logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಖರಕರಬಿಂಬ
[ನಾ] ಸೂರ್ಯಮಂಡಲ (ಖರಕರಬಿಂಬದಿಂ ಕಿರಣಸಂತತಿಗಳ್ ಪೊಱಪೊಣ್ಮಿದಪ್ಪುವು ಎಂಬರ ನುಡಿ ಪೋಲ್ವೆವೆತ್ತುದು ಎನೆ: ಪಂಪಭಾ, ೧೨. ೭೩)

ಖರಕಿರಣ
[ನಾ] ಸೂರ್ಯ (ಖರಕಿರಣಸ್ಫುರಿತಕ್ಕಿದಿರುರಿವಂತಿರೆ ಸಾಮದಿಂದಳವಡಿಸಿ ನೋಡುವೆಂ: ಆದಿಪು, ೧೪. ೪೨)

ಖರತನ
[ನಾ] ತೀಕ್ಷ್ಣತೆ, ಉಗ್ರತೆ (ಖರಕಿರಣಂಗಳ ಕಾಯ್ಪಿನ ಖರತನದಿಂ ಚಂದ್ರಕಿರಣದುಜ್ಜಳಿಕೆಯಿಂ: ಆದಿಪು, ೧೧. ೭)

ಖರಪರುಷ
[ನಾ] ಕತ್ತೆಯ ದನಿಯಂತೆ ಕರ್ಕಶವಾದ (ಖರಪರುಷನಿನಾದರ್ ನಾರಕರ್ ಬರ್ದುತಿರ್ಪರ್: ಆದಿಪು, ೫. ೮೯)

ಖರಸಾಣೆಗಾಣಿಸು
[ನಾ] ಸಾಣೆ ಹಿಡಿ (ಮದನಾಸ್ತ್ರಂ ಖರಸಾಣೆಗಾಣಿಸಿದುದು ಎಂಬಂತಾಗೆ ನಿನ್ನೊಂದು ಕಂದಿದ ಮೆಯ್ ಎನ್ನಯ ತೋಳೊಳೊಂದೆ ಸಿರಿಯಂ ನೀನುಯ್ದು ತೊೞ್ತಾಳ್ದು ರಾಗದಿಂ ಎನ್ನೊಳ್ ಸುಕಮಿರ್ಪುದು: ಪಂಪಭಾ, ೮. ೬೬)

ಖರಾಂಶು
[ನಾ] ಖರಕರ (ಬೇಸಱೆ ಲೋಕಮಂ ತಗುಳ್ದು ಸುಟ್ಟ ಅೞಲಿಂದೆ ಖರಾಂಶು ನಾರಕಾವಾಸದೊಳ್ ಆೞ್ವವೋಲ್ ಅಪರವಾರ್ಧಿಯೊಳ್ ಆೞ್ವುದುಂ: ಪಂಪಭಾ, ೩. ೮೧)

ಖರ್ವಡ
[ನಾ] ಖರ್ವಟ, ನಗರ ಹಳ್ಳಿಗಳ ನಡುವಣ ಸ್ಥಿತಿಯ ಮತ್ತು ಬೆಟ್ಟಗಳ ನಡುವಿರುವ ಊರು (ಉರ್ವೀಧರನಿರುದ್ಧಂಗಳಪ್ಪ ಖರ್ವಡಂಗಳುಮಂ: ಆದಿಪು, ೮. ೬೩ ವ)

ಖರ್ವಡನಿವಾಸಿ
[ನಾ] ಬೆಟ್ಟದೂರುಗಳಲ್ಲಿ ವಾಸಿಸುವವರು (ಸರ್ವಸ್ವಮುಮಂ ಕುಡದಿರಲುರ್ವೀಪತಿ ಬಂದೊಡೆ ಆಗದು ಎಂದು ಅತಿಭಕ್ತರ್ ಖರ್ವಡನಿವಾಸಿಗಳ್: ಆದಿಪು, ೯. ೧೨೮);

ಖರ್ವಿತ
[ಗು] ನೆಗ್ಗಿದ, ಅಗೆದ (ಮತ್ತ ಮಾತಂಗ ಪದನಖ ಖರ್ವಿತ ಉರ್ವೀತಳಮುಂ ಪ್ರಚಂಡ ಮಾರ್ತಂಡ ಮರೀಚಿ ತೀವ್ರ ಜ್ವಳನ ಆಸ್ಫಾರ ಕರಾಳ ಕರವಾಳ ಭಾಮಂಡಳ ಪರೀತ ಉದ್ಯತ ದೋರ್ದಂಡ ಚಂಡಪ್ರಚಂಡ ಸುಭಟ: ಪಂಪಭಾ, ೧೩. ೫೧)

ಖಲೀನ
[ನಾ] ಕಡಿವಾಣ (ಖಣಖಣಾಯಿತ ಖಲೀನಸಂಘಟ್ಟ ಸ್ಕಂದಮಾನ ಫೇನ ಸಲಿಲಸ್ರೋತಶ್ಶತಂಗಳಿಂದಂ: ಆದಿಪು, ೧೪. ೯೫ ವ)


logo