logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗಣಭೃತ್
[ನಾ] ಗಣಧರ (ಪುರುದೇವಾದಿಜಿನೇಂದ್ರಮಾಳೆ ಗಣಭೃತ್ಸಂತಾನಮೆಂದೀ ಪರಂಪರೆಯಿಂ ವಿಶ್ರುತ ವೀರಸೇನಾಚಾರ್ಯಪರ್ಯಂತಮಾಗಿರೆ: ಆದಿಪು, ೧. ೩೫)

ಗಣಾಗ್ರಣಿ
[ನಾ] ಗಣಧರರಲ್ಲಿ ಮೊದಲಿಗನಾದ ವೃಷಭಸ್ವಾಮಿ (ಆ ವೃಷಭಗಣಾಗ್ರಣಿ ಪೇೞ್ದುದಂ ಸವಿಸ್ತರದೊಳೆ ವರ್ಧಮಾನಜಿನಸನ್ನಿಧಿಯೊಳ್ ವಿಪುಳಾದ್ರಿಯೊಳ್: ಆದಿಪು, ೧. ೪೧)

ಗಣಾಧಿಪ
[ನಾ] ಗಣಧರ, ತೀರ್ಥಂಕರನ ಶಿಷ್ಯರ ಗುಂಪಿನ ಮುಂದಾಳು (ಕೇಳ್ದೆವಾವಿದಂ ತಿಳಿಯೆ ಗಣಾಧಿಪರ್ ಬೆಸಸೆ ರುಂದ್ರಜಿನೇಂದ್ರ ಸಭಾಂತರಾಳದೊಳ್: ಆದಿಪು, ೧೫. ೧೧)

ಗಣಿಕೆ
[ನಾ] ಸೂಳೆ (ಸ್ನಾನಾರ್ಥಂ ಒಂದು ಕಳಶಮಂ ನಿಯಮನಿಧಾನಂ ಎೞಲೆ ಪಿಡಿದು ಅಮಳಿನ ಗಂಗಾನದಿಗೆ ವಂದು ಸುರತನಿಧಾನಿ ಅಮರೇಂದ್ರಗಣಿಕೆಯಂ ಮುನಿ ಕಂಡಂ: ಪಂಪಭಾ, ೨. ೪೧)

ಗಣಿತ
[ಗು] ಲೆಕ್ಕಾಚಾರ ಮಾಡಿದ (ಶಾರದಶ್ರೀಯನಿದಿರ್ಗೊಂಡು ಅನೇಕ ಗಣಕಗಣಗಣಿತ ಶುಭದಿನನಕ್ಷತ್ರಮುಹೂರ್ತದೊಳ್: ಆದಿಪು, ೧೧. ೯ ವ); ಲೆಕ್ಕ (ಉತ್ಕೋಪದಹನದೊಡನೆ ಪೃಷತ್ಕಂಗಳ್ ಕೋಟಿಗಣಿತದಿಂದ ಉಱುವಿನಂ ಆರ್ದ ಉತ್ಕಚದಿಂ ಉಱದೆ ಘಟೋತ್ಕಚನಂ ಬಿಟ್ಟು ಮೂರ್ಛೆವೋಪಿನಂ ಎಚ್ಚಂ: ಪಂಪಭಾ, ೧೧. ೮)

ಗಣಿದ
[ನಾ] [ಗಣಿತ] ಎಣಿಕೆ, ಲೆಕ್ಕ (ಗಣಿದಮಿದೊಂದುಮಿಲ್ಲ ನಿನಗೆ ಈ ಖಳಸಂಸೃತಿಯೆಂಬುದೊಂದು ಱಾಟಣದೊಳಗೆ: ಆದಿಪು, ೩. ೭೧); [ನಾ] ಲೆಕ್ಕಚಾರ (ಎನ್ನಣುಗಿನ ಅಳಿಯಂಗೆ ಎನ್ನಿಂ ಮೇಗಿಲ್ಲ ಕೂರ್ಪವರ್ ಇಂತಿದೇಂ ಗಣಿದದ ಎಡೆಯೇ: ಆದಿಪು, ೪. ೯೦); [ನಾ] [ಬೇಟೆಯಾಡಬೇಕಾದ ಪ್ರಾಣಿಗಳ] ಸಂಖ್ಯೆ (ಮೃಗಮಂ ಗಾಳಿಯಂ ಇರ್ಕೆಯಂ ಪಕ್ಕೆಯಂ ಗಣಿದಮಂ ಕಂಡಿಯಂ ಮಾರ್ಕಂಡಿಯಂ ಪುಗಿಲಂ ಪೋಗಂ: ಪಂಪಭಾ, ೫. ೪೩)

ಗಣಿನೀ
[ನಾ] ಬ್ರಹ್ಮಚಾರಿಣಿ, ಆರ್ಯಿಕೆ (ಸುಪ್ರಭೆಯುಂ ಸುದರ್ಶನ ನಾಮ ಗಣಿನೀಸಮಕ್ಷದೊಳ್ ರತ್ನಾವಳಿಯಂ ನೋಂತು ಅಚ್ಯುತಕಲ್ಪದೊಳ್ ದೇವನಾಗಿ ಪುಟ್ಟಿದಳ್: ಆದಿಪು, ೩. ೬೫ ವ)

ಗಣೋಪಗ್ರಹಣ
[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ, ಗಣವನ್ನು ಸೇರುವುದು (ಗಣೋಪಗ್ರಹಣ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಗತಜೀವಿತನಾಗು
[ಕ್ರಿ] ಸಾಯು, ಮರಣಿಸು (ಅತಿಬಳಕೃಷ್ಣಂ ಗತಜೀವಿತನಾಗೆ ಮಹಾಬಳಂ ಮಹಾವ್ರತದಿಂದನ್ವಿತಮತಿ ಸಮಾಧಿಗುಪ್ತವ್ರತಿಯುಪದೇಶದೊಳೆ ಪುಟ್ಟಿದಂ ಪ್ರಾಣತದೊಳ್: ಆದಿಪು, ೩. ೭೭)

ಗತಪ್ರಾಣನಾಗು
[ಕ್ರಿ] ಪ್ರಾಣ ಕಳೆದುಕೊ, ಸಾಯು (ಪದ್ಮಪತ್ರೌಘಂಗಳಿಂ ತಮ್ಮಣ್ಣಂಗೆ ನೀರಂ ತೀವಿಕೊಂಡು ಸರೋವರದಿಂದ ಪೊಱಮಟ್ಟು ಒಂದೆರಡಡಿಯನಿಡುತೆ ಗತಪ್ರಾಣನಾಗಿ ಬಿೞ್ದಿರ್ದಂ: ಪಂಪಭಾ, ೮. ೩೯ ವ)


logo