logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ದಳಿಂಬ
[ನಾ] ದಡಿಬ, ಮಡಿ ಬಟ್ಟೆ (ಹಾಟಕಪೀಠದ ಮೇಲೆ ಪಾಸಿದ ದುಗುಲದ ದಳಿಂಬದೊಳಿರಿಸಿದಾಗಳ್: ಆದಿಪು, ೪. ೪೮ ವ)

ದಳಿತ
[ಗು] ಸೀಳಲ್ಪಟ್ಟ (ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜಹರಿಣ ರುಧಿರನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ: ಪಂಪಭಾ, ೪. ೪೯ ವ); [ಗು] ಅರಳಿದ (ದಳಿತಕಮಲಚ್ಛಾಯಾಟೋಪಂ ಮನೋಜರಸ ಪ್ರಭಾವಳಯನಿಳಯಂ ಪ್ರೋದ್ಯತ್ ಭ್ರೂವಿಭ್ರಮಂ: ಪಂಪಭಾ, ೪. ೭೭)

ದಳಿತಶತ್ರುಗೋತ್ರ
[ನಾ] ಶತ್ರುವಂಶಸಂಹಾರಕ (ಶುಭತಿಥಿ ಶುಭನಕ್ಷತ್ರಂ ಶುಭವಾರಂ ಶುಭಮುಹೂರ್ತಮೆನೆ ಗಣಕಂ ಇಳಾಪ್ರಭುವೊಗೆದಂ ಉದಿತಕಾಯಪ್ರಭೆಯೊಗೆದಿರೆ ದಳಿತಶತ್ರುಗೋತ್ರಂ ಪುತ್ರಂ: ಪಂಪಭಾ, ೧. ೧೨೭)

ದಳಿವ
[ನಾ] ಮೇಲು ಹೊದಿಕೆ (ತೊಟ್ಟ ಎಕ್ಕವಡಂ ಮರವಿಲ್ ಕಟ್ಟಿದ ಪಣೆಕಟ್ಟು ಬೇಂಟೆವಱಿ ದೊರೆಯೊಳ್ ಒಡಂಬಟ್ಟ ಅಸಿಯ ಸುರಗಿ ದಳಿವದ ತೊಟ್ಟ ಅಂಗಿಗೆ ತನ್ನೊಳ್ ಅಮರೆ ಬೇಂಟೆಯನೊರ್ವಂ; ಪಂಪಭಾ, ೫. ೩೬)

ದಳಿವಿಡಿ
[ಕ್ರಿ] ಕೂಡಿಸು, ಕುಂದಣವಿಡು (ಮಾಣಿಕ್ಯಚಟ್ಟಂ ನೀರಂಜಿಸಿ ದಳಿವಿಡಿದ ಮಹಾರತ್ನದ ದೊರೆಗೆ ವಂದುದಾ ಸ್ತ್ರೀರತ್ನಂ: ಆದಿಪು, ೪. ೪೨)

ದಳ್ಳಿಸಿ ಕುಕಿಲ್
[ಕ್ರಿ] ಭೋರೆಂದು ಶಬ್ದಮಾಡು (ದಳ್ಳಿಸಿ ಕುಕಿಲುತ್ತಂಬುಧಿಯ ಉಳ್ಳೋಳಂ ನೆಗೞೆ ಕವಿದು ನರ್ತಿಸಿ ನಡೆದತ್ತು: ಆದಿಪು, ೧೩. ೫೩)

ದಳ್ಳಿಸು
[ಕ್ರಿ] ಸಂಭ್ರಮಪಡು (ಗಿಳಿಗಳೊಳೆ ಗೞಪಿ ಮೊಱೆವಳಿಕುಳದೊಡನಾಳೈಸಿ ಪುರುಳಿಯೊಡನೆಳಸಿ ನವಿಲ್ಗಳ ಬಳಗದೊಡನೆ ನರ್ತಿಸಿ ವಿಳಾಸಿನೀನಿವಹಂ ಆಗಳದೇಂ ದಳ್ಳಸಿತೋ: ಆದಿಪು, ೧೧. ೮೨); [ಕ್ರಿ] ಪ್ರಜ್ವಲಿಸು (ಅಱವಱಗಾದ ಕಾಡನಳುರ್ವ ಬೇಗೆಯ ದಳ್ಳುರಿ ದಳ್ಳಿಸಿಕೊಳ್ಳೆಂದರಾತಿ ಬಲಮನಳುರೆ: ಪಂಪಭಾ, ೧೨. ೭ ವ)

ದಳ್ಳುರಿ
[ನಾ] ದೊಡ್ಡ ಉರಿ (ಮುಳಿಸಿನ ದಳ್ಳುರಿಗಳನುಗುೞುತ್ತುಂ ಚಕ್ರರತ್ನಂ ಬಗೆದು ಬೆಸೆಸಿದಂ ಭರತೇಶಂ: ಆದಿಪು, ೧೪. ೧೧೫); [ನಾ] ಪ್ರಜ್ವಲಿಸುವ ಬೆಂಕಿ (ಗಂಡರ ನೆತ್ತಿಯೊಳೊತ್ತಿ ಬಾಳಂ ಇನ್ನೂಱಗುಂ ಎಂದೊಡೆ ಏಂ ಪಿರಿದೋ ತೇಜದ ದಳ್ಳುರಿ ಪಾಂಡುರಾಜನಾ: ಪಂಪಭಾ, ೧. ೧೦೯)

ದಾಂಗುಡಿ
[ನಾ] [ದಾವು+ಕುಡಿ] ಹಗ್ಗದಂತೆ ಉದ್ದವಾಗಿರುವ ಕುಡಿ, ಹಬ್ಬುವ ಕುಡಿ (ತಳ್ತು ಕಟ್ಟಿದ ಗುಡಿ ರಂಗವಲ್ಲಿಗಳೆ ದಾಂಗುಡಿಯಂತಿರೆ ಸೂಸೆ ಸೇಸೆಯಂ ಸುದತಿಯರಿಕ್ಕೆ ಚಾಮರಮಂ: ಪಂಪಭಾ, ೫. ೧೦೫)

ದಾಂಗುಡಿವಿಡಿ
[ಕ್ರಿ] ಉದ್ದವಾಗಿರುವ ಕುಡಿಯನ್ನು ಚಾಚು (ಮಕ್ಕಳಂ ಪಡೆದಬಳಾಜನಂ ನೆರೆದ ಮಕ್ಕಳ ಮಕ್ಕಳ ನೀಳ್ದದೊಂದು ದಾಂಗುಡಿವಿಡಿದೀವ ಚಾಗಮೆಡಱೋಡುವಿನಂ: ಆದಿಪು, ೨. ೨೪)


logo