logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ತಕ್ಕೂರ್ಮೆ
[ನಾ] (ತಕ್ಕು+ಊರ್ಮೆ] ಯೋಗ್ಯತೆ (ಈ ನುಡಿಯೆ ನಿನ್ನ ಕೂರ್ಮೆಗಂ ತಕ್ಕೂರ್ಮೆಗಂ ದೊರೆಯಪ್ಪುದಾದೊಡಂ ಅರಾತಿಸೈನ್ಯಮಂ ತವೆ ಕೊಂದಲ್ಲದೆ ನಿನ್ನ ಮೊಗಮಂ ನೋಡೆಂ: ಪಂಪಭಾ, ೧೩. ೨೮ ವ)

ತಕ್ಷಕಪತಿ
[ನಾ] ಮಹಾ ಶಿಲ್ಪಿ (ಭದ್ರಮುಖನೆಂಬ ತಕ್ಷಕಪತಿಯುಂ .. .. ಆತ್ಮೀಯ ಸಾಮ್ರಾಜ್ಯಪರಿಚ್ಛೇದಮಾಗೆ: ಆದಿಪು, ೧೫. ೩ ವ)

ತಕ್ಷಕರತ್ನ
[ನಾ] [ಜೈನ] ಜೀವರತ್ನಗಳಲ್ಲಿ ಒಂದಾದ ಸ್ಥಪತಿ, ವಾಸ್ತುಶಿಲ್ಪಿ (ಪ್ರಾಸಾದಪ್ರಕರಣನುಮಪ್ಪ ಭದ್ರಮುಖನೆಂಬ ತಕ್ಷಕರತ್ನಮುಂ: ಆದಿಪು, ೧೧. ೩ ವ)

ತಗರ್
[ಕ್ರಿ] ಅಡ್ಡಗಟ್ಟು (ರಥಮಂ ಬಂದೇಱಿ ಪೋ ಪೋಗಲೆಂದೊದಱುತ್ತುಂ ಪರಿತಂದು ತಾಗಿ ತಗರ್ದಂ ಗಂಗಾಸುತಂ ಭೀಮನಂ: ಪಂಪಭಾ, ೧೧. ೧೦)

ತಗರ್ತಲೆಯ
[ನಾ] ಒಂದು ಬಾಣ (ನೆಱೆದು ನಿರ್ವಾಯಂ ನರುವಾಯಂ ಮುಂಮೊನೆ ನೆರಕೆ ನಾರಾಚಂ ತಗರ್ತಲೆಯಂ: ಪಂಪಭಾ, ೧೩. ೩೯)

ತಗವು
ಯೋಗ್ಯವಾಗವು (ಕ್ಷೀರಾಬ್ಧಿಯ ನೀರಲ್ಲದೆ ಧೀರನ ಮಜ್ಜನಕೆ ಪೆಱವು ನೀರ್ ತಗವು ಎಂದು ಆ ವಾರಾಶಿವರಂ: ಆದಿಪು, ೭. ೮೨)

