logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಚಂದ್ರಕಚ್ಛತ್ರ
[ನಾ] ನವಿಲುಗರಿಯ ಕೊಡೆ (ನಿರಂತರೋಚ್ಛ್ರಿತ ಚಂದ್ರಕಚ್ಛತ್ರಚ್ಛಾಯಾನಿರಾಕೃತಾತಪನುಂ: ಆದಿಪು, ೩. ೯೦ ವ)

ಚಂದ್ರಕಬಳ
[ನಾ] ಕೆಂಪು ಬಣ್ಣದ ಒಂದು ಬಗೆಯ ಪರಿಮಳದ್ರವ್ಯ (ಚಿನ್ನ ಪೂಗಳಂ ಮೆಱೆವಂತೆ ಚಂದ್ರಕಬಳಮಂ ತೊಡೆವಂತೆ ಮಹೀಕಾಂತೆ ಸೊಗಯಿಸೆ: ಆದಿಪ, ೭. ೩೬ ವ)

ಚಂದ್ರಕವಳ
[ನಾ] ಪರಿಮಳದ್ರವ್ಯ (ಮನ್ಮಥೋತ್ಸವ ಅಭಿಮುಖ ಚಂದ್ರನುಂ ಚಂದ್ರಕವಳದಿಂ ತೊಡೆದು ಓರೊಂದೆ ವಜ್ರದ ಪಂಚಲೋಹಮುಮಂ: ಆದಿಪು, ೪. ೪೧ ವ)

ಚಂದ್ರಕಾಂತ
[ನಾ] ಬೆಳುದಿಂಗಳಿನಿಂದ ಆರ್ದ್ರಗೊಳ್ಳುವ ಬಿಳಿಯ ಕಲ್ಲು (ಆ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದು: ಪಂಪಭಾ ಪರಿಷತ್ತು, ೪. ೫೧)

ಚಂದ್ರಕಾಂತಘಟ
[ನಾ] ಬಿಳಿಗಲ್ಲಿನ ಕೊಡ (ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕ್ಕೆಂದೆತ್ತಿದ ಚಂದ್ರಕಾಂತಘಟದೊಳ್: ಪಂಪಭಾ, ೪. ೫೧)

ಚಂದ್ರಕಿ
[ನಾ] ನವಿಲು (ಸಮದಾರಾತಿಮರಾಳನೀರದರವಂ ಸಂಕ್ರುದ್ಧವೈವಸ್ವತೋಪಮವಿದ್ವಿಷ್ಟ ಫಣೀಂದ್ರ ಚಂದ್ರಕಿರವಂ: ಆದಿಪು, ೧೧. ೧೦)

ಚಂದ್ರಕಿರವ
[ನಾ] ನವಿಲಿನ ಕೇಗು (ಸಮದಾರಾತಿ ಮರಾಳನೀರದರವಂ ಸಂಕ್ರುದ್ಧವೈವಸ್ವತೋಪಮ ವಿದ್ವಿಷ್ಟ ಚಂದ್ರಕಿರವಂ: ಆದಿಪು, ೧೧. ೧೦)

ಚಂದ್ರಗತಿ
[ನಾ] ಎಲ್ಲ ನಕ್ಷತ್ರಗಳನ್ನೂ ಪ್ರವೇಶಿಸಿ ಚಂದ್ರನು ಮೆಲ್ಲಗೆ ಹೋಗುವುದು (ನಗರಾರಣ್ಯನಿರ್ವಿಶೇಷಂ ಉತ್ತಮ ಮಧ್ಯಮ ಜಘನ್ಯಾಗಾರಂಗಳೊಳ್ ಚಂದ್ರಗತಿಯಿಂ ಸಲುತ್ತುಂ: ಆದಿಪು, ೯. ೧೩೦ ವ)

ಚಂದ್ರಚರಿತ
[ನಾ] ಚಂದ್ರಗತಿ, ಚಂದ್ರನ ನಡವಳಿಕೆ [ಕುಮುದಗಳನ್ನು ಅರಳಿಸುವ ಕಾರ್ಯ] (ಶರದದ ಚಂದ್ರಮನೊಳ್ ಮಚ್ಚರಿಪಂತಿರೆ ಚಂದ್ರಚರಿತಮಂ ಕೈಕೊಂಡಂ: ಆದಿಪು, ೧೨. ೪೬)

ಚಂದ್ರಧವಳ
[ನಾ] ಚಂದ್ರನಂತೆ ಬೆಳ್ಳಗಿರುವ (ಧರ್ಮಜನಿಕ್ಕಿದಂ ಗುರುವಂ ಇಂ ನೀನಾತನಂ ಬೇಗಂ ಇಕ್ಕದೆ ಕಣ್ಣೀರ್ಗಳನಿಕ್ಕೆ ಚಂದ್ರಧವಳಂ ನಿನ್ನನ್ವಯಂ ಮಾಸದೇ: ಪಂಪಭಾ, ೧೨. ೩೫)


logo