗೆ ಕೆಡೆದಂ ಇಳಾಭಾಗದೊಳ್ ಧಾರ್ತರಾಷ್ಟ್ರಂ: ಪಂಪಭಾ, ೧೩. ೯೬)

ಧಿಷಣ
[ನಾ] ಪ್ರತಿಭಾವಂತ (ಧಿಷಣರ ಕೃತಿಗಳೊಳೆಸೆವ ಅಭಿಲಷಿತಗುಣಂಗಳನೆ ಬಿಸುಟು ಮಾತ್ಸರ್ಯ ಮಹಾವಿಷಮಮತಿಯಿಂದೆ ದೋಷಾಮಿಷಮನೆ ಪೊರ್ದಿರ್ಪುವಲ್ತೆ ಕುಕವಿಬಕಂಗಳ್: ಆದಿಪು, ೧. ೨೨)

ಧುರ
[ನಾ] ಯುದ್ಧ (ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್ ಎಂದು ಶಕ್ತಿಯನಿತ್ತಂ: ಪಂಪಭಾ, ೧. ೧೦೩)

ಧುರಂಧರ
[ನಾ] ಹೊಣೆಗಾರ, ಭಾರ ಹೊತ್ತವನು (ಬಲದೇವ ವಾಸುದೇವರಾಗಿ ಪುಟ್ಟಿ ನಿಜಗುರುಪರೋಕ್ಷದೊಳ್ ಧರಾಭಾರಧುರಂಧರರಾಗಿರೆ: ಆದಿಪು, ೩. ೭೬ ವ)

ಧುರಭರ
[ನಾ] ಯುದ್ಧಕಾರ್ಯ (ಕರೆದೊಡೆ ಜೂದಿಂಗಂ ಧುರಭರಕೆ ಆಖೇಟಕ್ಕೆ ಭೂಭುಜಂಗೆ ಆಗದು ಮೆಯ್ಗರೆದಿರಲೆಂಬ ಪುರಾತನ ಗುರುವಚನಂ ತನಗೆ ನಿಟ್ಟೆಪಟ್ಟುದಱಿಂದಂ: ಪಂಪಭಾ, ೬. ೭೧)

ಧೂಪ
[ನಾ] ಸುವಾಸನೆ (ಧೂಪದ ಸುಯ್ಯುಮಂ ರತಿಯ ಸೌಭಾಗ್ಯಮುಮಂ ಮನೋಮಥನ ಮದನ ಮೋಹನ ಸಂತಾಪನ ವಶೀಕರಣಂಗಳೆಂಬ ಕಾಮದೇವಂ ಅಯ್ದು ಅರಲಂಬಿಂ ಶಕ್ತಿಗಳುಮಂ ಒಂದುಮಾಡಿ ಲೋಕಮೆಲ್ಲಮಂ ಮರುಳ್ಮಾಡಲೆಂದು ಪೆಣ್ಮಾಡಿದಿನಕ್ಕುಂ: ಪಂಪಭಾ, ೪. ೭೫ ವ)

ಧೂಪಗುಂಡಿಗೆ
[ನಾ] ಧೂಪದ ಪಾತ್ರೆ (ಸೂರ್ಯಕಾಂತದ ಧೂಪಗುಂಡಿಗೆಯೊಳಳವಱಿಯದೆ ಸೆಜ್ಜೆವಳನಿಕ್ಕಿದ ಕೇಶಸಂಸ್ಕಾರಕಾಳಾಗರುಧೂಪಂ: ಆದಿಪು, ೫. ೨೨ ವ)


logo