logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಧಾತುಮಳ
[ನಾ] [ಜೈನ] ಇಂದ್ರಿಯಗಳಿಂದ ಹುಟ್ಟುವ ಕೊಳೆ, ಬೆವರು ಮುಂತಾದವು (ಧಾತುಮಳದೋಷರಹಿತಂ ವೀತನಖ ಶ್ಮಶ್ರು ಕೇಶ ಲೋಮಂ ಶೋಭಾನ್ವೀತಪರಿಪೂರ್ಣಯೌವನಂ: ಆದಿಪು, ೬. ೩೮)

ಧಾತ್ರ
[ನಾ] ಬ್ರಹ್ಮ (ಏಂ ಜಾಣನೋ ಧಾತ್ರಂ ರೂಪನಿಷ್ಪಾದನವಿಧಿಯೊಳಿವಂ ಮುನ್ನಮೇಂ ನೋಂಪಿಯಂ ನೋಂತನೊ: ಅದಿಪು, ೩. ೯೧); [ನಾ] ವಿಧಿ (ಸೀತೆ ಕಡಂಗಿ ಕಾಯ್ದು ಕಡೆಗಣ್ಚಿದಳಪ್ಪೊಡೆ ಧಾತ್ರನಿಂ ತೊದಳ್ವಾತಿನೊಳೇನೋ ಪಾಂಡವರ ಕೆಯ್ಯೊಳೆ ನಿನ್ನ ನಿಸೇಕಮಾಗದೇ: ಪಂಪಭಾ, ೯. ೪೯)

ಧಾತ್ರಿ
[ನಾ] ಭೂಮಿ (ಪ್ರತಿಮೆಗಳೞ್ತು ಮೊೞಗಿದುದತಿರಭಸದೆ ಧಾತ್ರಿ ದೆಸೆಗಳುರಿದುವು ಭೂತಪ್ರತತಿಗಳಾಡಿದುವು ಒಳಱಿದವು ಅತಿ ರಮ್ಯಸ್ಥಾನದೊಳ್ ಶಿವಾನಿವಹಂಗಳ್: ಪಂಪಭಾ, ೧. ೧೩೩)

ಧಾನುಷ್ಕಬಳ
[ನಾ] ಬಿಲ್ಗಾರರ ಪಡೆ (ಅನೇಕ ವರ್ಣಾಕೀರ್ಣ ತ್ರಿಸರವೇಣಿಕಾ ಗಾಢಗ್ರಥಿತ ತ್ರಪುಷಕೋಶ ಗುಪ್ತಗುಲ್ಫಾಂತರ ಪ್ರಾಪ್ತ ಖಡ್ಗಧೇನುಕಂ ಆಂಧ್ರಧಾನುಷ್ಕ ಬಳಂ: ಆದಿಪು, ೧೩. ೪೫ ವ)

ಧಾನ್ಯಕ
[ನಾ] ಕೊತ್ತುಂಬರಿ (ರಾಜಮಾಷ ಆಢಕೀ ನಿಷ್ಪಾವ ಚಣಕ ಕುಸುಂಭ ಕಾರ್ಪಾಸ ಸರ್ಷಪ ಜೀರಕ ಧಾನ್ಯಕಾದಿ ವಿವಿಧ ಧಾನ್ಯಭೇಧಂಗಳುಂ: ಆದಿಪು, ೬. ೭೨ ವ)

ಧಾನ್ಯಸಂಚಯ
[ನಾ] ದವಸದ ದಾಸ್ತಾನು (ಶಿರೋವ್ಯೂಢ ಧಾನ್ಯಸಂಚಯೋಪಭೋಗಿ ಜನ ನಿವಾಸಿಗಳಪ್ಪ ಸಂವಾಹಂಗಳುಮಂ: ಆದಿಪು, ೮. ೬೩ ವ)

ಧಾನ್ಯಸಮಿತಿ
[ನಾ] ದವಸದ ರಾಶಿ (ಪುದಿದ ತಱಗೆಲೆಗಳಂ ಕಂಡುದಱಿಂದಂ ಧಾನ್ಯಸಮಿತಿ ನೀರಸಮಕ್ಕುಂ: ಆದಿಪು, ೧೫. ೪೬)

ಧಾಮ
[ನಾ] ತೇಜಸ್ಸು ಮತ್ತು ವಾಸಸ್ಥಾನ (ವಿಪುಳಯಶಃಪಿಂಡಂ ಪುಣ್ಯಪುಂಜಂ ಕ್ಷತ್ರಧಾಮಧಾಮಂ ತಾನಾ ನೃಪಸುತಂ: ಆದಿಪು, ೮. ೪೪)

ಧಾರಾ
[ನಾ] ಸುರಿದ [ನೀರು] (ದುರ್ಯೋಧನಂ ಅತಿಸಂಭ್ರಮಾಕುಳಿತ ಪರೀತಜನ ಉಪನೀತ ಚಂದನಕರ್ಪೂರಮಿಶ್ರಿತ ಹಿಮಶಿಶಿರ ಧಾರಾಪರಿಷೇಕದಿಂದ ಎಂತಾನುಂ ಮೂರ್ಛೆಯಿಂದೆೞ್ಚತ್ತು: ಪಂಪಭಾ, ೧೩. ೨ ವ); [ನಾ] ಅಲಗು (ತದೀಯ ಕೌಕ್ಷೇಯP ಧಾರಾವಿದಾರಿತಶರೀರನುಂ ಆಗಿ ಬಿೞ್ದಿರ್ದ ಶರಾಚಾರ್ಯರಂ ಕಂಡು: ಪಂಪಭಾ, ೧೩. ೫೫ ವ)

ಧಾರಾಗೃಹ
[ನಾ] ತಂಪಾಗಿರಲು ನೀರು ಎರಚುವ ಏರ್ಪಾಟಿರುವ ಮನೆ (ಪಲವುಂ ಧಾರಾಗೃಹಂಗಳ್ ಅತನುವಿಕಾರಮಂ ಒದವಿಪುದು ದೇವದಂಪತಿಗದಱೊಳ್: ಆದಿಪು, ೬. ೯೫)


logo