logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಚರಿಗೆವರ್
[ಕ್ರಿ] [ಜೈನ] ಮುನಿಗಳು ಭಿಕ್ಷೆಗೆ ಬರುವುದು (ಅನುರಾಗದಿಂ ಆ ಪ್ರೀತಿವರ್ಧನಂ ಮುನಿವರರೆಂತೀ ಗಿರಿಗೆ ಚರಿಗೆವರ್ಪರನಾಗತಮತಿ ಬಗೆಯ ನೀನುಪಾಯಾಂತರಮಂ: ಆದಿಪು, ೫. ೭)

ಚರಿಗೆವೊಗು
[ಕ್ರಿ] [ಜೈನ] ಮುನಿಗಳು ಭಿಕ್ಷೆಗಾಗಿ ಮನೆಯನ್ನು ಹೊಗು (ನಿಯಮದಿಂ ನಿರ್ಮಳಚರಿತಂ ಚರಿಗೆವೊಕ್ಕಂ ಅರಸನ ಬೀಡಂ: ಆದಿಪು, ೫. ೧೦)

ಚರಿತ
[ನಾ] ಆಚಾರ (ಬಗೆಯೊಳ್ಪೊಣ್ಮೆ ದಯಾರಸಂ ಚರಿತದೊಳ್ಕೈಗಣ್ಮೆ ಚಾರಿತ್ರಂ: ಆದಿಪು, ೧. ೫)

ಚರಿತಂ
[ಅ] ತ್ವರಿತವಾಗಿ (ಚರಿತಂ ಬಂದರ್ ಕಣ್ಗೊಪ್ಪಿರಲ್ ವರಭೋಗಿಯರ್: ಪಂಪಭಾ, ೯. ೧೦೨)

ಚರಿತಾರ್ಥ
[ನಾ] ಧನ್ಯ, ಸಾರ್ಥಕಜೀವಿ (ಸಂಸರಣಾಂಭೋರಾಶಿಯಂ ದಾಂಟುವ ಬಗೆಯನೆ ಕಯ್ಕೊಂಡಂ ಎಂದಂದೆ ಮಾವಂ ಚರಿತಾರ್ಥಂ: ಆದಿಪು, ೪. ೮೯)

ಚರು
[ನಾ] ಹವಿಸ್ಸು, ದೇವತೆಗಳಿಗೆ ಅರ್ಪಿಸುವ ನೈವೇದ್ಯ (ಜಳಗಂಧಾಕ್ಷತೆ ಪುಷ್ಪಾವಳಿ ಚರು ದೀಪಪ್ರದೀಪ ಧೂಪಫಲಂಗಳ್ ಕುಳಿಶಾಯುಧನರ್ಚಿಸೆ ತೊಳತೊಳಗಿದವು: ಆದಿಪು, ೭. ೧೦೫)

ಚರುಕ
[ನಾ] ಅನ್ನ (ಅನೇಕ ಭಕ್ಷೋಪದಂಶ ರಸಪ್ರಚುರ ಚಾರುಚರುಕಂಗಳಿಂದಂ: ಆದಿಪು, ೨. ೩೨ ವ)

ಚರ್ಚನ
[ನಾ] ಗಂಧ ಬಳಿಯುವುದು (ವಿಜಯಾಂಗನಾ ಚರ್ಚನೋಚಿತ ಮೃಗಮದಮುಂ ನಿಜಭುಜವಿಜಯಲಕ್ಷ್ಮೀ ಪರಿರಂಭಪ್ರಕಟನ ದಕ್ಷದಕ್ಷಿಣವಿಷಾಣವಿನ್ಯಸ್ತ ಹಸ್ತಮುಂ: ಆದಿಪು, ೧೪. ೯೦ ವ)

ಚರ್ಚರಪೂಜಾ
[ನಾ] ನೃತ್ಯ ಸಂಗೀತಸಹಿತ ಮಾಡುವ ಪೂಜೆ (ಪೂರ್ವರಂಗಪ್ರಸಂಗದೊಳ್ ಚರ್ಚರಪೂಜಾಮಂಗಳ ಪದೋಚ್ಚಾರಣ ಪುಷ್ಪಾಂಜಲಿವಿಕ್ಷೇಪಣಾದಿ ನಾಂದಿವಿಧಿಯಂ ನಿರ್ವರ್ತಿಸಿ: ಆದಿಪು, ೭. ೧೧೫ ವ)

ಚರ್ಚಿತ
[ಗು] ಲೇಪನಗೊಂಡ (ಸಿತಕುಸುಮಶೇಖರಂ ಚರ್ಚಿತಚಂದನಂ ಅತಿವಿಳಾಸವಿಧೃತದುಕೂಲಂ ಧೃತರತ್ನಾರ್ಘ್ಯಂ ಬಂದಂ: ಆದಿಪು, ೧೩. ೧೨)


logo