logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗಂಡಗುಣ
[ನಾ] ಪರಾಕ್ರಮದ ಗುಣ (ಎನಿತಳವುಳ್ಳೊಡಂ ದ್ವಿಜನ ಗಂಡಗುಣಕ್ಕೆ ಅಗಿವನ್ನರಾರೊ: ಪಂಪಭಾ, ೧೨. ೪೧)

ಗಂಡಗರ್ವ
[ನಾ] ಪೌರುಷದ ಹೆಮ್ಮೆ (ತ್ರಿಣೇತ್ರನೊಳ್ ಕಾದಿ ಪಾಶುಪತಾಸ್ತ್ರಮಂ ಪಡೆದ ಕದನತ್ರಿಣೇತ್ರನ ಗಂಡಗರ್ವಮುಮಂ: ಪಂಪಭಾ, ೯. ೫೨ ವ)

ಗಂಡಗಾಡಿ
[ನಾ] ಪೌರುಷದ ಸೊಬಗು (ಪಡೆಮೆಚ್ಚೆ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಕನಕಲತೆಯೆಂಬ ನಾಗಕನ್ನೆ ಕಣ್ಬೇಟಗೊಂಡು: ಪಂಪಭಾ, ೪. ೧೫ ವ)

ಗಂಡಭಿತ್ತಿ
[ನಾ] ಕೆನ್ನೆಯೆಂಬ ಗೋಡೆ (ಮಾದ್ಯತ್ ಗಜಗಂಡಭಿತ್ತಿ ಕಷಣ ಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದಿಲ್ಲಿ ಚಂದನರಸಂ ಕೆಂಬೊನ್ನ ಟಂಕಂಗಳೊಳ್: ಪಂಪಭಾ, ೪. ೨೨)

ಗಂಡಮಚ್ಚರ
[ನಾ] ಪರಾಕ್ರಮಿಯ ಅಸೂಯೆ (ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚವಣಿಗೆಯ ಅಂಕಕಾಱರ್ ಎಕ್ಕತುಳಕ್ಕೆ ಎಕ್ಕೆಯಿಂ ಸೂೞೇಱಿಱಿವಂತೆ ಒರ್ವರ್ ಒರ್ವರೊಳ್ ಕಾದೆ: ಪಂಪಭಾ, ೧೨. ೭೬ ವ)

ಗಂಡರೂಪು
[ನಾ] ಗಂಡಸಿನ ಆಕೃತಿ, ಗಂಡಿನ ವೇಷ (ಕುಲುಂ ಚಲಮುಂ ದೊರೆಯುಂ ಕಿಡೆ ಬಾೞ್ವಂ ಗಂಡರೂಪಿನೊಳ್ ಗಂಡನಲ್ತು ಪೆಂಡತಿಯೆ ವಲಂ: ಆದಿಪು, ೧೨. ೯೬);

ಗಂಡವಳ್ತಿ
[ನಾ] ಗಂಡುಬೀರಿ (ವಿವಿಧಗಂಧಂಗಳಂ ಆಂ ಅವಯವದೊಳ್ ಮಾಡುವ ಘಟ್ಟಿವಳ್ತಿಯೆಂ ದೇವಿ ಗಂಡವಳ್ತಿಯೆಂ ಅಲ್ಲೆಂ: ಪಂಪಭಾ, ೮. ೫೬)

ಗಂಡವಾತು
[ನಾ] ಶೌರ್ಯದ ಮಾತು (ನಿನಗಪ್ಪುದು ಈ ಅೞಿನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಂ ಆತನ ಒಡ್ಡೞಿಯದ ಗಂಡವಾತಂ: ಪಂಪಭಾ, ೩. ೧೬)

ಗಂಡಶೈಳ
[ನಾ] ಕಲ್ಗುಂಡು (ಗಂಡಶೈಳಾಭೀಳ ಶಿಳಾಯಂತ್ರ ಭಯಂಕರಂಗಳುಂ ಪ್ರಳಯಕಾಳಾನಳವರ್ಷಶಂಕಾಕಾರಿ ಹುತವಹವರ್ಷಾಗ್ನಿಯಂತ್ರಭಯಾನಕಂಗಳುಂ: ಆದಿಪು, ೧೩. ೫೭ ವ)

ಗಂಡಸ್ಥ
[ನಾ] ದವಡೆ, ಕಪೋಲ ಪ್ರದೇಶ (ದಿವ್ಯಸಂಭವಂಗಳಪ್ಪ ಶ್ವೇತಾಶ್ವಂಗಳೊಳ್ ಪೂಡಿದ ದಿವ್ಯರಥಮುಮಂ ದಧೀಚಿಗಂಡಸ್ಥಮಪ್ಪ ಗಾಂಡೀವಮೆಂಬ ಬಿಲ್ಲುಮಂ .. .. ಕೆಯ್ಕೊಂಡು: ಪಂಪಭಾ, ೫. ೭೭ ವ)


logo