logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಧೃತಶಸ್ತ್ರ
[ನಾ] ಹಿಡಿಯಲ್ಪಟ್ಟ ಶಸ್ತ್ರವುಳ್ಳವನು, ಶಸ್ತ್ರ ಹಿಡಿದವನು (ಕೃತಶಾಸ್ತ್ರರ್ ಧೃತಶಸ್ತ್ರರ್ ಅಪ್ರತಿಹತಪ್ರಾಗಲ್ಭ್ಯರ್ ಈಗಳ್ ಪೃಥಾಸುತರ್ ಉದ್ಯೋಗಮಂ ಎತ್ತಿಕೊಳ್ವ ದೆವಸಂ ಸಾರ್ಚಿತ್ತು: ಪಂಪಭಾ, ೮. ೮೭)

ಧೃತಿ
[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ [ಜೈನ] ಒಂದು ಗರ್ಭಾನ್ವಯಕ್ರಿಯೆ (ಧೃತಿ ಮೋದ .. .. ಆಗ್ರನಿರ್ವೃತಿಯೆಂಬಯ್ವತ್ಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ); [ನಾ] ಧೈರ್ಯ (ಇದಱೊಳ್ ತನ್ನಿಷ್ಟವಪ್ಪನ್ನಂ ಉತ್ತರಂ ಅಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಂ ಇಷ್ಟಂಗನಾಸುರತಂ ಕಾಂತಿ ಅಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ: ಪಂಪಭಾ, ೧೪. ೬೫)

ಧೃಷ್ಟ
[ನಾ] ಉದ್ಧತ (ಈ ಕಥೆ ಗುಣ್ಪುವೆತ್ತುದು ಅವರುಂ ಜ್ಞಾನರ್ಧಿಸಂಪನ್ನರ್ ಎಂದಿರದೆ ಆಂ ಧೃಷ್ಟನೆಂ ಈ ಕಥಾಬ್ಧಿಯುಮಂ ಏನೀಸಲ್ ಮನಂದಂದೆನೋ: ಆದಿಪು, ೧. ೩೫)

ಧೈರ್ಯಕ್ಷರಣೆ
[ನಾ] ಮನಸ್ಸಿನ ಅಸ್ಥಿರತೆ (ಅಂತು ಕಂತುಶರ ಪರವಶನಾಗಿ ಧೈರ್ಯಕ್ಷರಣೆಯುಂ ಇಂದ್ರಿಯಕ್ಷರಣೆಯುಂ ಒಡನೊಡನಾಗೆ: ಪಂಪಭಾ, ೨. ೪೨ ವ)

ಧೋಧೂಯಮಾನ
ಗು] ಬೀಸುತ್ತಿರುವ (ಧೋಧೂಯಮಾನ ಧವಳಚಾಮರಸಹಸ್ರಸಂಛಾದಿತ ಸಹಸ್ರಕರಪ್ರಭಾಪ್ರಸರ ರಥಮನೇಱಿ: ಆದಿಪು, ೧೧. ೧೪ ವ)

ಧೌತ
[ಗು] ಪರಿಶುದ್ಧವಾದ (ಮತ್ತಂ ಅತ್ಯಂತ ಧೌತಕಲಧೌತಸ್ಥಾಸಕಾಳಂಕೃತ ನಕ್ಷತ್ರಮಾಳಾ ಪರಿಕಲಿತ ಕರೀಂದ್ರಂಗಳೆ: ಆದಿಪು, ೧೩. ೬ ವ)

ಧೌತಾಸಿನಿಭ
[ನಾ] ತೊಳೆದ ಕತ್ತಿಯಂತಿರುವ (ಧೌತಾಸಿನಿಭ ನಭೋಮಂಡಳನುಂ ಜನಿತಜಗಜ್ಜನ ಆನಂದನುಂ: ಆದಿಪು, ೧೦. ೬೭ ವ)

ಧ್ಯಾನ
[ನಾ] ಚಿಂತನೆ (ಧ್ಯಾನದೊಳಭವಂ ನೆಱೆದಿನಿಸಾನುಮನರೆಮುಚ್ಚಿ ಕಣ್ಗಳಂ: ಪಂಪಭಾ, ೮. ೧೩)

ಧ್ಯಾನಚಕ್ರ
[ನಾ] [ಜೈನ] ಚಿಂತನೆಯಿಂದ ಹುಟ್ಟುವ ಚಕ್ರ (ಆ ಮುನಿಯ ಮನೋಗಾರದೊಳ್ ಧ್ಯಾನಚಕ್ರಂಂ ಪುಟ್ಟತ್ತು ಆ ರಾಜ್ಯಾಶ್ರಮಮುನಿಯ ಆಯುಧಾಗಾರದೊಳ್ ಚಕ್ರರತ್ನಂ ಪುಟ್ಟಿತ್ತು: ಆದಿಪು, ೬. ೨೪ ವ)

ಧ್ರುವಂ
[ನಾ] ಸದಾ ಕಾಲ (ಅವನೋದುವನಿತು ಬುದ್ಧಿಯೆ ತವುತಂದೊಡೆ ಪಂಚಪದದ ನಾಮಾಕ್ಷರಮಂ ಧ್ರುವಂ ಓದುವುದವು ತೊಡರ್ವುದುಮವಶ್ಯಂ ಓದಲಸದವಱ ಮೊದಲಕ್ಕರಮಂ: ಆದಿಪು, ೨. ೫೫)


logo