logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ದರದಳಿತ
[ಗು] ನಸುಬಿರಿದ (ದರದಳಿತ ಕಮಳವನಗಳಿತ ಮಧುರಮದಮದಿರಾಮೋದಮುದಿತ ಮಧುನಿಕರನಿನಾದ ಉಪವೀಣಿತಕ್ರೀಡಾ ಸರೋವರಂಗಳೇ: ಆದಿಪು, ೪. ೫೨ ವ)

ದರವುರ
[ನಾ] ಸ್ವಲ್ಪ ಮಟ್ಟಿಗೆ, ಮೆಲ್ಲಗೆ (ಕಪ್ಪುರದ ರಜಂಬೊರೆದ ಕರಕಾಂಬುವ ತಳಿದು ದರವುರಂ ಎೞ್ಚರಿಸೆ ಮೂರ್ಛೆ ತಿಳಿದು ಕುಮಾರಂ: ಆದಿಪು, ೪. ೧೭)

ದರವುರಂಗಾಣ್
[ಕ್ರಿ] ಆಕಸ್ಮಿಕವಾಗಿ ನೋಡು (ಮನಮೊಲ್ದಾತನ ಗಾಡಿಯಂ ದರವುರಂಗಂಡಾಕೆಗಳ್ ಪೂವಿನಂಬಿನ ಕೋಳ್ಗಂ ತಳಿವಾಲಿನೀರ್ಗಂ ಅಲರ್ವಾಸಿಂಗಂ .. .. ಪಕ್ಕಾಗದೇಂ ಪೋಪರೇ: ಆದಿಪು, ೧. ೭೫)

ದರಹಸಿತ
[ಗು] ಮುಗುಳ್ನಗೆಯಿಂದ ಕೂಡಿದ (ಆತನ ಲಲಿತೋತ್ತಾನಶಯಿತ ದರಹಸಿತ ತರಂಗಿತ ಗತಿಸ್ಖಲಿತ ಮುಗ್ಧಜಲ್ಪಿತಾದಿ ಬಾಲ್ಯವಿಳಾಸಂಗಳಿಂದಂ: ಆದಿಪು, ೮. ೫೦ ವ)

ದರಹಾಸ
[ನಾ] ಮುಗುಳ್ನಗೆ (ಎೞಲಿಕ್ಕಿದ ಮುಕ್ತಾದಾಮಶೋಭೆ ಲಕ್ಷ್ಮೀಲಲನಾ ದರಹಾಸಶೋಭೆ: ಆದಿಪು, ೪. ೩೦ ರಗಳೆ)

ದರಿ
[ನಾ] ಕೊಳ್ಳ, ತಗ್ಗುಭೂಮಿ (ಸರಿತ್ ಗಿರಿ ದರಿ ಭೂರುಹ ಸೇತು ವನ ಸೀಮೋಪಲಕ್ಷಿತಂಗಳಪ್ಪ ಖೇಡಂಗಳುಮಂ: ಆದಿಪು, ೮. ೬೩ ವ)

ದರಿದ್ರಗೇಹಿನೀಗರ್ಭದೋಹಳ
[ನಾ] ಬಡವೆಯಾದ ಗೃಹಿಣಿಯ ಬಸಿರಿ ಬಯಕೆ (ಬಾಹುಬಲಿಯ ಸಮರಸಂಘಟ್ಟ ದೋಹಳಂ ಇದು ದರಿದ್ರಗೇಹಿನೀಗರ್ಭದೋಹಳದಂತಾದುದು: ಆದಿಪು, ೧೪. ೧೦೨ ವ)

ದರಿದ್ರಮಧ್ಯ
[ನಾ] ಬಡನಡು (ನಿಮಿರ್ದಲ್ಲಾಡುವ ಕಾಂತಾಕುಂತಳಂ ತುಂಗಸ್ತನಕ್ಷೋಭವಿಭ್ರಮಂ ಉತ್ಕಂಪದರಿದ್ರಮಧ್ಯಂ: ಆದಿಪು, ೮. ೭೦)

ದರ್ಪಣ
[ನಾ] ಕನ್ನಡಿ (ಗೋರೋಚನ ಸಿದ್ಧಾರ್ಥ ದೂರ್ವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣಕಳಶ ಕಳಮಾವೃತಕರಪಲ್ಲವೆಯರಪ್ಪ ಪುರಂಧ್ರಿಯರುಮಂ: ಪಂಪಭಾ, ೩. ೨ ವ)

ದರ್ಪಣಸಮತಳ
[ಗು] ಕನ್ನಡಿಯಂತೆ ಸಮತಟ್ಟಾದ (ದರ್ಪಣಸಮತಳಮೆನೆ ಸಂಸರ್ಪತ್ ರತ್ನಾಂಶುಜಾಳ ಜಟಿಳಿತಮೆನೆ ಕಂದರ್ಪಸುಖನಿಳಯಮೆನೆ: ಆದಿಪು, ೫. ೨೮)


logo