logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಕ್ಷೌಮದುಕೂಲ
[ನಾ] ನಾರುವಸ್ತ್ರ (ಅನೇಕಧಾನ್ಯಸದನಂಗಳುಂ ಕ್ಷೌಮದುಕೂಲಾದಿ ದಿವ್ಯವಸನ ವಿವಿಧ ಪ್ರಾವರಣ ವಿಶೇಷಂಗಳುಂ: ಆದಿಪು, ೧೫. ೩ ವ)

ಕ್ಷ್ಮಾಜ
[ನಾ] ಮರ (ಏಂ ಮತಮಱಿದು ಓಲಗಿಪುದೊ ದಂಪತಿಗೆಂದುಮವಾರ್ಯವೀರ್ಯತೂರ್ಯಕ್ಷ್ಮಾಜಂ: ಆದಿಪು, ೫. ೩೫)

ಕ್ಷ್ಮಾಪ
[ನಾ] ದೊರೆ (ಸಕಳಕ್ಷ್ಮಾಪಶಿರೋರತ್ನಾಂಶುವ್ಯಾಪಿತ ಚರಣಂ ಸರಸ್ವತೀಮಣಿಹಾರಂ: ಆದಿಪು, ೧೧. ೧)

ಕ್ಷ್ಮಾಪಾಲ
[ನಾ] ರಾಜ (ಶ್ರೀಪತಿಗೆ ಯುದ್ಧಮಲ್ಲ ಮಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದಂ ಅಖಿಳ ಕ್ಷ್ಮಾಪಾಲಮೌಳಿಮಣಿಕಿರಣ ಆಪಾಳಿತ ನಖಮಯೂಖ ರಂಜಿತಚರಣಂ: ಪಂಪಭಾ, ೧. ೧೮)

ಕ್ಷ್ಮಾಭೃತ್
[ನಾ] ರಾಜ (ಕರಕಮಳಾಂಶುಚಯಾಂಜನಗಳೊಳ್ ಅರಿಕ್ಷ್ಮಾಭೃತ್ ಜಯಶ್ರೀವಶೀಕರಣಂ ಮಾಡಿ: ಆದಿಪು, ೬೪)

ಕ್ಷ್ವೇಡಿತ
[ನಾ] ಕೂಗಾಟ (ಉದಗ್ರಕುಂಜg ಕುಂಭಜರ್ಜರಣ ಜನಿತೋತ್ಕಂಠ ಕಂಠೀರವರವೋದ್ಭಟಭೂರವಂಗಳಪ್ಪ ಸುಭಟ ಪಟುಕ್ಷ್ವೇಡಿತಂಗಳಿಂದಂ ಸಂದಣಿಸಿ: ಆದಿಪು, ೧೩. ೪೨ ವ)


logo