logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ದಂದಶೂಕ
[ನಾ] ಹಾವು (ಕುಪಿತ ಅನೇಕಪ ದಂದಶೂಕ ದವ ದೈತ್ಯ ಅರಾತಿ ಚೋರ ಅಂಧಕಾರ ಪತದ್ವಜ ವಿಷ ಅಭಿಚಾರಿಕ ಜರಾತಂಕಾದಿ ಭೇದಂಗಳಪ್ಪ: ಆದಿಪು. ೧೬. ೯)

ದಂದುಗ
[ನಾ] ವ್ಯಥೆ, ತೊಂದರೆ (ಪಲವುಂ ಶೀಲಂಗಳಂ ತಾಳ್ದಿ ದಂದುಗವೆಂದುಂ ತಮಗಾಗದಂತೆಸಗುವರ್ ಸರ್ವೋತ್ತಮರ್ ಸರ್ವಸಾಧುಗಳ್: ಆದಿಪು, ೧. ೫); [ನಾ] ಗೊಡವೆ (ಮುನ್ನಾ ವಿಧಾತ್ರಂ ಕುಡಲಿರ್ದಂ ಕನ್ನೆಯಂ ಪೇೞ್ ನಿನಗಮೆನಗಮೇಂ ದಂದುಗಂ ವಜ್ರಬಾಹೂ: ಆದಿಪು, ೪. ೨೭); [ನಾ] ಕಾರ್ಯ (ಅತ್ತಲಿತ್ತಲೆಡೆಯಾಡುವ ದಂದುಗದಾಗಳೇಂ ಪೊದಳ್ದೆಸೆದುದೊ ಚಾರುದೇವಗಣಿಕಾ ಮಣಿನೂಪುರ ಮಂಜುಶಿಂಜಿತಂ: ಆದಿಪು, ೭. ೨೨)

ದಂಪತಿ
[ನಾ] ಗಂಡಹೆಂಡಿರು (ಮನ್ಮಥಕ್ರೀಡೆಗೆ ನೋಡೆ ನಾಡೆ ಗುಱಿಯಪ್ಪುವು ದಂಪತಿ ಭೋಗಭೂಮಿಯೊಳ್: ಆದಿಪು, ೫. ೪೧)

ದಂಶ
[ನಾ] ನೊಣ (ಬಿಸಿಲ್ ಐಕಿಲ್ ಪಸಿವು ಉಗ್ರ ದಂಶಮಶಕವ್ಯಾಬಾಧೆ ನೀರೞ್ಕೆ ಪೊಯ್ದ ಸಿಡಿಲ್ ತಿಂಬರವಾವು ಪಾಯ್ದ ಪುಲಿಯೆಂಬೀ ಬಾಧೆಯೊಳ್: ಆದಿಪು, ೬. ೩೪)

ದಂಷ್ಟ್ರ
[ನಾ] ಕೋರೆ ಹಲ್ಲು (ಅಂತು ಅಜಾತಶತ್ರು ಶತ್ರುಪಕ್ಷಕ್ಷಯಕರಕರವಾಳದಂಷ್ಟ್ರಾಭೀಳ ಭುಜಂಗಮೂರ್ತಿ .. .. ಅಪ್ಪ ಅರಿಕೇಸರಿಯ ತೋಳ್ವಲದೊಳ್: ಪಂಪಭಾ, ೪. ೧೦ ವ)

ದಕ್ಕು
[ನಾ] ದಸಿ, ಮುಳ್ಳಿನಂಥ ಕತ್ತಿ (ಪುಸಿ ನಸುವಂಚನೆ ನೋರ್ಪು ಅಸಿದು ಅಗಲಿತು ತಕ್ಕು ದಕ್ಕು ಪಗೆ ಕೆಯ್ಬಗೆ ಕೆಯ್ ಕುಸುರಿ ನುಸುಳೆಂಬ ಕೇಣದ ಕುಸುರಿಯಂ ಅಱಿದು ಇಱಿದು ಮೆಱೆದು ಉಱೆದೆ ಅರೆಬರ್: ಪಂಪಭಾ, ೧೦. ೮೧)

ದಕ್ಷಾಧ್ವರಧ್ವಂಸಕ
[ನಾ] ದಕ್ಷನ ಯಜ್ಞವನ್ನು ಹಾಳುಮಾಡಿದವನು, ಶಿವ (ಇದು ಕೈಲಾಸಂ ಭವಾನೀಧವನ ನೆಲೆ ಮನೋಜಾತನಂ ಬೂದಿಮಾಡಿತ್ತಿದಱೊಳ್ ದಕ್ಷಾಧ್ವರಧ್ವಂಸಕನ ನೊಸಲ ಕಣ್: ಪಂಪಭಾ, ೭. ೭೪)

ದಕ್ಷಿಣ
[ಗು] ಬಲಭಾಗದ (ದಕ್ಷಿಣಚರಣದೊಳ್ ನೆಲನಂ ಪರಡಿ ಗಂಭೀರನಿನಾದದಿಂ ಹೇಷಿತಂಗೆಯ್ವ ವಿಜಯಹಯಮುಮಂ: ಪಂಪಭಾ, ೯. ೯೫ ವ)

ದಕ್ಷಿಣದಿಕ್ಪಾಲ
[ನಾ] ದಕ್ಷಿಣದ ಅಧಿಪತಿ, ಯಮ (ಅನ್ಯದುರ್ಧರ ನಿಜಧನುರ್ದಂಡಮಂ ತದ್ಧ್ವಜಿನಿಗೆ ಕೋಪಕುಟಿಲ ದಕ್ಷಿಣದಿಕ್ಪಾಲ ಭ್ರುಕುಟೀವಿಭ್ರಮಮಂ ಮಾಡಲ್ಪಡದೆಯುಂ: ಆದಿಪು, ೧೪. ೧೦೩ ವ)

ದಕ್ಷಿಣವಿಷಾಣ
[ನಾ] ಬಲಭಾಗದ ದಂತ (ನಿಜಭುಜವಿಜಯಲಕ್ಷ್ಮೀ ಪರಿರಂಭಣಪ್ರಕಟನದಕ್ಷದಕ್ಷಿಣ ವಿಷಾಣವಿನ್ಯಸ್ತಹಸ್ತನುಂ: ಆದಿಪು, ೧೪. ೯೦ ವ)


logo