logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಧ್ವಜ
[ನಾ] ಪತಾಕೆ (ಆದಿತ್ಯಂ ಮಸುಳ್ವನ್ನೆಗಂ ಧ್ವಜಘಟಾಟೋಪಂಗಳಿಂದಂ ಲಯಾಂಭೋದಂಗಳ್ ಕವಿವಂತೆವೋಲ್ ಕವಿವುದುಂ ಕಾಲ್ಗಾಪು ಕಾಲ್ಗಾಪಿನೊಳ್ ಜೋದರ್ ಜೋದರೊಳ್ .. .. ಅಗುರ್ವಪ್ಪನ್ನೆಗಂ: ಪಂಪಭಾ, ೧೦. ೯೩)

ಧ್ವಜಪಟ
[ನಾ] ಬಾವುಟದ ಬಟ್ಟೆ (ಅಂತು ವರ ಶಶಿವಿಶದ ಯಶಃಪಟಂಗಳಂ ನನ್ನಿಪಟಂಗೊಳ್ವಂತೆ ವಿವಿಧ ಧ್ವಜಪಟಂಗಳಂ ಕೊಂಡು: ಪಂಪಭಾ, ೮. ೧೦೯ ವ)

ಧ್ವಜಮಹೀತಳ
[ನಾ] ಬಾವುಟಗಳ ಜಾಗ (ಗಜ ವೃಷಭ ಅಂಕುಶ ಚಕ್ರ ಅಂಬುಜ ಹಂಸ ಮಯೂರ ಮತ್ಸ್ಯ ಫಣಿವೈರಿ ಮತಂಗಜರಿಪು ಚಿಹ್ನ ವಿಶಾಲಧ್ವಜಂಗಳಿಂ ಧ್ವಜಮಹೀತಳಂ ಸೊಗಯಿಸುಗುಂ: ಆದಿಪು, ೧೦. ೩೩)

ಧ್ವಜಿನಿ
[ನಾ] ಧ್ವಜವನ್ನು ಪಡೆದಿರುವಂಥದು, ಸೈನ್ಯ (ಬಿಡೆ ಪಿಣಿಲಂ ಕುರುಧ್ವಜಿನಿ ತೊಟ್ಟನೆ ಬಾಯನೆ ಬಿಟ್ಟುದು ಅಂದು ಗಂಡುಡೆಯುಡೆ ಗಂಡುಗೆಟ್ಟುದು: ಪಂಪಭಾ, ೮. ೧೦೧)

ಧ್ವಜಿನೀಪತಿ
[ನಾ] ಸೇನಾಧಿಪತಿ (ಅಖಂಡಪ್ರತಾಪಧ್ವಜನಂದು ತನ್ನ ಧ್ವಜಿನೀಪತಿಯನಟ್ಟಿ ಬಾಯ್ಕೇಳಿಸಿ: ಆದಿಪು, ೧೩. ೫೬ ವ)

ಧ್ವಜಿನೀಸಂಕ್ಷೋಭ
[ನಾ] ಸೇನೆಯ ಕೋಲಾಹಲ (ಭೂರಿ ಧ್ವಜಿನೀಸಂಕ್ಷೋಭಮಾಕಂಪಮುಂ ಅಶುಭಮಹೀಕಂಪಮುಂ ತನ್ನೊಳೊಂದಾಗೆ: ಆದಿಪು, ೧೪. ೮೯)

ಧ್ವನತ್
[ಗು] ಮೊಳಗುವ, ಧ್ವನಿಸುವ (ಧ್ವನತ್ತೂರ್ಯಸಂತತಿ ನಾದಪ್ರತಿಪೂರಿತ ಅಖಿಳಕುಳಕ್ಷೋಣೀಧ್ರಕುಂಜಂ: ಆದಿಪು, ೭. ೩೮); [ಗು] ಝೇಂಕರಿಸುವ (ಧ್ವನದಳಿಕುಳಾಕುಳೀಕೃತ ವನಂಗಳಿಂದೆಸೆವ ಪದ್ಮಷಂಡಂಗಳ ಚೆಲ್ವಿನೊಳಂ ಕಣ್ಣ ಮನಮಂ ಅನುವಿಸುವ ವಿರಾಟಪುರಮನೆಯ್ದಿದರ್ ಅವರ್ಗಳ್: ಪಂಪಭಾ, ೮. ೫೨)

ಧ್ವಾಂಕ್ಷಧ್ವಜ
[ನಾ] ಕಾಗೆಯ ಗುರುತಿನ ಧ್ವಜ, ಅಂಥ ಧ್ವಜವುಳ್ಳ ಕರ್ಣ (ಅಂತು ಯುಗಾಂತವಾತಾಹತಕುಲಗಿರಿಯೆ ನೆಲೆಯಿಂ ತಳರ್ವಂತೆ ತಳರ್ದು ಧ್ವಾಂಕ್ಷಧ್ವಜಂ ಅಂಬರತಳದೊಳ್ ಮಿಳಿರೆ ತನಗಿದಿರಂ ಬರ್ಪ ಕರ್ಣನ ರಥಕ್ಕೆ: ಪಂಪಭಾ, ೧೨. ೧೩೬ ವ)

ಧ್ವಾನೋತ್ಕರ
[ನಾ] [ಧ್ವಾನ+ಉತ್ಕರ] ಸದ್ದುಗಳ ಸಮೂಹ (ಪುಷ್ಪಿತ ಹೇಮಪಂಕಜ ರಜಸ್ಸಂಸಕ್ತಭೃಂಗಾಂಗನಾನಿಕರಂ ಸಾರಸ ಹಂಸ ಕೋಕಿಳಕುಳಧ್ವಾನೋತ್ಕರಂ ಚೆಲ್ವನಾಯ್ತು ಕರಂ ಸಕ್ತನಿಳಿಂಪದಂಪತಿಗಳಿಂದಾ ನಂದನಂ ನಂದನಂ: ಪಂಪಭಾ, ೫. ೮೦)

ಧ್ವಾನ್ತ
[ನಾ] ಕತ್ತಲೆ (ಬಲನಿವಹರಜಸ್ಸಂತತಿಧ್ವಾನ್ತದೊಳ್ ಭೂತಳನಾಥಾನೀಕ ವರ್ಮೋತ್ಕರ ಖಚಿತಮಣಿಶ್ರೇಣಿರತ್ನಪ್ರದೀಪಾವಳಿ ದೀಪ್ತಿವ್ರಾತದಿಂದಂ: ಆದಿಪು, ೧೪. ೯೬)


logo