logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗಾಣ
[ನಾ] ಗಾಯಕ (ಜಿನುಗುವ ತುಂಬಿಯಿಂಚರಮೆ ಗಾಣರ ಕಾಕಳಿ ಕೂಡೆ ಸೋರ್ವ ಮಾವಿನ ಸೊನೆ ಗಂಧಸಿಂಧುರಮದಂ: ಆದಿಪು, ೧೩. ೬)

ಗಾಣಿಕ್ಯ
[ನಾ] ಸೂಳೆಯರ ಗುಂಪು (ಸಕಳಕ್ಷ್ಮಾಚರ ಖೇಚರಾಂಚಿತ ಮಹಾಮಾಣಿಕ್ಯಗಾಣಿಕ್ಯ ಹಾಸ್ತಿಕ ರತ್ನೋರ್ಜಿತ ಚಕ್ರವರ್ತಿವಿಭವಂ: ಆದಿಪು, ೧೬. ೮)

ಗಾತ್ರ
[ನಾ] ಆನೆಯ ಮುಂಗಾಲು (ಹ್ರಸ್ವಚೂಚುಕನುಂ ಸಯವೃತ್ತಾಪಸ್ಕಾರನುಂ ಸುಸಂಚಿತ ಪ್ರೋಹಪಳಿಹಸ್ತ ಗಾತ್ರನುಂ: ಆದಿಪು, ೧೨, ೫೬ ವ); [ನಾ] ದೇಹ (ನೀಂ ಬರೆ ಪೆಱತೇಂ ಕಂಸಾರೀ ಯುಷ್ಮತ್ ಪದಪಾಂಸುಗಳಿಂದೆ ಆಂ ಪವಿತ್ರಗಾತ್ರನೆಂ ಆದೆಂ: ಪಂಪಭಾ, ೯. ೩೨)

ಗಾತ್ರಾಪರ
[ನಾ] ಆನೆಯ ಮುಂಗಾಲು ಮತ್ತು ಹಿಂಗಾಲು (ಅರ್ಧಚಂದ್ರಾಕಾರವಿಂಶತಿನಖನುಂ ಅಪೂರ್ವೋಚಿತ ಮಾಂಸಸ್ಫೀತನೋಪದಿಗ್ಧ ಗಾತ್ರಾಪರನುಂ: ಆದಿಪು, ೧೨. ೫೬ ವ)

ಗಾದಿಗೆ
[ನಾ] [ಖಾತಿಕಾ] ಕಂದಕ (ಮಧುರಾಪುರಮಂ ಬಿಸುಟ್ಟು ಪೋಗಿ ದ್ವಾರಾವತಿಯಂ ಸಮುದ್ರಮೆ ನೀರ್ಗಾದಿಗೆಯಾಗಿ ಮಾಡಿದೆಂ: ಪಂಪಭಾ, ೬. ೨೬ ವ)

ಗಾನಪಾಠ್ಯ
[ನಾ] ಹಾಡಲು ಬಳಸುವ ಪಠ್ಯ, ಹಾಡಿನ ಸಾಹಿತ್ಯ ಥವಾ ಹಢುಗಾರಿಕೆ ಮತ್ತು ಸಂಭಾಷಣೆ ? (ಗಾನಪಾಠ್ಯದೊಳ್ ವಾಚಕಮಂ ತುಂಗಕುಚೆ ಮೆಱೆದಳ್ ಆ ದಿವಿಜಾಂಗನೆಗೆ ಆಹಾರ್ಯ ಸಾತ್ವಿಕಂ ನಿಜಮೆ ವಲಂ: ಆದಿಪು, ೯. ೨೮)

ಗಾಯ
[ನಾ] ಮಲ್ಲಯುದ್ಧದ ಪಟ್ಟು (ಕರಣಂಗಳ ಗಾಯಂಗಳ ಪರಿಣತಿಯಂ ಮೆಱೆದು ಪೊಣರ್ದು: ಆದಿಪು, ೧೪. ೧೧೦)

ಗಾರ್ಹಪತ್ಯ
[ನಾ] ತ್ರೇತಾಗ್ನಿಗಳಲ್ಲಿ ಒಂದು (ಶರೀರ ಸಂಸ್ಕಾರಾದಿ ಗಾರ್ಹಪತ್ಯ ದಕ್ಷಿಣಾಗ್ನಿ ಆಹವನೀಯವೆಂಬ ಪೆಸರಂ ಪಡೆದ ಅಗ್ನಿತ್ರಯಂಗಳೊಳ್: ಆದಿಪು, ೧೫. ಅ೬ ವ)

ಗಾವರ
[ನಾ] ಧ್ವನಿ (ಉಣ್ಮುವ ಉಯ್ಯಲ ಪೊಸ ಗಾವರಂ ಪುಗಿಲೊಳ್ ಏಂ ಎಸೆದತ್ತೋ ಬಸಂತಮಾಸದೊಳ್: ಪಂಪಭಾ, ೨. ೧೨); [ನಾ] ದುಂಬಿಯ ಝೇಂಕಾರ (ತುಂಬಿಯ ಗಾವರಂಗಳಂ ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲ್ಗಿಡೆ ನಾಡೆ ವಿತರ್ಕದಿಂ ಬೆರಲ್ಮಿಡಿದು ಗುಣಾರ್ಣವಂ ನೆಱೆಯೆ ನಿಟ್ಟಸಿದಂ ಬೆಳಗಪ್ಪ ಜಾವಮಂ ಪಂಪಭಾ, ೪. ೧೧೦)

ಗಾವರಿಸು
[ನಾ] ಝೇಂಕರಿಸು (ಸೊವಡೊಳ್ ಕಡುಸೊರ್ಕುಸೊರ್ಕಿ ಗಾವರಿಸುವ ತುಂಬಿ: ಆದಿಪು, ೨.೫)


logo