logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಕದಂಬದಂಬುಲ
[ನಾ] ಮುದ್ದೆಯಾದ ಸುಗಂಧಭರಿತ ತಂಬುಲ (ನಿಡುಸುಯ್ದ ನಲ್ಲಳ ಮುಖಾಂಬುಜಸೌರಭದೊಳ್ ಪೊದಳ್ದು ಅದೇಂ ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ: ಪಂಪಭಾ, ೪. ೧೦೭)

ಕದಕ್ಕದಿಸು
[ಕ್ರಿ] ಅಲುಗಾಡು (ತುಂಗಸ್ತನಂ ಕದಕ್ಕದಿಸೆ ಕಣ್ಮಲರ್ ಪೊಳೆಯೆ: ಆದಿಪು, ೧೨. ೧೩)

ಕದಡು
[ಕ್ರಿ] ಕಲಕು (ಭೋಂಕನೆ ಮನಮಂ ಕದಡಿ ಕಲಂಕಿದಪುದು ಬಿಡದೆ ಮನಮನೊಲಿಸಿದಪುದು ಆದಂ ಕೆಳದಿ ಪಾಣ್ಬರಂಕುಸನ ಅಂಕುಸದಾ ಪೊಳಪುಂ ಅವನ ಕಣ್ಗಳ ಬೆಳ್ಪುಂ: ಪಂಪಭಾ, ೪. ೬೭); [ನಾ] ಮಿಶ್ರಣ (ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಿಂ ಕೆದಱಿಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ: ಪಂಪಭಾ, ೫. ೬೦ ವ)

ಕದಡೇೞ್
[ಕ್ರಿ] ಬಗ್ಗಡವಾಗು (ಜಾತ್ಯಶ್ವ ರಥ ಆಶ್ವಸಂಕುಳಖಲೀನ ಉದ್ಭೂತ ಲಾಲಾಜಲಂ ಕದಡೆೞ್ದು: ಪಂಪಭಾ, ೧೦. ೩೧)

ಕದನತ್ರಿಣೇತ್ರ
[ನಾ] ಯುದ್ಧದಲ್ಲಿ ರುದ್ರನಂತೆ ಪ್ರಚಂಡ (ತ್ರಿಣೇತ್ರನುಮಂ ಅಸುಂಗೊಳಿಸಿದ ಸಾಹಸದೊಳ್ ಕದನತ್ರಿಣೇತ್ರನುಂ: ಪಂಪಭಾ, ೧೪. ೩೭ ವ)

ಕದನಪ್ರಾರಂಭಶೌಂಡ
[ನಾ] ಯುದ್ಧೋದ್ಯೋಗದಲ್ಲಿ ಆಸಕ್ತ (ಕದನಪ್ರಾರಂಭಶೌಂಡಂ ರಿಪುನೃಪಬಲದಾವಾನಲಂ ವೈರಿಭೂಭೃತ್ ಮದವತ್ ಮಾತಂಗಕುಂಭಸ್ಥಳ ದಳನಖರೋಗ್ರಾಸಿಪಂಚಾಸ್ಯಧೈರ್ಯಂ: ಪಂಪಭಾ, ೬. ೭೭)

ಕದನಾನಕ
[ನಾ] ರಣಭೇರಿ (ದಿಗ್ಭಿತ್ತಿವಿಭೇದಿ ಪೆರ್ಚೆ ಕದನಾನಕ ರಾವಂ: ಪಂಪಭಾ, ೮. ೯೨)

ಕದಪಂ ಕರ್ಚು
[ನಾ] ಕೆನ್ನೆಗೆ ಮುತ್ತಿಡು (ಆಗಳಾ ಕುಂಭಸಂಭವಂ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ ಕದಪಂ ಕರ್ಚಿ ದ್ರುಪದನಂ ತನ್ನ ಮಂಚದ ಕಾಲೊಳ್ ಕಟ್ಟವೇೞ್ದು ತಲೆಯ ಮೇಲೆ ಕಾಲನವಷ್ಟಂಭದಿಂ ನೀಡಿ: ಪಂಪಭಾ, ೨. ೬೨ ವ)

ಕದಪು
[ನಾ] ಕೆನ್ನೆ (ತೆಗೆದುತ್ಸಂಗದೊಳಿಟ್ಟು ಒಯ್ಯಗೆ ಮೊಗಮಂ ನೋಡಿ ಕರ್ಚಿ ಕದಪಂ ನುಡಿದಂ ಜಗದಧಿಪತಿ: ಆದಿಪು, ೮. ೫೭)

ಕದಲಿಕೆ
[ನಾ] ಬಾವುಟ (ಬಿಟ್ಟುಳಿಯ ಕುಕ್ಕಂಬಂ ತೊಡಂಬೆಯ ಮೂಡಿಗೆಯ ಕದಲಿಕೆಯ ಕಾಂಡಪಟಗಳುಮಂ ಪಲವುಂ ತೆಱದ ಪಲವುಂ ಪೊಱೆಯಾಗಿ ಕಟ್ಟಿದ ಬಲೆಗಳುಮಂ: ಪಂಪಭಾ, ೫. ೪೭ ವ)


logo