logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗರುಡಿ
[ನಾ] ವ್ಯಾಯಾಮಶಾಲೆ (ನಾವೆಲ್ಲಮೊಂದೆ ಗರುಡಿಯೊಳೋದಿದ ಮಾನಸರೆಂ: ಪಂಪಭಾ, ೯. ೪೮ ವ)

ಗರುತ್ಮ
[ನಾ] ಗರುಡ (ವನನಿಧಿಯಿಂದಂ ಚಂದ್ರಂ ವಿನತಾ ಉದರದಿಂ ಗರುತ್ಮಂ ಉದಯಾಚಳದಿಂ ದಿನಪಂ ಒಗೆವಂತೆ ಪುಟ್ಟಿದಂ ಅನಿವಾರ್ಯ ಸುತೇಜಂ ಎನಿಪಂ ಇನಜನ ತನಯಂ: ಪಂಪಭಾ, ೧. ೧೨೧)

ಗರ್ಜತ್
[ಗು] ಗರ್ಜಿಸುವ (ಮೃಗಪತಿಪ್ರಧ್ವಾನಗರ್ಜದ್ಗುಹಂ ಮದಿರೋನ್ಮತ್ತ ನಿಳಿಂಪ ಕಿಂಪುರುಷಕಾಂತಾರಬ್ಧಸಂಗೀತಂ ಒಪ್ಪಿದುದು: ಪಂಪಭಾ, ೭. ೭೨)

ಗರ್ತ
[ನಾ] ನೀರಿನ ಸುಳಿ (ಸಂಸಾರವಾರಾಶಿ ಮಧ್ಯಾಸ್ಪದ ಸರ್ವಗ್ರಾಸಿ ಭೀಮಾಂತಕ ವದನಮಹಾಗರ್ತದೊಳ್ ಮಗ್ನರಾದರ್: ಆದಿಪು, ೯. ೫೮)

ಗರ್ಬ
[ನಾ] ಗರ್ವ (ಮಲ್ಲರನೆ ಪೋರಿಸಲುಂ ಪಿರಿದೊಂದು ದೋಹಳಂ ನೆಗೞ್ದುದು ಗರ್ಭದರ್ಭಕನ ದೋರ್ಬಲಗರ್ಬಮನಂದು ಪೇೞ್ವವೊಲ್: ಆದಿಪು, ೮. ೪೮)

ಗರ್ಭಂ
[ನಾ] ಸೇರಿದ, ಬೆರೆಸಿದ (ಚಾಗಬೀರದ ಪೞಯಿಗೆಯನೆತ್ತಿಸಿ ಪಂಚರತ್ನಗರ್ಭಂಗಳಪ್ಪ ಮಂಗಳಜಳಂಗಳಂ ಮಿಂದು: ಪಂಪಭಾ, ೧೨. ೧೦೮ ವ)

ಗರ್ಭಗೃಹ
[ನಾ] ಒಳಕೋಣೆ, ಗರ್ಭವೆಂಬ ಮನೆ (ಗರ್ಭಗೃಹದಿಂದಂ ಮೇಣ್ಪೊಱಮಟ್ಟವೊಲಾ ಗುಹೆಯಿಂ ಪೊಱಮಟ್ಟುದು ಸೈನ್ಯಮಂಬುಧಿಧ್ವನಿಯಿಂದಂ: ಆದಿಪು, ೧೩. ೫೪)

ಗರ್ಭಚಿಹ್ನ
[ನಾ] ಗರ್ಭದ ಲಕ್ಷಣಗಳು (ಗರ್ಭಚಿಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ: ಪಂಪಭಾ, ೧. ೧೨೦)

ಗರ್ಭದರ್ಭಕ
[ನಾ] ಬಸಿರಿನಲ್ಲಿನ ಮಗು (ಹಿಮಧವಳ ಆತಪತ್ರಮನೆ ಪೋಲೆ ಮುಖೇಂದುವ ಬೆಳ್ಪು ಪೂರ್ಣಕುಂಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು ಪತಾಕೆಯೊಂದು ವಿಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಕೊಂಡುದವಳ್ಗೆ ಗರ್ಭಚಿಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ: ಪಂಪಭಾ, ೧. ೧೨೦)

ಗರ್ಭದೋಹಳ
[ನಾ] ಬಸಿರಿಯ ಬಯಕೆ (ಇಂತಾದೊಡೆಮಗೆ ಬಾಹುಬಲಿಯ ಸಮರಸಂಘಟ್ಟದೋಹಳಮಿದು ದರಿದ್ರಗೇಹಿನೀ ಗರ್ಭದೋಹಳದಂತಾದುದು: ಆದಿಪು, ೧೪. ೧೦೨ ವ)


logo