logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ದಿನಕೃಚ್ಚಕ್ರ
[ನಾ] [ದಿನಕೃತ್+ಚಕ್ರ] ಸೂರ್ಯಮಂಡಲ (ದೀಪದೀಪ್ತಿಪ್ರತಿಹತ ದಿನಕೃಚ್ಚಕ್ರ ತೀವ್ರಾಂಶುಚಕ್ರಂ ಜಿತದಿಕ್ಚಕ್ರಂ ಪ್ರಭಾಪ್ರಜ್ವಳಿತದಶದಿಶಾಚಕ್ರಂ: ಆದಿಪು, ೧೪. ೩)

ದಿನತ್ರಯ
[ನಾ] ಮೂರು ದಿನ (ದಿನತ್ರಯದೊಳ್ ಬದರೀಫಳಮಾತ್ರ ಆಹಾರಿಗಳುಂ ಆರೋಗ್ಯಶರೀರಂಗಳುಂ ಸೌಂದರಾಕಾರಂಗಳುಂ ತ್ರಿಪಲ್ಯೋಪಮಜೀವಿಗಳುಂ ಆಗಿ: ಆದಿಪು, ೫. ೪೧ ವ)

ದಿನನಾಥ
[ನಾ] ಸೂರ್ಯ (ಬೆಳ್ಕುತ್ತಿರ್ದೆನಪ್ಪೊಡೆ ಏ ತೊದಳ್ ಇತ್ತಣ ದಿನನಾಥಂ ಇತ್ತ ಮೂಡುಗುಮಲ್ತೇ: ಪಂಪಭಾ, ೧೨. ೧೭೯)

ದಿನನಾಯಕ
[ನಾ] ದಿನನಾಥ (ಹಿಮಕರಂ ಆತ್ಮ ಶೀತರುಚಿಯಂ ದಿನನಾಯಕಂ ಉಷ್ಣದೀಧಿತಿಕ್ರಮಮಂ ಅಗಾಧವಾರಿಧಿಯೆ ಗುಣ್ಪಂ ಇಳಾವಧು ತನ್ನ ತಿಣ್ಪಂ ಬಿಸುೞ್ವೊಡಂ; ಪಂಪಭಾ, ೧. ೮೩)

ದಿನಪ
[ನಾ] ದಿನನಾಥ, ಸೂರ್ಯ (ವನನಿಧಿಯಿಂದಂ ಚಂದ್ರಂ ವಿನತೋದರದಿಂ ಗರುತ್ಮನುದಯಾಚಳದಿಂ ದಿನಪನೊಗೆವಂತೆ ಪುಟ್ಟಿದಂ ಅನಿವಾರ್ಯಸುತೇಜನೆನಿಪನಿನಜನ ತನಯಂ: ಪಂಪಭಾ, ೧. ೧೨೧)

ದಿನಪತಿವಾರ
[ನಾ] ಭಾನುವಾರ (ಸಿತಪಕ್ಷದ ಪಂಚಮಿ ದಿನಪತಿವಾರಂ ಶುಭದ ಮೂಲನಕ್ಷತ್ರದೊಳ್ ಅನ್ವಿತಮಾಗೆ ನೆಗೞ್ದುದೀ ಮತ್ಕೃತಿ ಜಗದೊಳ್ ಪುದಿದು ಸಾಗರಾಂತಕ್ಷಿತಿಯಂ: ಆದಿಪು, ೧೬. ೭೮)

ದಿನಾಧಿಪ
[ನಾ] ಸೂರ್ಯ (ನೊಸಲ ಕಣ್ಬೆತ್ತವೊಲ್ ಅಂತಾಗಡೆ ರಾಗಕ್ಕಾಗರಮಾಗೆ ದಿನಾಧಿಪತನೂಜಂ ಒಸೆದಿರ್ಪಿನೆಗಂ: ಪಂಪಭಾ, ೯. ೭೫)

ದಿನೇಶ
[ನಾ] [ದಿನ+ಈಶ] ದಿನಕ್ಕೆ ಒಡೆಯನಾದವನು ಸೂರ್ಯ (ನಿನ್ನ ಉತ್ಪತ್ತಿಯಂ ಇಂತೆಂದು ಎನ್ನರುಂ ಅಣಂ ಅಱಿಯರ್ ಅಱಿವೆನಾಂ ಸಹದೇವಂ ಪನ್ನಗಕೇತು ದಿನೇಶಂ ನಿನ್ನಂಬಿಕೆ ಕೊಂತಿ ಇಂತಿವರ್ ನೆಱೆ ಬಲ್ಲರ್: ಪಂಪಭಾ, ೯. ೬೬)

ದಿನೇಶಜ
[ನಾ] ಸೂರ್ಯನ ಮಗ, ಕರ್ಣ (ಪವನಜನಂತು ಪೂಣ್ದು ಯುವರಾಜನ ನೆತ್ತರನಾರ್ದು ಪೀರ್ದಂ ಇಂತು ಅವಗಡದಿಂ ದಿನೇಶಜನಂ ಅಂಕದ ಗಾಂಡಿವಿ ಕೊಂದಂ: ಪಂಪಭಾ, ೧೩. ೮)

ದಿನೇಶತನಯ
[ನಾ] ಸೂರ್ಯನ ಮಗ ಕರ್ಣ (ನುಡಿ ನಿನಗಂ ದಿನೇಶತನಯಂಗಂ ಅದೆನ್ನಯ ಪಕ್ಕದೆ ಆದೊಡಂ ಮಿಡುಕದೆ ಕೇಳ್ವೆಂ ಅಲ್ಲಿ ಸಮಂ ಇರ್ವರುಂ: ಪಂಪಭಾ, ೧೩. ೨೮)


logo