logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗರ್ಭೋದಯಾದ್ರಿ
[ನಾ] [ಗರ್ಭ+ಉದಯಾದ್ರಿ] ಗರ್ಭವೆಂಬ ಉದಯಾಚಲ (ಭರತಕುಲಗಗನದಿನಕರಂ ಅರಾತಿಕುಳಕಮಳ ಹಿಮಕರಂ ಶಿಶು ತೇಜೋವಿರಚನೆಯುಂ ಕಾಂತಿಯುಂ ಆವರಿಸಿರೆ ಗರ್ಭೋದಯಾದ್ರಿಯಿಂದ ಉದಯಿಸಿದಂ: ಪಂಪಭಾ, ೧. ೧೪೫)

ಗರ್ಭೋದರ
[ನಾ] ಬಸಿರಿನ ಒಳಗು (ಕೊಂತಿಯ ದಿವ್ಯಗರ್ಭೋದರಮೆಂಬ ಶುಕ್ತಿಪುಟೋದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋದ ಬಿಂದುವಂ ಇಂದ್ರಂ ಸಂಕ್ರಮಿಸಿ ನಿಜನಿವಾಸಕ್ಕೆ ಪೋದಂ: ಪಂಪಭಾ, ೧. ೧೩೯ ವ)

ಗರ್ವ
[ನಾ] ಅಹಂಕಾರ (ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ: ಪಂಪಭಾ, ೧. ೧೩); [ನಾ] ಉಷ್ಣತೆ (ಬಿಗಿಯಪ್ಪಿದಪ್ಪುಗಳ್ ಕಳೆದುವು ನಾಣುಮಂ ಕಿಱಿದು ಜಾಣುಮನೞ್ಕಱನೀವ ಚುಂಬನಂ ಕಳೆದುವು ಗರ್ವಮಂ ಕಳೆದುದಂತಿರ್ವರ ಮನ್ಮಥದ್ರವಂ: ಪಂಪಭಾ, ೫. ೨೭)

ಗರ್ವವ್ಯಾಲೆ
[ನಾ] ಗರ್ವದಿಂದ ಸೊಕ್ಕಿದವಳು (ಅಂತು ಬಂದ ಬಸಂತದೊಳ್ ಮದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯುಂ ಅಪ್ಪುದಱಿಂ ವನಕ್ರೀಡಾನಿಮಿತ್ತದಿಂ ಪೋಗಿ: ಪಂಪಭಾ, ೨. ೧೫ ವ)

ಗವಾಕ್ಷ
[ನಾ] ಬೆಳಕಿಂಡಿ (ರಾಜಹಂಸ ಪಾರಾವತ ಮಿಥುನಂಗಳ್ ಉತ್ತುಂಗ ಪ್ರಾಸಾದಶಿಖರ ಮಣಿಗವಾಕ್ಷ ಅಂತರಾಳ ವಿವಿಧ ಗೃಹಾಂತರಗತಂಗಳಾದುವು: ಪಂಪಭಾ ಪರಿಷತ್ತು, ೪. ೪೯ ವ)

ಗವೇಷಣ
[ನಾ] ಹುಡುಕುವುದು (ಸಭೆಯೊಳ್ ಮಾಷಮುಖದಂತೆ ದೋಷಗವೇಷಣಪರರಪ್ಪರೆಂದೊಡದು ತೆಗೞಲ್ತೇ: ಆದಿಪು, ೧. ೨೧)

ಗವ್ಯೂತಿ
[ನಾ] ಎರಡು ಕ್ರೋಶ ದೂರ, ಒಂದು ಗಾವುದ (ಮತ್ತಂ ಘಾತಿಗಳ ಕೇಡಿನೊಳ್ ಗವ್ಯೂತಿಚತುಷ್ಟಯ ಸುಭಿಕ್ಷತೆ ಮೊದಲಾಗೆ: ಆದಿಪು, ೧೦. ೪೨ ವ)

ಗಸಣಿ
[ನಾ] ಗೊಡವೆ (ಮಾಡುವ ಕಿಡಿಸುವ ಗಸಣಿಗೆ ನಾಡೆಯುಮದು ಪೊಱಗು ಸಹಜನಿಯತಸ್ಥಿತಿ ನಾಡಾಡಿಯ ನರರ್ಗದು ಬಗೆಯಲ್ ಕೂಡದು: ಆದಿಪು, ೧. ೪೬)

ಗಹನ
[ನಾ] ಕಾಡು (ಎನ್ನ ಪಾಪದ ಫಲಮಂ ಸವಿನೋಡೆ ಪೊಕ್ಕೆನೊಡನೊಗೆದ ವಿಚಾರಣಚರಿತಮೆಂಬ ಗಹನಾಂತರಮಂ: ಆದಿಪು, ೩. ೩೫); [ನಾ] ದಟ್ಟತೆ (ಅಂತು ಆ ವನಗಹನಮೆಲ್ಲಂ ದಹನಮಯಮಾದ ಪ್ರಸ್ತಾವದೊಳ್ ವಿಸ್ಮಯಮಾಗೆ: ಪಂಪಭಾ, ೫. ೯೭ ವ); ಅತಿಶಯ (ಖಾಂಡವವನದಹನಪ್ರಪಂಚದಿಂ ಬೞಿಯಂ ಅರಾತಿವನದಹನ ತೀವ್ರಪ್ರತಾಪಗಹನಕ್ಕೆ ಮುನ್ನಂ ಅಳ್ಕಿ ಪರಮಂಡಳಿಕರ್ ಇತ್ತುಂ ತೆತ್ತುಂ ಬೆಸಕೆಯ್ಯೆ: ಪಂಪಭಾ, ೬. ೧. ವ); [ಗು] ಆಳವಾದ (ಗುಹಾಗಹನಗಹ್ವರ ಉದರ ವಿಶೀರ್ಣಂ ಆದಂದು ಅದೇಂ ಮುಹುಃಪ್ರಕಟಮಾದುದು ರವಿತನೂಭವಜ್ಯಾರವಂ: ಪಂಪಭಾ, ೧೨. ೧೩೬)

ಗಹನಭೂಮಿ
[ನಾ] ಅರಣ್ಯಪ್ರದೇಶ (ಇಂದ್ರಿಯಲುಬ್ಧಕಸ್ವಚ್ಛಂದವಿಹಾರ ಗಹನಭೂಮಿಯುಂ ದುರ್ಯಶಃಪಾಂಶುಪ್ರಸರ ಮಹಾವಾತ್ಯೆಯುಂ ಅಪ್ಪ: ಆದಿಪು, ೧೪. ೧೨೨ ವ)


logo