logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ದವ
[ನಾ] ಕಾಡುಗಿಚ್ಚು (ಕುಪಿತ ಅನೇಕಪ ದಂದಶೂಕ ದವ ದೈತ್ಯ ಅರಾತಿ ಚೋರ ಅಂಧಕಾರ ಪತದ್ವಜ ವಿಷ ಅಭಿಚಾರಿಕ ಜರಾತಂಕಾದಿ ಭೇದಂಗಳಪ್ಪ: ಆದಿಪು. ೧೬. ೯)

ದವದಹನ
[ನಾ] ಕಾಡುಗಿಚ್ಚು (ಸೈರಿಸಿ ನೂಱೆಂಬನಿತುವರಂ ಮನ್ನಿಸಿ ನಸುಕಿನಿಸದೆ ಮಿಗೆ ಕಿನಿಸಿ ದಿತಿಜಕುಳದವದಹನಂ: ಪಂಪಭಾ, ೬. ೬೩)

ದವದಗ್ನಿ
[ನಾ] [ದವತ್+ಅಗ್ನಿ] ಕಾಡುಗಿಚ್ಚು (ಈ ಮರನಂ ತಗುಳ್ದುದೆಂಬನೊಳ್ ಎಣೆಯಾಗೆ ಸತ್ತರೆನೆ ಸಾಯದಂತೆಣಿಸುತ್ತುಮಿರ್ಪ ಬೆಳ್ತನದನಿತಲ್ಲದಾ ಮರನನಾ ದವದಗ್ನಿ ಬರ್ದುಂಕಲೀಗಮೇ: ಆದಿಪು, ೯. ೫೯)

ದವಾನಲ
[ನಾ] ಕಾಡುಗಿಚ್ಚು (ಮದನ ದವಾನಲಾರ್ಚಿ ತನುವಂ ಸುಡೆ ತಳ್ತ ಎಮೆಯೊಳ್ ಪಳಂಚಿ ಬೀಗಿದ ಬೆಳರ್ವಾಯೊಳ್ ಉಚ್ಚಳಿಸಿ .. .. ಎಯ್ದಿದುವು ನೇತ್ರಜಲಬಿಂದುಗಳ್ ಆಕೆಯ ನಿಮ್ನನಾಭಿಯಂ: ಪಂಪಭಾ, ೫. ೯)

ದಶಕಂಠ
[ನಾ] ಹತ್ತು ತಲೆಗಳುಳ್ಳವನು, ರಾವಣ (ತೊಂಡಿನೊಳ್ ಉರ್ಕಿ ಕೆಟ್ಟ ದಶಕಂಠನಂ ಅಕ್ಕಟ ಕೊಂಡ ಪೆರ್ಮರುಳ್ ಕೊಂಡುದೆ ತನ್ನುಮಂ: ಪಂಪಭಾ, ೬. ೩೩)

ದಶಕಂಧರ
[ನಾ] ರಾವಣ (ನೆಟ್ಟನೆ ಬೂತುಗೊಳ್ವ ತೆಱದಿಂ ದಶಕಂಧರನಾಡಿ ಪಾಡಿ ನಾಣ್ಗೆಟ್ಟಿರೆ ಕೊಂಡನಲ್ಲದೆ ಬರಂಗಳಂ: ಪಂಪಭಾ, ೯. ೫೩)

ದಶದಿಶಾಮಂಡಲ
[ನಾ] ಹತ್ತೂ ದಿಕ್ಕುಗಳ ಪ್ರದೇಶ (ಇದಱೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ ಪುದಿದೞ್ಕಾಡಿತ್ತು ಅಡಂಗಿತ್ತಿದಱೊಳೆ ಕುರುರಾಜಾನ್ವಯಂ: ಪಂಪಭಾ, ೧೨. ೧೫೬)

ದಶಧರ್ಮ
[ನಾ] [ಜೈನ] ದಶಕುಲಧರ್ಮ: ಭೈಷ, ಅಸ್ತೇಯ, ಶೌಚ, ಅಪ್ರಮಾದ, ಅವ್ಯವಾಯ, ಭೂತದಯೆ, ಕ್ಷಮಾ, ಅಕ್ರೋಧ, ಗುರುಶುಶ್ರೂಷೆ, ಸತ್ಯ ಅಥವಾ ಉತ್ತಮಕ್ಷಮಾ, ಆರ್ದವ, ಸತ್ಯ, ಶೌಚ, ಸಂಯಮ, ತಪಸ್ಸು, ತ್ಯಾಗ, ಆಕಿಂಚನ್ಯ, ಬ್ರಹ್ಮಚರ್ಯಾ, ಪರ್ಯಾಪ್ತ (ಏಕಧನುರ್ಧರನಾದಂ ಇಳಾಕಾಂತೆಯನೊಲಿಸುವಂದು ದಶಧರ್ಮಾಕಳಿತ ಕರಾಗ್ರನಾದೆಂ: ಆದಿಪು, ೬. ೩೦)

ದಶನ
[ನಾ] ಹಲ್ಲು (ಕುಂದಧವಳನೃಪದಶನೇಂದು ಜ್ಯೋತ್ಸ್ನಾಮೃತಾಚ್ಛಜಳ ಪರಿಷೇಕಂ ಮಾಂದಿಸುವಂತಾದುದು ನೃಪನಂದನೆಯ ಎರ್ದೆಯೊಳಗೆ ಬಳೆದ ಶೋಕಾನಳನಂ: ಆದಿಪು, ೩. ೪೯)

ದಶನಘಟ್ಟನ
[ನಾ] ಹಲ್ಲು ಕಡಿಯುವುದು (ಆಮಂತ್ರಿತ ಡಾಕಿನೀ ದಶನಘಟ್ಟನ ಜಾತವಿಭೀಷಣಂ: ಪಂಪಭಾ, ೧೨. ೧೨೦)


logo