logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಚಪ್ಪರಿಸು
[ಕ್ರಿ] ತಿಂದು ನಾಲಿಗೆಯಾಡಿಸು (ಮದಾಕೃತಿಯಂ ಮಾಸಿಸಿ ಮುಪ್ಪು ಚಪ್ಪರಿಸೆಯುಂ: ಆದಿಪು, ೧. ೮೧); [ಕ್ರಿ] ಗರ್ವಿಸು (ಕಂಡು ಕಪ್ಪಮೀಯದೆ ಚಪ್ಪರಿಸುವ ಮಂಡಳಿಕರುಮಂ ಅಡಂಗದಾಟವಿಕರುಮಂ: ಆದಿಪು, ೪. ೮೨ ವ)

ಚಮರಜ
[ನಾ] ಚಾಮರ (ವಾಜಿರಾಜಿಶ್ರವಣ ಚಮರಜಶ್ರೇಣಿ ಸಂವೀಜಿತ ಆಶಾಂಬರಭಾಗಂ: ಆದಿಪು, ೪. ೨೪)

ಚಮರೀ
[ನಾ] ಚಾಮರ (ಸುರವಧೂಲೀಲಾವಧೂತ ಪ್ರತಿಕ್ಷಣ ಚಂಚಚ್ಚಮರೀರುಹಂ ಪಟುನಟಪ್ರಾರಬ್ಧಸಂಗೀತಕಂ ತಣಿದಂ ಸಂತತಂ: ಆದಿಪು, ೨. ೭೯); [ನಾ] ಚಮರೀ ಮೃಗ (ಚಮರೀ ಲೋಲ ಲಾಂಗೂಲ ಮಾಲಾವಲಿ ವಿಕ್ಷೇಪಂಗಳಿಂ ತತ್ ಚಮರರುಹ ಮಹಾಶೋಭೆ ಕೈಗಣ್ಮೆ: ಪಂಪಭಾ, ೪. ೧೪)

ಚಮರೀಜ
[ನಾ] ಚಾಮರ (ಮದಕಳಹಂಸೆಯಂ ಪಿಂಡಿದೆ ಪೊದಳ್ದ ಚಮರೀಜಮಾಗೆ ಜಳದೇವತೆಗೆತ್ತಿದ ಪಚ್ಚೆಯ ಸತ್ತಿಗೆಗಳ ಪುದುವೆನಿಪುದು; ಆದಿಪು, ೧೧. ೬೫)

ಚಮರೀಜಾತ
[ನಾ] ಚಾಮರ (ಇವು ಚಮರೀಜಾತಂ ದುಗ್ಧವಾರ್ಧಿ ಫೇನೋಪಮಾನಮಿವು ನಿನಗೆಯೆ ತಕ್ಕುವು: ಆದಿಪು, ೧೩. ೧೮)

ಚಮರೀರುಹ
[ನಾ] ಚಾಮರ (ಸುರವಧೂಲೀಲಾವತಿಧೂತ ಪ್ರತಿಕ್ಷಣ ಚಂಚಚ್ಚಮರೀರುಹಂ ಪಟುನಟಪ್ರಾರಬ್ಧ ಸಂಗೀತಕಂ ತಣಿದಂ: ಆದಿಪು, ೨. ೭೯)

ಚಮೂ
[ನಾ] ಸೇನೆ (ಪ್ರಿಯಗಳ್ಳಭೂಪತಿ ಚಮೂಪ್ರಸ್ಥಾನಮಾಚಕ್ಷತೇ: ಪಂಪಭಾ, ೯. ೯೭)

ಚಮೂಪತಿ
[ನಾ] ದಂಡಾಧಿಪತಿ (ತಮಿಸ್ರಗುಹೆಯ ವಜ್ರದ ಪಡಿ ತತ್ಕ್ಷಿತಿಧರದೆರ್ದೆಯಂತೆ ಚಮೂಪತಿಯಿಂ ತೆಱೆದತ್ತು: ಆದಿಪು, ೧೪. ೫೭)

ಚಮೂರು
[ನಾ] ಜಿಂಕೆ (ಮತ್ಸ್ಯ ಮಕರ ಕುಲಿಶ ಕಲಶ ಕುಳೀರ ವರಾಹ ವಾನರ ಕಂಠೀರವ ಚಮೂರು ಮಯೂರ ಗರುಡ ಫಣಿರಾಜಚಿಹ್ನಂಗಳಪ್ಪ: ಆದಿಪು, ೧೧. ೨೮ ವ)

ಚಮ್ಮಟಿಗೆ
[ನಾ] [ಚರ್ಮಪಟ್ಟಿಕಾ] ಚಾವಟಿ, ಚಾಟಿ (ಅನ್ನೆಗಂ ನಕುಳನುಂ ಅಂಕವಣೆಯುಂ ಬಾಳುಂ ಬಾರುಂ ಚಮ್ಮಟಿಗೆಯುಮಂ ಒರ್ವ ಕೀೞಾಳಿಂ ಪಿಡಿಯಿಸಿಕೊಂಡು ಬಂದು: ಪಂಪಭಾ, ೮. ೫೪ ವ)


logo