logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ದಗ್ಧ
ಗು] ಸುಟ್ಟ (ವಿದುರಂ .. .. ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿ ಕ್ರಿಯೆಗಳಂ ಮಾಡಿ ಮಗುೞೆ ವಂದಂ: ಪಂಪಭಾ, ೩. ೮ ವ)

ದಡಿಗ
[ನಾ] ದಾಂಡಿಗ (ದಡಿಗನ ಮಿೞ್ತುವಂ ಮಿದಿದೊಡಲ್ಲದೆ ಮಾಣೆಂ ಅಮೋಘಂ ಎಂದು ಕೂರ್ಪುಡುಗದೆ ಬಂದು ತಾಗೆ: ಪಂಪಭಾ, ೧೨. ೧೬೨)

ದತ್ತಕರ್ಣ
[ನಾ] ಕಿವಿಗೊಟ್ಟವನು, ಕೇಳುತ್ತಿರುವವನು (ಪುರೋಹಿತ ಉಚ್ಚಾರ್ಯಮಾಣ ಪುಣ್ಯಾಶೀರ್ವಚನನಿರ್ಘೋಷದತ್ತಕರ್ಣನುಂ ಆಗಿರ್ದಾಗಳ್: ಆದಿಪು, ೧೧. ೧೦ ವ)

ದಧಿ
[ನಾ] ಮೊಸರು (ಘೃತ ಲವಣ ತೈಲ ಕ್ಷೀರ ದಧಿ ವ್ಯಂಜನಂಗಳೊಳ್ ಸಂಸ್ಕಾರಂ ಮಾಡುವ: ಆದಿಪು, ೬, ೭೭ ವ)

ದನುಜ
[ನಾ] ದನು ಎಂಬುವವನ ವಂಶದ ರಾಕ್ಷಸ (ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು: ಪಂಪಭಾ, ೧. ೧೦೩)

ದನುಜಾರಿ
[ನಾ] [ದನುಜ+ಅರಿ] ರಾಕ್ಷಸರ ಶತ್ರು, ಶ್ರೀಕೃಷ್ಣ (ದನುಜಾರೀ ದಿವಿಜೇಂದ್ರ ಶಾಶ್ವತಗುಣಾ ನಿನ್ನ ಅಳ್ಕು ಅದೇಂ ಬೇಡು: ಪಂಪಭಾ, ೫. ೭೪)

ದನುಜೋದೀರಿತ
[ನಾ] [ಜೈನ] ರಾಕ್ಷಸರಿಂದ ಉಂಟಾದ ದುಃಖ (ಶಾರೀರ ಮಾನಸ ಕ್ಷೇತ್ರಜ ಪರಸ್ಪರೋದೀರಿತ ದನುಜೋದೀರಿತಗಳೆಂಬ ಅಯ್ದುಂ ತೆಱದ ದುಃಖಂಗಳೊಳಿರ್ದು: ಆದಿಪು, ೫. ೮೮ ವ)

ದನುತನಯ
[ನಾ] ರಾಕ್ಷಸಪುತ್ರ (ತಲೆಯ ನೆಲೆಗೆ ಲೋಕಾಂತರಕೆ ಎಡೆಯಿಲ್ಲ ಎನಿಸೆ ಪೆರ್ಚಿದಂ ದನುತನಯಂ: ಪಂಪಭಾ, ೧೨. ೧೧)

ದಯಾದತ್ತಿ
[ನಾ] [ಜೈನ] ಎಲ್ಲ ಪ್ರಾಣಿಗಳಲ್ಲಿ ದಯೆ ತೋರಿಸುವುದು (ತ್ರಿಶುದ್ಧಿಯಿನನುಕಂಪೆವೆರಸು ಸಮಸ್ತ ಪ್ರಾಣಿಗಳ್ಗೆ ಅಭಯಂಗುಡುವ ದಯಾದತ್ತಿಯುಂ: ಆದಿಪು, ೧೫. ೧೩ ವ)

ದಯೆಗೆಯ್ವೋ
ದಯಮಾಡಲಾರೆಯಾ, ದಯವಿಟ್ಟು ಕೊಡಲಾರೆಯಾ (ಕರಮೆ ಮಱುಗಿ ಮೆಯ್ವಿಡಿದು ಉರಿವ ಎನ್ನೀ ಎರ್ದೆಯನಾಱಿಸಲ್ ನೀಂ ಬಾಯೊಳ್ ತಂಬುಲಮನಪ್ಪೊಡಂ ದೆಗೆಯ್ವೋ: ಪಂಪಭಾ, ೮. ೬೯)


logo