logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗಂಧವಹ
[ನಾ] ಗಾಳಿ (ಮೃಗಮದದ ಅಗರುವ ಕಪ್ಪುರದ ಕಂಪುಮಂ ಸೂಡಿದ ಬಾಸಿಗದ ಪೊಸಗಂಪನಿಂಬಾಗೊಗೆದಿರೆ ಮಾಡಿದುದು ಚಮರರುಹಗಂಧವಹಂ: ಪಂಪಭಾ, ೧೪. ೨೫)

ಗಂಧವಾರಿ
[ನಾ] ಶ್ರೀಗಂಧದ ಪರಿಮಳದ ನೀರು (ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್ ಓಕುಳಿ ಚಂದನ ಗಂಧವಾರಿಯೊಳ್ ಪಂಪಭಾ, ೧೪. ೨೦)

ಗಂಧವಾಹ
[ನಾ] ಗಾಳಿ ಗಂಧವಹ (ಆಮೋದದಿಂ ಎತ್ತಂ ಗಂಧವಾಹಂ ಮಗಮಗಿಸೆ ಬೆಡಂಗೀ ನಗೇಂದ್ರೋಪಕಂಠಂ: ಆದಿಪು, ೧೩. ೬೮)

ಗಂಧಶಾಳಿ
[ನಾ] ಸುಗಂಧಯುಕ್ತ ಬತ್ತ, ಕಮ್ಮಗಡಲೆ ಬತ್ತ (ದೇವಮಾತೃಕಮೆನಿಪ್ಪ ಪೊಲಂ ನವಗಂಧಶಾಳಿಯಿಂ ಬೆಳೆವುದು ರಮ್ಯ ನಂದನ ವನಾಳಿ ವಿಯೋಗಿಜನಕ್ಕೆ ಬೇಟಮಂ ಬಳೆವುದು: ಪಂಪಭಾ, ೧. ೫೪)

ಗಂಧಶಾಳಿವನ
[ನಾ] ಗಂಧಶಾಲಿಯ ಗದ್ದೆ (ಪೊಂಬಣ್ಣದ ಕೆಂಪಿಡಿದಿರೆ ಸೊಗಯಿಪುವು ಗಂಧಶಾಳಿವನಂಗಳ್: ಆದಿಪು, ೧. ೬೦)

ಗಂಧಸಿಂಧುರ
[ನಾ] ಗಂಧಗಜ (ವಜ್ರದಂತ ಚಕ್ರವರ್ತಿ ಆ ಸಾಮಂತಾಂತಃಪುರ ಪರಿಮಿತಪರಿವಾರಪರಿವೃತನುಂ ಬಂಧುರ ಗಂಧಸಿಂಧುರಾರೂಢನುಂ ಆಗಿ: ಆದಿಪು, ೪. ೨೩ ವ)

ಗಂಧಾಂಧ
[ಗು] ಸುಗಂಧದಿಂದ ಸೊಕ್ಕಿದ (ಶಾಳಿವನಗಧಾಂಧ ದ್ವಿರೇಫಾಳಿ ಕಣ್ಗೊಳಿಸಿತ್ತೊರ್ಮೆಯೆ ಬಂದುದಂದು ಶರದಂ: ಪಂಪಭಾ, ೭. ೭೧)

ಗಂಧೇಭ
[ನಾ] ಮದ್ದಾನೆ (ರಿಪುಜನದ ಪೆರ್ಚಿಗಂ ಪರಾಂಗನಾಜನದ ಮೆಚ್ಚಿಂಗಂ ಮೂಗಿಱಿವಂತೆ ಸೊಗಯಿಸುವ ಗಂಧೇಭವಿದ್ಯಾಧರನ ಮೂಗು: ಪಂಪಭಾ, ೨. ೩೯ ವ)

ಗಂಧೋದಕ
[ನಾ] ಸುಗಂಧದ ನೀರು, ಪನ್ನೀರು (ಘೃತ ಕ್ಷೀರ ದಧಿ ನಾಳೀಕೇರತೋಯ ಆಮ್ರರಸ ಇಕ್ಷರಸ ಗಂಧಧೋದಕಾದಿಗಳಿಂ ಮಾಡುವ ಸವನಮುಂ: ಆದಿಪು, ೧೫. ೧೩ ವ)

ಗಂಭೀರ
[ಗು] ಗಹನವಾದ, ಘನವಾದ (ಅಂಭೋಧಿಯಂತೆ ಗಂಭೀರಾಶಯರುಂ ಆದಿತ್ಯನಂತೆ ನಿರ್ಧೂತತಮಸ್ತಮರುಂ ಚಂದ್ರನಂತೆ ಸರ್ವಸತ್ತ್ವಸೌಮ್ಯರುಂ: ಆದಿಪು, ೪. ೯೫ ವ); [ಗು] ಆಳವಾದ (ಕಣ್ಗೊಪ್ಪಿ ತೋರ್ಪುದಿದು ಉತ್ಪ್ರೇಂಖತ್ ಅಸಂಖ್ಯ ಶಂಖಧವಳಂ ಗಂಭೀರನೀರಾಕರಂ: ಪಂಪಭಾ, ೪. ೨೪)


logo