logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ತಡೆದಿರ್
[ಕ್ರಿ] ತಡಮಾಡಿ ಬಾ (ಪವನತನಯಂಗೆ ಅಂತಕತನಯನ ಸಮಾವಸ್ಥೆಯಂ ಪೇೞ್ದು ಇಂದಿನ ಅನುವರಮೆಲ್ಲಮಂ ನಿಮ್ಮೊರ್ವರ ಮೇಲಿಕ್ಕಿ ಪಿರಿದುಂ ಪೊೞ್ತು ತಡೆದಿರ್ಪೆವು ಎನೆ: ಪಂಪಭಾ, ೧೨. ೧೩೪ ವ)

ತಣಿ
[ಕ್ರಿ] ತೃಪ್ತಿ ಪಡೆ (ಸುೞಿಯದು ಗಾಳಿ ಮೃಗಂ ಕೆಯ್ವೞಿಗಳ ಮೇತದೊಳೆ ತಣಿದಪುವು ಪಂದಿಗಳುಂ ಪೞನವಿರ್ ಇಕ್ಕಿದುವು ಆದಂ ಪೞು ಪರಿದಾಡಲ್ ಕರಂ ಬೆಡಂಗವನಿಪತೀ: ಪಂಪಭಾ, ೫. ೩೮)

ತಣಿಯನೆ
[ತಣಿಯನ್+ಎ] ತೃಪ್ತಿ ಹೊಂದಲಿಲ್ಲ (ಊರ್ಜಿತಪುಣ್ಯಂ ಪೂಜಿಸುತ್ತುಂ ತಣಿಯನೆ ಭವತ್ಪಾದೋಪಕಂಠಕ್ಷಿತಿಯಂ ಚಕ್ರಾಧಿನಾಥಂ: ಆದಿಪು, ೧೩. ೯೧)

ತಣಿಯಲೀ
[ಕ್ರಿ] [ತಣಿಯಲ್+ಈ] ತೃಪ್ತಿಯಾಗುವಂತೆ ನೀಡು (ಎನ್ನ ವೇೞ್ಪುದಂ ತಣಿಯಲೀವುದು ಎನೆ ಪಾರ್ಥಂ ಅದೇವಿರಿದು ಇತ್ತೆಂ: ಪಂಪಭಾ, ೫. ೭೧)

ತಣಿಯುಣ್
[ಕ್ರಿ] ತೃಪ್ತಿಯಾಗುವಂತೆ ತಿನ್ನು (ಆ ಬ್ರಾಹ್ಮಣಸಮಿತಿ ಬೇಳೆ ದೇವರ್ ತಣಿಯುಂಡರ್ ನೆರೆದು ದಿವ್ಯ ಹವ್ಯಾಮೃತಮಂ: ಪಂಪಭಾ, ೬. ೩೭)

ತಣ್ಣನೆ
[ಅ] ಹಾಯಾಗಿ (ನೆರೆದು ಅವರೊಳ್ ಮುನ್ನಿನ ಭವದ ಪುಣ್ಯಕಲ್ಪಾವನಿಜದ ತನಿವಣ್ಣ ರಸದೆ ತಣ್ಣನೆ ತಣಿವಂ: ಆದಿಪು, ೬. ೪೮)

ತಣ್ಣಸ
[ನಾ] ತಂಪು (ನನೆಯೆಳಗಂಪನೆತ್ತಿಯುಂ ಅಣಂ ನನೆನಾಱದೆ ಅರಲ್ದು ಅನೇಕ ಕೋಕನದವನಂಗಳೊಳ್ ಸುೞಿದು ತಣ್ಣಸಮಾಗದೆ: ಪಂಪಭಾ, ೫. ೩೪)

ತಣ್ಣಿದೆ
[ನಾ] ಪಾದವನು (ಎಮ್ಮ ಅನ್ವಯಕ್ಕೆ ನೀಂ ತಣ್ಣಿದೆಯಾಗು ಎಂದು ಬೇಡುವುದುಂ ತದಸ್ತು ಎಂದಂ: ಪಂಪಭಾ, ೫. ೧೦೦ ವ)

ತಣ್ಣಿದು
[ನಾ] ತಂಪಾದುದು (ಚಂದ್ರಕರಂಗಳಿಂದು ತಣ್ಣಿದುವೆರ್ದೆಗಕ್ಕೆ ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ ನಿನ್ನ ಕೂಟದೊಳ್: ಪಂಪಭಾ, ೫. ೧೮)

ತಣ್ಣೆಲರ್
[ನಾ] [ತಣ್ಣನೆಯ ಎಲರ್] ತಂಗಾಳಿ (ಸುಭದ್ರೆ ಪಲುಂಬಿ ಮನಂಬಸದೆ ತನುವಂ ಆಱಿಸಲ್ ಅಲರಿಂ ತುಂಬಿಗಳಿಂ ತಣ್ಣೆಲರಿಂ ತುಂಬಿದ ತಿಳಿಗೊಳದ ಬನಮಂ ಪೊಕ್ಕಳ್: ಪಂಪಭಾ, ೫. ೨)


logo