ತಗುಳ್
[ಕ್ರಿ] ಸೇರು (ಬಗೆಯೊಳ್ಪೊಣ್ಮೆ ದಯಾರಸಂ ಚರಿತದೊಳ್ಕೈಗಣ್ಮೆ ಚಾರಿತ್ರಂ ಆವಗಮಾವಶ್ಯಕದೊಳ್ ತಗುಳ್ದು ಪಲವುಂ ಶೀಲಂಗಳಂ ತಾಳ್ದಿ: ಆದಿಪು, ೧. ೫); [ಕ್ರಿ] ಆರಂಭಿಸು, ತೊಡಗು (ಆ ಮಹಾಬಳಂ ಬಾಲಕಾಲದಿಂ ತಗುಳ್ದು ಅಭ್ಯಸ್ತಸಮಸ್ತವಿದ್ಯಾಧರವಿದ್ಯಾಪಾರಗನುಂ: .. .. ಆಗಿ: ಆದಿಪು, ೧. ೭೩ ವ); [ಕ್ರಿ] ಆಚರಿಸು (ಭೋಗಿಪೆನೆನ್ನ ಜವ್ವನಮುಂ ಈ ಧನಮುಂ ತವುವನ್ನೆಗಂ ಕುಚಾಗ್ರಭರಾನತಾಂಗಿಯರೊಳ್ ಅನ್ನೆಗಂ ಅತ್ತ ಅಱನಂ ತಗುಳ್ವೆಂ: ಆದಿಪು, ೩. ೬೩); [ಕ್ರಿ] ಅಂಟು, ಹಿಡಿ (ವನದಹನಂ ವನಾಂತರಮನೊರ್ಬಳಸಾಗಿರೆ ಮುತ್ತಿ ಸುತ್ತಿನ ನಡುವಿರ್ದುಂ ಆ ಮರನಂ ಅೞ್ವಿದುದು ಈ ಮರನಂ ತಗುಳ್ದುದು: ಆದಿಪು, ೯. ೫೯); [ಕ್ರಿ] ತಡೆ, ಅಡ್ಡಿಪಡಿಸು (ಶುಭಾಶುಭಪರಿಣಾಮ ಪ್ರಣಾಳಿಕೆಯಿಂ ಬರ್ಪ ಕರ್ಮಮಂ ಬರಲೀಯದೆ ಗುಪ್ತ್ಯಾದಿಗಳಿಂ ತಗುಳ್ವುದು ಸಂವರೆಯೆಂಬುದು: ಆದಿಪು, ೧೦. ೬೩ ವ); [ಕ್ರಿ] ಉಂಟಾಗು (ಕಾಲಾನುಭಾವದಿಂ ಯುಗಾರಂಭದ ವರ್ಷಾರಂಭದೊಳಂ ತಗುಳ್ದೀ ದ್ವೀಪದೊಳಗಣ ನದೀನದಂಗಳ ಜಲಂಗಳನೊಳಗೊಂಡ ಅಲಂಘ್ಯತ್ವದೊಳಂ: ಆದಿಪು, ೧೨. ೬೮ ವ); [ಕ್ರಿವಿ] ಮೇಲಿಂದ ಮೇಲೆ, ಒಂದೇ ಸಮನೆ (ವರ್ಣಕಂ ಕತೆಯೊಳಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂಡಿತರೆ ತಗುಳ್ದು ಬಿಚ್ಚಳಿಸೆ ಪೇೞಲೊಡರ್ಚಿದೆನೀ ಪ್ರಬಂಧಮಂ: ಪಂಪಭಾ, ೧. ೧೧); [ಕ್ರಿ] ಆರಂಭಗೊಳ್ಳು (ಹಿರಣ್ಯಗರ್ಭಬ್ರಹ್ಮರಿಂ ತಗುಳ್ದು ಅವ್ಯವಚ್ಛಿನ್ನಮಾಗಿ ಬಂದ ಸೋಮವಂಶಂ ಈಗಳ್ ಎಮ್ಮ ಕುಲಸಂತತಿಗಂ ಆರುಮಿಲ್ಲದೆ ಎಡವಱಿದು ಕಿಡುವಂತಾಗಿರ್ದುದು: ಪಂಪಭಾ, ೧. ೮೪ ವ); [ಕ್ರಿ] ಬೆನ್ನ ಹಿಂದೆಯೇ ಹೋಗು (ಗೆಡೆವಚ್ಚಿರ್ವರ್ ಮನಗೊಂಡು ಒಡನೊಡನೆ ಓರಂತು ತಗುಳ್ದು ಝೇಂಕರಿಸಿದೊಡೆ ಎಲ್ವಡಗಾಗೆ ಮೋದಲೆಂದಿರ್ದ ಎಡೆಯೊಳ್ ಗುರು ತನ್ನ ಮಗನಂ ಎಡೆವುಗವೇೞ್ದಂ: ಪಂಪಭಾ, ೨. ೭೩); [ಕ್ರಿ] ಅನುಸರಿಸು, ಮಾಡು (ಏಂ ತಗುಳ್ದೆ ಇನ್ನುಸಿರದಿರ್ ಈವ ಮಾತಂ ಇವನುಣ್ಬುದು ಖಾಂಡವಂ ಈತಂ ಅಗ್ನಿ: ಪಂಪಭಾ, ೫. ೭೨)

ತಗುಳೆವರ್
[ನಾ] ಅಟ್ಟಿಸಿಕೊಂಡು ಹೋಗು, ಎಂದರೆ ಸೋಲಿಸು (ಈತನುದಾತ್ತ ಪೂರ್ವ ಭೂಮಿಪರನೊಳ್ಪಿನೊಳ್ ತಗುಳೆವಂದೊಡೆ ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್: ಪಂಪಭಾ, ೧. ೧೪)

ತಗುಳ್ಚು
[ಕ್ರಿ] ತಗುಲಿಸು, ಸೇರಿಸು (ಚಿನ್ನಪೂಗಳಂ ಅವಱೊಳ್ ತಗುಳ್ಚದೆ ಮೃಗೋದ್ಭವಪಂಕದೆ ಪತ್ರಭಂಗಮಂ ತೊಳಪ: ಆದಿಪು, ೪. ೧೨); [ಕ್ರಿ] ಕೂಡಿಸು, ಸಮೀಕರಿಸು (ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್: ಪಂಪಭಾ, ೧. ೧೪); [ಕ್ರಿ] ಮುಡಿದುಕೊ (ಪೂತಚೂತಮಂ ನೆರ್ಮಿದ ಅಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ ಸೋರ್ಮುಡಿಯೊಳ್ ತಗುಳ್ಚಿದೊಡೆ: ಪಂಪಭಾ, ೫. ೮೨)

ತಗುಳ್ಪು
[ನಾ] ಜೋಡಣೆ, ಬೆಸುಗೆ (ವಜ್ರಲೇಪದ ತಗುಳ್ಪಂ ಪೋಲ್ವಿನಂ ವಜ್ರನಾಭಿಗತಿಪ್ರೀತಿಯನುಂಟುಮಾಡಿದರ್ ಅವರ್ ಜನ್ಮಾಂತರಸ್ನೇಹದಿಂ: ಆದಿಪು, ೬. ೨೨); [ಕ್ರಿವಿ] ಅನುಸರಿಸಿ (ಕುಡಿವುದಂ ಏೞುಮಂಬುಧಿಯುಮಂ ಕುಲಶೈಲಕುಳಂಗಳುಂ ತಗುಳ್ದಡರ್ವುದನೊಂದಿ ಬಾಳರವಿ ತನ್ನಯ ಸೋಗಿಲ ಮೇಗೆ ರಾಗದಿಂ ಪೊಡರ್ವುದಂ: ಪಂಪಭಾ, ೧. ೧೪೦)


logo