logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ತಪನ
[ನಾ] ಸೂರ್ಯ (ಆಂತು ಪರಾಶರನಂದನನ ಉಪದೇಶದೊಳ್ ತಪನಪ್ರಭಂ ತಪಂಗೆಯ್ಯಲ್ ತಗುಳ್ದೊಡೆ: ಪಂಪಭಾ, ೭. ೭೯ ವ)

ತಪನಕರ
[ನಾ] ಬಿಸಿಲು, ಸೂರ್ಯ (ತಪನಕರಂ ತನುಗಳನುರ್ಚಿ ಪೋಗೆ ಸಾರ್ದತ್ತು ಜಕ್ಕವಕ್ಕಿಯ ಪೊಣರುಂ: ಆದಿಪು, ೧೧. ೫೦)

ತಪನಕಿರಣಾಳಿ
[ನಾ] ಬಿಸಿಲು (ಸುತ್ತುಲುಮುರಿಮಾಲೆಗಳೆನೆ ಪೊತ್ತಿಸಿದವೊಲಳುರೆ ತಪನಕಿರಣಾಳಿ ಮುನೀಂದ್ರೋತ್ತಮ ಗುರು ಕಲ್ಲೆನೆ ನಿಂದೆತ್ತಿದ ಬೆಳ್ಗೊಡೆಯ ನೆೞಲೊಳಿರ್ಪಂತಿರ್ದಂ: ಆದಿಪು, ೬. ೩೧)

ತಪನತಪ್ತ
[ಗು] ಬಿಸಿಲಿನಲ್ಲಿ ಕಾದ (ನಿಂದ ಶಿಲೆ ತಪನತಪ್ತಮಿದೆಂದು ಅಂಬುಜನಿಳಯೆ ಪದ್ಮವಿಷ್ಟರಮಂ .. .. ಕೃತೇಚ್ಛಂಗೆ ಪಡೆದು: ಅದಿಪು, ೯. ೮೫)

ತಪನಾಂಶು
[ನಾ] [ತಪನ+ಅಂಶು] ಬಿಸಿಲು (ಅಂತು ನೃಪಂ ನಡೆಯೆ ಲಲಾಟಂ ತಪತಪನಾಂಶುವಿಂ ಸರೋವರಜಲಂ ಓರಂತಿರೆ ಕಾಯ್ಗೊಂಡದ ನೀರಂತಿರೆ: ಆದಿಪು, ೧೧. ೪೮)

ತಪನೀಯ
[ನಾ] ಚಿನ್ನ (ಏೞು ಜನಪದಂಗಳಿಂದಂ ಪೂರ್ವಾಪರ ಆಯತಂಗಳುಂ ಹೇಮ ಅರ್ಜುನ ತಪನೀಯ ವೈಡೂರ್ಯ ವಜ್ರ ರಜತ ಹೇಮಮಯಂಗಳುಂ; ಆದಿಪು, ೧. ೪೮ ವ)

ತಪನೀಯಸೂತ್ರ
[ನಾ] ಚಿನ್ನದ ಎಳೆ (ತಪನೀಯಸೂತ್ರದೊಳ್ ಏಕಾದ್ಯೇಕೋತ್ತರದಶಾಂತಂಬರಂ ಅವರವರ ನೆಲೆಗಳೊಳ್ ಬ್ರಹ್ಮಸೂತ್ರಾಭಿಧಾನ ಯಜ್ಞೋಪವೀತದಿಂ ಪವಿತ್ರಗಾತ್ರರ್ಮಾಡಿ: ಆದಿಪು, ೧೫. ೧೧ ವ)

ತಪನೋದಯ
[ನಾ] ಸೂರ್ಯೋದಯ (ರಾಮಭುಜಪ್ರತಾಪ ತಪನೋದಯ ಶೈಲಮುಪಾಂತ ಪರ್ವತಸ್ತೋಮಸಮನ್ವಿತಂ: ಪಂಪರಾ, ೧೧. ೧೬೦)

ತಪಶ್ಚರಣ
[ನಾ] ತಪಸ್ಸನ್ನು ಮಾಡುವುದು (ಇದರ್ಕೆ ಕರ್ತವ್ಯಮಾವುದೆಂದೊಡೆ ಹಿಮವತ್ಪರ್ವತದೊಳ್ ತಪಶ್ಚರಣಪರಾಯಣರಾಗಿಂ: ಪಂಪಭಾ, ೧೩. ೧೦೭ ವ)

ತಪಷ್ಟಟ್ಕ
[ನಾ] [ಜೈನ] ತನ್ನೊಳಗಿಗೆ ಸಂಬಂಧಿಸಿದ ಆರು ಬಗೆಯ ತಪಸ್ಸುಗಳು (ಮತ್ತಂ ಅಭ್ಯಂತರ ತಪಷ್ಷಟ್ಕದೊಳಂ ಪ್ರಾಯಶ್ಚಿತ್ತ ವಿನಯ ವೈಯಾಪೃತ್ಯ ಸ್ವಾಧ್ಯಾಯ ಧ್ಯಾನ ವ್ಯುತ್ಸರ್ಗಂಗಳಂ ಕೈಕೊಂಡು: ಆದಿಪು, ೬. ೩೩ ವ)


logo