logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಕಂಧರಸಂಧಿ
[ನಾ] ಕೊರಳ ಕೀಲು (ಧಾತ್ರಿ ತಿಱಱನೆ ತಿರಿವನ್ನೆಗಂ ತೆಗೆದು ಕಂಧರಸಂಧಿಯಂ ಎಯ್ದೆ ನೋಡಿ ತೊಟ್ಟನೆ ನರಂ ಎಚ್ಚೊಡೆ: ಪಂಪಭಾ, ೧೨. ೧೬೮)

ಕಂಪ
[ನಾ] ನಡುಗುವಿಕೆ (ಕಾಮಗ್ರಹಗ್ರಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸ್ತಂಭಕಂಪಸ್ವೇದವೈವರ್ಣ್ಯಸಂತಾಪನನ ಅನಾಹಾರ ವ್ಯಾಮೋಹ ಗದ್ಗದಾಶ್ರುಮೋಕ್ಷಮೂರ್ಛಾದಿ ನಾನಾ ವಿಕಾರಂಗಳಂ ಒಡನೊಡನೆ ತೋಱುವುದುಂ: ಪಂಪಭಾ, ೪. ೫೯ ವ)

ಕಂಪಂಗೊಳ್
[ಕ್ರಿ] ನಡುಗು (ಜಳದಾಕಾರದೊಳೆಯ್ದೆ ಪರ್ಬಿ ಸಕಳಾಶಾಚಕ್ರಮಂ ವ್ಯೋಮಮಂಡಳಮುಂ ಕರ್ಗಿ ಕಱಂಗಿ ತೋಱೆ ಸಿಡಿಲಿಂ ಮಿಂಚಿಂ ಘನಧ್ವಾನದಿಂದಿಳೆ ಕಂಪಂಗೊಳೆ: ಆದಿಪು, ೧೩. ೫೯)

ಕಂಪಣ
[ನಾ] ಒಂದು ಆಯುಧ (ಕಣೆಯ ಕಂಪಣ ಮುಸಲ ಮುಸುಂಡಿ ಭಿಂಡಿವಾಳ ತೋಮರ ಮುದ್ಗರ ಮಹಾ ವಿವಿಧಾಯುಧಂಗಳೊಳಿಟ್ಟುಂ ಇಱಿದುಂ ಅಗುರ್ವು ಅದ್ಭುತಮಾಗೆ ಕಾದುವಾಗಳ್: ಪಂಪಭಾ, ೧೨. ೧೧೮ ವ)

ಕಂಪನಾಳ್
[ಕ್ರಿ] ಕಂಪನ್ನು ಹೊಂದು (ಮಗಮಗಿಸುತ್ತುಮಿರ್ಪ ಮೃಗನಾಭಿಯ ನೀರ್ದಳಿವಲ್ಲಿ ಕಂಪನಾಳ್ದು ಉಗುೞ್ದಲರುತ್ತುಮಿರ್ಪ ಪದದೊಳ್: ಪಂಪಭಾ, ೭. ೮೭)

ಕಂಪು
[ನಾ] ಬಂಡು, ಮಕರಂದ (ಕಂಪಂ ಕೊಳಲ್ಬರ್ಪ ಭೃಂಗನಿಕಾಯಂ ಕವಿದಲ್ಲಿ ಮೆಲ್ಲನುಗೆ ತೇಂಕುವ ಪೂವಿನ ಸಂಕರಂಗಳಂ: ಆದಿಪು, ೧. ೬೨)

ಕಂಪುಗೊಳ್
[ಕ್ರಿ] ಮೂಸಿನೋಡು (ಕಂಪುಗೊಳಲ್ಕೆ ಉಸಿರ್ದ ಉಸುರಿನಿಸಂ ಪೊಱಮಟ್ಟೆಸೞ ತುದಿಯನೆಯ್ದಲೊಡಂ: ಆದಿಪು, ೧೧. ೧೧೫)

ಕಂಪುನಾಱು
[ಕ್ರಿ] ಕಂಪಿನಿಂದ ಗಮಗಮಿಸು (ಸೊಡರ್ಗುಡಿ ಒಯ್ಯನಾಗೆ ಪೊಸಮಲ್ಲಿಗೆ ಕಂಪುನಾಱೆ ತಣ್ಪಿಡಿದ ಎಲರ್ ಊದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಂಗಳ ಗೆಡೆಗೊಳೆ: ಪಂಪಭಾ, ೪. ೧೧೦); [ನಾ] ದುರ್ನಾತ ಬೀರು (ಕೆಂಡಂಗಳೊಳ್ ಸುೞಿದು ಬೇವ ಪೆಣಂಗಳ್ ಕಂಪುನಾಱುವುದರ್ಕೆ ಸೈರಿಸಲಾರದೆ ಕೋಳ್ದಾಂಟಿನೊಳ್ ಕೊಳುಗುಳವಂ ಕೞಿದು ಪೋಗಿ: ಪಂಪಭಾ, ೧೩. ೭೧ ವ)

ಕಂಬುಕಮ್ರ
[ನಾ] ಶಂಖದಂತೆ ಸುಂದರವಾದ (ಬಿಂಬಾಧರೆಯ ಕಂಬುಕಮ್ರಶಿರೋಧರೆಯ ಬೆಡಂಗನಾರುಮೇನೆಯ್ದುವರೇ: ಆದಿಪು, ೪. ೪೬)

ಕಂಬುಲತಾ
[ನಾ] ಶಂಖದ ಬಳ್ಳಿ (ಕಂಬುಲತಾಸುಲಲಿತ ಲವಣಾಂಬುಧಿಪರಿಧಾನಮಾಗೆ ಚೆಲ್ವಂ ಪಡೆದೀ ಜಂಬೂದ್ವೀಪಪ್ರಭುಗೆ: ಆದಿಪು, ೭. ೬೨)


logo