logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಧರ್ಮಪತ್ನಿ
[ನಾ] ಧಾರ್ಮಿಕವಾಗಿ ಮದುವೆಯಾದ ಹೆಂಡತಿ (ನಾಳಿನ ಬಾರಿಯೆಮ್ಮ ಮೇಲೆ ಬಂದುದೆಮ್ಮ ಮನೆಯೊಳ್ ಆನುಂ ಎಮ್ಮ ಧರ್ಮಪತ್ನಿಯುಂ ಮಗನುಂ ಮಗಳುಂ ಇಂತೀ ನಾಲ್ವರೆ ಮಾನಸರ್: ಪಂಪಭಾ, ೩. ೨೫ ವ)

ಧರ್ಮಪುತ್ರ
[ನಾ] ಧರ್ಮನಂದನ (ಧರ್ಮಪುತ್ರನುಂ ಕುಲಧನಸಂಕುಲಗಳನೆ ತಂದಿಡೆ ಇಟ್ಟವಂ ಆಡಿ ಸೋಲ್ತಂ: ಪಂಪಭಾ, ೬. ೭೨)

ಧರ್ಮಪೋತ
[ನಾ] ಧರ್ಮವೆಂಬ ಹಡಗು (ವಿಷಯಭೋಗಾಸವ ಅತ್ಯಂತಸೇವಾಮದದಿಂದಂ ಧರ್ಮಪೋತಚ್ಯುತರ್: ಆದಿಪು, ೯. ೫೮)

ಧರ್ಮಭಂಡಾರ
[ನಾ] ದಾನಕಾರ್ಯಗಳಿಗೆ ಮೀಸಲಾದ ಕೋಶ (ಹರಿಗನ ಧರ್ಮಭಂಡಾರದಂತೆ ಸಾರಮಾದುದು ಬಿಟ್ಟಗ್ರಹಾರಂ ಆ ಸಬ್ಬಿಸಾಸಿರದೊಳಂ ಧರ್ಮವುರಂ: ಪಂಪಭಾ, ೧೪. ೫೬)

ಧರ್ಮಶಾಸ್ತ್ರ
[ನಾ] ಮನು, ಬೃಹಸ್ಪತಿ, ದಕ್ಷ, ಗೌತಮ, ಯಮ, ಅಂಗೀರಸ, ಯೋಗೀಶ್ವರ, ಪ್ರಚೇತಾ, ಶಾತಾತಪ, ಪರಾಶರ, ಸಂವರ್ತ, ಉಶನಸ, ಶಂಖ, ಲಿಖಿತ, ಅತ್ರಿ, ವಿಷ್ಣು, ಆಪಸ್ತಂಬ, ಹಾರೀತ ಎಂಬುವವರ ಹದಿನೆಂಟು ಸ್ಮೃತಿಗಳು (ಪದಿನೆಂಟು ಧರ್ಮಶಾಸ್ತ್ರಂಗಳೊಳಂ, ನಾಲ್ಕುವೇದಂಗಳೊಳಂ ಆಱಂಗದೊಳಂ: ಪಂಪಭಾ, ೨. ೩೪ ವ)

ಧರ್ಮಶ್ರವಣ
[ನಾ] ಧರ್ಮದ ಪ್ರವಚನ (ಪಱಿವಿಡಲಣಮೀಯದವರಂ ಅವರ್ಗಳ ಬಾೞೊಳ್ ನಿಱಿಸಲ್ ಬಗೆದೈ ಕರಮೆನೆ ಉಱದೆ ಇರ್ಕುಮೆ ನಿನ್ನ ಪೇೞ್ದ ಧರ್ಮಶ್ರವಣಂ: ಪಂಪಭಾ, ೯. ೪೫)

ಧರ್ಮಸಂತತಿ
[ನಾ] ಧರ್ಮದ ಮುಂದುವರಿಕೆ (ಗೃಹಸ್ಥಧರ್ಮದಿಂದಂ ನೀನೆಂತಂತೆ ಸಲೆ ನೆಗೞೆ ಜಗತೀಸಂತತಿ ನಿಲೆ ನಿನ್ನ ಧರ್ಮಸಂತತಿ ನಿಲ್ಕುಂ: ಆದಿಪು, ೮. ೧೩)

ಧರ್ಮಸುತ
[ನಾ] ಯುಧಿಷ್ಠಿರ (ಪುಟ್ಟುವುದುಂ ಧರ್ಮಂ ಒಡವುಟ್ಟಿದುದು ಈತನೊಳೆ ಧರ್ಮನಂಶದೊಳ್ ಈತಂ ಪುಟ್ಟಿದನೆಂದಾ ಶಿಶುಗೊಸೆದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರಂ: ಪಂಪಭಾ, ೧. ೧೨೨)

ಧರ್ಮಾತ್ಮಜ
[ನಾ] ಧರ್ಮರಾಯ, ಯುಧಿಷ್ಠಿರ (ಧರ್ಮಾತ್ಮಜಂ ಕೇಳ್ದು ಆ ಹರಿ ಪೇೞ್ದುದೊಂದು ನಯದಿಂದಾ ರಾತ್ರಿಯೊಳ್ ಪೋಗಿ ಕುಂಭಜನಂ ಕಂಡು: ಪಂಪಭಾ, ೧೧. ೧೨೬)

ಧವಳಂ
[ಗು] ಬಿಳಿಯ (ಧವಳಹಯಂ ಧವಳರಥಂ ಧವಳ ಉಷ್ಣೀಷಂ ಶಶಾಂಕಸಂಕಾಶ ಯಶೋಧವಳಿತ ಭುವನಂ ತಾಗಿದಂ ಅವಯವದಿಂ ಬಂದು ಧರ್ಮತನಯನ ಬಲದೊಳ್: ಪಂಪಭಾ, ೧೧. ೩೯)


logo