logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಚಾದಗೆ
[ನಾ] ಚಾತಕ ಪಕ್ಷಿ (ಕಾರ್ಗಾಲದ ಬರವಂ ಚಾದಗೆ ಪಾರ್ವಂತೆ ಧರ್ಮಪುತ್ರನ ಮರುತ್ಸುತನ ಪಾದಕಮಲಂಗಳಂ .. .. ಅರ್ಚಿಸಿ: ಪಂಪಭಾ, ೮. ೩೬ ವ)

ಚಾದಗೆವಕ್ಕಿ
[ನಾ] ಚಾದಗೆ (ಕಾರ್ಗಾಲಮಂ ಸೋಗೆ ಮುಂಬನಿಯಂ ಚಾದಗೆವಕ್ಕಿ ಹಂಸೆ ಕೊಳನಂ ಪದ್ಮಂಗಳಾದಿತ್ಯಮಂ ನೆನವಂತೆ: ಆದಿಪು, ೧೨. ೩೧)

ಚಾಪ
[ನಾ] ಬಿಲ್ಲು (ಅನೇಕಾಕ್ಷರಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಂ: ಪಂಪಭಾ, ೨. ೩೪ ವ)

ಚಾಪದಂಡ
[ನಾ] ಹೆದೆಯೇರಿಸದ ಬಿಲ್ಲು (ದವದಹನಧೂಮಾಧಿಕ ಶ್ಯಾಮಳಿತೋತ್ತಾಳತಾಳಕಾಯಂ ಅತಿವಿಚಿತ್ರತ್ರಪುಮಯ ಪತ್ರಖಚಿತೋಚ್ಚಂಡತಾಳ ಚಾಪದಂಡಂ: ಆದಿಪು, ೧೩. ೪೫ ವ)

ಚಾಪವಿದ್ಯಾಬಲ
[ನಾ] ಧನುರ್ವಿದ್ಯಾ ಕೌಶಲ (ಚಾಪವಿದ್ಯಾಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿರ್ಮಲಚಿತ್ತಂ ಧರ್ಮಪುತ್ರಂ ಮಿಗಿಲ್: ಪಂಪಭಾ, ೧೪. ೬೪)

ಚಾಪಾಗಮ
[ನಾ] [ಚಾಪ+ಆಗಮ] ಬಿಲ್ವಿದ್ಯೆ (ನಿಮ್ಮಂ ಅದಿರ್ಪುವಲ್ಲಿ ಚಾಪಾಗಮಂ ಏವುದು ಅಂತೆನಗೆ ಬಿಲ್ವರಂ ಆಜಿಯೊಳಾಂಪ ಗಂಡರಾರ್: ಪಂಪಭಾ, ೧೦. ೧೨೩)

ಚಾಮರ
[ನಾ] ಚಮರೀಮೃಗ (ಸಿಂಹಾಸನಶ್ರೀಸಮುಚಿತಂ ಅಮೃತಾಂಭೋಧಿಕಲ್ಲೋಲಮಾಳಾನಿಭ ಲೀಲಾಸಂಚಳತ್ ಚಾಮರರುಚಿರಂ: ಆದಿಪು, ೧೩. ೪೬); [ನಾ] ಚಮರೀಮೃಗದ ಕೂದಲಿಂದ ಮಾಡಿದ ಬೀಸುವ ಕುಚ್ಚು (ಗಂಗಾತರಂಗೋಪಮಾನ ಚಳಚ್ಚಾಮರವಾತಪೀತ ನಿಜಘರ್ಮಾಂಭಃಕಣಂ ದ್ರೌಪದೀಕಚಕುಂಭಾರ್ಪಿತ ಕುಂಕುಮದ್ರವವಿಲಿಪ್ತೋರಸ್ಸ್ಥಳಂ: ಪಂಪಭಾ, ೩. ೮೫)

ಚಾರಚಕ್ಷ
[ನಾ] ಸಂಚರಿಸುವ ಕಣ್ಣು, ಅಂದರೆ ಗೂಢಚಾರ (ಅನ್ನೆಗಮಿತ್ತ ಸಂಚಳಿತ ಚಾರಚಕ್ಷಗಳಿಂದಂ ಧರ್ಮಪುತ್ರಂ ಅಱಿದು: ಪಂಪಭಾ, ೧೩. ೩೦ ವ)

ಚಾರಣಗಣ
[ನಾ] [ಜೈನ] ಗಗನಗಾಮಿ ಸಂಚಾರಿಯಾಗಿ ಧರ್ಮೋಪದೇಶ ಮಾಡುವ ಅವಧಿಜ್ಞಾನವುಳ್ಳ ಮುನಿಗಳ ಸಮೂಹ (ದಾನಪ್ರಮೋದ ವಾಚಾಳಷಟ್ಚರಣ ಚಾರಣ ಗಣೋಚ್ಚಾರ ಝಂಕಾರಜಯಾಶೀರ್ಘೋಷಮುಮಪ್ಪ ವಿಜಯಗಜದ ಬೆಂಗೆ ವಂದು: ಆದಿಪು, ೧೪. ೯೦ ವ)

ಚಾರಣಯುಗಳ
[ನಾ] [ಜೈನ] ಗಗನಗಾಮಿ ಮುನಿಗಳ ಜೋಡಿ (ಚಾರಣಯುಗಳಚರಣಯುಗಳಕ್ಕೆ ಕರಕಮಳಯುಗಳಮಂ ಮುಗಿದು ಬೀೞ್ಕೊಂಡು ತ್ವರಿತಗತಿಯಿಂ ಬರುತ್ತುಂ: ಆದಿಪು, ೨. ೪೪ ವ)


logo