logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗತವಿವೇಕ
[ನಾ] ವಿವೇಕರಹಿತ (ಇನ್ನಾವ ಸಂತಸಂ ಗತವಿವೇಕ ಪೇೞ್ ನಿನಗೆ ಅಸಾರಸಂಸಾರದೊಳ್: ಆದಿಪು, ೩. ೬೦)

ಗತಿಚತುಷ್ಟಯ
[ನಾ] [ಜೈನ] ಜೀವದ ನಾಲ್ಕು ಸ್ವರೂಪಗಳು: ನಾರಕ, ತಿರ್ಯಕ್, ಮಾನುಷ, ದೇವ (ಕಷ್ಟಂ ದುಃಖಾನಳಸಂಪ್ಲುಷ್ಟಂ ಚಿಃ ಗತಿಚತುಷ್ಟಯಂ ಪ್ರಾಣಿಗೆ: ಆದಿಪು, ೯. ೫೧)

ಗತಿಸ್ಖಲಿತ
[ನಾ] ನಡೆಯುವಾಗ ಮುಗ್ಗರಿಸುವುದು (ಆತನ ಲಲಿತ ಉತ್ತಾನಶಯಿತ ದರಹಸಿತ ತರಂಗಿತ ಗತಿಸ್ಖಲಿತ ಮುಗ್ಧಜಲ್ಪಿತಾದಿ ಬಾಲ್ಯವಿಳಾಸಂಗಳಿಂದಂ: ಆದಿಪು, ೮. ೫೦ ವ)

ಗದಾಘಾತ
[ನಾ] ಗದೆಯ ಹೊಡೆತ (ಪೊಕ್ಕು ಉಡಿವೆಂ ಪಿಂಗಾಕ್ಷನ ಊರುದ್ವಯಮಂ ಉರು ಗದಾಘಾತದಿಂ ನುಚ್ಚು ನೂಱಾಗೆ ಒಡೆವೆಂ ತದ್ರತ್ನರಶ್ಮಿಪ್ರಕಟಮಕುಟಮಂ: ಪಂಪಭಾ, ೭. ೧೩)

ಗದಾವಿಕ್ಷೇಪ
[ನಾ] ಗದಾಯುದ್ಧದ ವರಸೆ (ಸವ್ಯಾಪಸವ್ಯ ಭ್ರಾಂತೋದ್ಭ್ರಾಂತ ಕರ್ಷಣ ಮಂಡಳಾವರ್ತನಾದಿಗಳಪ್ಪ ಮೂವತ್ತೆರಡು ಗದಾವಿಕ್ಷೇಪದೊಳಂ: ಪಂಪಭಾ, ೧೩. ೯೨ ವ)

ಗದಾಹತಿ
[ನಾ] ಗದೆಯ ಹೊಡೆತ (ಮಹಾಪ್ರಳಯ ಉಲ್ಕೋಪಮ ಮತ್ ಗದಾಹತಿಯಿಂ ಅತ್ಯುಗ್ರ ಆಜಿಯೊಳ್ ಮುನ್ನಂ ಈ ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞ್ದಿಕ್ಕಿ: ಪಂಪಭಾ, ೭. ೧೨)

ಗದಿತ
[ಗು] ಹೇಳಿದ, ನುಡಿದ (ಪರಮಜಿನಗದಿತ ಗುಣಪರಿಕರದೊಳ್ ಕೂಡಿದುದೆ ನಿರುಪಮಂ ಸಮ್ಯಕ್ತ್ವಂ: ಆದಿಪು, ೫. ೫೫)

ಗದ್ಗದ
[ನಾ] ಕಂಠ ಬಿಗಿಯುವುದು ಪರಿತಪಿಸುವುದು (ಕಾಮಗ್ರಹಗ್ರಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸ್ತಂಭ ಕಂಪ ಸ್ವೇದ ವೈವರ್ಣ್ಯಸಂತಾಪನನ ಅನಾಹಾರ ವ್ಯಾಮೋಹ ಗದ್ಗದಾಶ್ರುಮೋಕ್ಷಮೂರ್ಛಾದಿ ನಾನಾ ವಿಕಾರಂಗಳಂ ಒಡನೊಡನೆ ತೋಱುವುದುಂ: ಪಂಪಭಾ, ೪. ೫೯ ವ)

ಗದ್ಯಣ
[ನಾ] ಒಂದು ಚಿನ್ನದ ನಾಣ್ಯ (ಪಲಗೆಗೆ ಪತ್ತು ಸಾಯಿರಮೆ ಗದ್ಯಣಂ ಎಂದಿರದೆ ಒಡ್ಡಿ ತಾಮ್ ಎರೞ್ವಲಗೆಯಂ ಆಡಿ ಸೋಲ್ತೊಡೆ: ಪಂಪಭಾ, ೬. ೭೨)

ಗದ್ಯಾಣ
[ನಾ] ಗದ್ಯಣ (ಒಡ್ಡಮಂ ಪೇೞಿಂ ಎನೆ ಪೊೞ್ತುಪೋಗಿಂಗಂ ಅೞ್ತಿಗಂ ಆಡುವ ತಮ್ಮುತಿರ್ವರ ಪಲಗೆಗೆ ಸಾಯಿರ ಗದ್ಯಾಣದ ಪೊನ್ನೆ ಸಾಲ್ಗುಂ ಅಗ್ಗಳಂ ಬೇಡ: ಪಂಪಭಾ, ೬, ೭೧ ವ)


logo