logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಗಭೀರ
[ಗು] ಆಳವಾದ (ಅರಸಂ ತುಂಗತರಂಗಭಂಗುರ ಗಭೀರಾಂಭೋಧಿಯಂ ಪೊಕ್ಕನೊಂದೆ ರಥಂ ಸಾರಥಿಯೊರ್ವಂ ಆರುಮೊಡನಿಲ್ಲ: ಆದಿಪು, ೧೨. ೧೨೫)

ಗಭೀರನಿನದ
[ನಾ] ಗಭೀರಧ್ವನಿ (ದುಂದುಭಿ ಗಭೀರನಿನದಂ ದುಂದುಭಿ ಸಂವತ್ಸರೋದ್ಭವಂ: ಆದಿಪು, ೧. ೩೩)

ಗಮಕ
[ನಾ] ಸಂಗೀತ ಸ್ವರ ವಿಶೇಷ (ಪದಕೊರಲ್ ಇಂಪಂ ಅಪ್ಪುಕೆಯೆ ಕೊಂಕು ನಯಂ ಗಮಕಂಗಳಿಂ ಪೊಡರ್ ಕೊದಳ್ ಎೞೆದಿಕ್ಕಿದಂತೆ ಸುತಿಯೊಳ್ ಸಮವಾಗಿರೆ .. .. ಮೇನಕೆ ಸರಸ್ವತಿ ಬಾಯ್ದೆಱೆದಂತೆ ಪಾಡಿದಳ್: ಪಂಪಭಾ, ೭. ೮೮)

ಗಮಕಿ
[ನಾ] ಕಾವ್ಯ ವಾಚಿಸುವವನು (ಕವಿ ಗಮಕಿ ವಾದಿ ವಾಗ್ಮಿ ಪ್ರವರರ ಪಂಡಿತರ ನೆಗೞ್ದ ಸಬ್ಬವದವರೊಡನೆ ಅಂತು ಒಸೆದ ಅನ್ನವಾಸದೊಳ್ ಇರ್ದನಾಗಳ್ ಹರಿಗಂ: ಪಂಪಭಾ, ೩. ೮೦)

ಗಮನ
[ನಾ] ನಡೆಯುವಿಕೆ (ಮಹೀಪತಿನಿವೇದನ ಸಂಭ್ರಮಗಮನಸ್ಖಲಿತ ವೃದ್ಧಕಂಚುಕಿನಿಕರಮುಂ: ಆದಿಪು, ೮. ೩೫ ವ)

ಗಮ್ಮನೆ
[ಅ] ಬೇಗನೆ, ಶೀಘ್ರವಾಗಿ (ತತ್ ಸಚಿವೋತ್ತಮಂ ಒಳ್ಳಿಕೆಯ್ದಂ ಇನ್ನಂತುಟು ಪೇೞ್ದು ಕೆಮ್ಮಗಿರೆ ಗಮ್ಮನೆ ಕಮ್ಮರಿಯೋಜನಾಗನೇ: ಆದಿಪು, ೨. ೬೧)

ಗರ
[ನಾ] ಗ್ರಹ, ದುಷ್ಟ ಶಕ್ತಿ (ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್ ಎಂದು ಶಕ್ತಿಯನಿತ್ತಂ: ಪಂಪಭಾ, ೧. ೧೦೩)

ಗರಮುಟ್ಟು
[ಕ್ರಿ] ಗ್ರಹವು ತಾಗುವ ಹಾಗೆ ಅಥವಾ ಗ್ರಹಗಳವರೆಗೂ (ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್ ಎಂದು ಶಕ್ತಿಯನಿತ್ತಂ: ಪಂಪಭಾ, ೧. ೧೦೩)

ಗರಳ
[ನಾ] ವಿಷ (ಭಯಾನಕೋಭಯತಟ ಗುಹಾಗಹ್ವರನಿರ್ಜಜ್ಜರತ್ ಅಜಗರ ಗಳಗಳಿತ ಗರಳಶಬಳಿತಸಲಿಲ ಪ್ರವಾಹೆಯುಂ: ಆದಿಪು, ೫. ೮೭ ವ)

ಗರುಡ
[ನಾ] ಗರುಡ ಪಕ್ಷಿ (ಮತ್ಸ್ಯ ಮಕರ ಕುಲಿಶ ಕಲಶ ಕುಳೀರ ವರಾಹ ವಾನರ ಕಂಠೀರವ ಚಮೂರು ಮಯೂರ ಗರುಡ ಫಣಿರಾಜಚಿಹ್ನಂಗಳಪ್ಪ: ಆದಿಪು, ೧೧. ೨೮ ವ)


logo