logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಕಡುಪಗಲ್
[ನಾ] ಏರಿದ ಹಗಲು (ಕಡುಪಗಲಾದುದು ಬೀಡಂ ಬಿಡಿಸುವುದು ಈ ಪುಣ್ಯನದಿಯ ತಡಿಯೊಳ್ ದೇವರ್ ನಡೆವುದು ವನಜಳಕೇಳಿಗೆ: ಆದಿಪು, ೧೧. ೬೯)

ಕಡುಪು
[ನಾ] ಪರಾಕ್ರಮ (ಕಡುಪಿದಱೊಳಪ್ಪೊಡೆ ಈಗಳೆ ಸುಡುವೆಂ ಬಾಣಾನಳಾರ್ಚಿಯಿಂ ಮಾಗಧನಂ: ಆದಿಪು, ೧೨. ೮೭); [ನಾ] ಉದ್ವೇಗ (ಕೋಪದ ಪೆರ್ಚಿನೊಳ್ ನಡುಗುವೂರುಯುಗಂ ಕಡುಪಿಂದರಲ್ವ ನಾಸಾಪುಟಂ: ಪಂಪಭಾ, ೭. ೬)

ಕಡುರಯ್ಯ
[ನಾ] ತುಂಬ ಸುಂದರ (ಬಂಧುಗಳ್ ಮನಂಬಡೆ ಕಡುರಯ್ಯಮಾಯ್ತು ಅಮಿತತೇಜನೊಳಂದು ವಿವಾಹಮಂಗಳಂ: ಆದಿಪು, ೪. ೫೩)

ಕಡುವಂದೆ
[ನಾ] [ಕಡು+ಪಂದೆ] ದೊಡ್ಡ ಹೇಡಿ (ಕಲಿಯನೆ ಪಂದೆ ಮಾೞ್ಪ ಕಡುವಂದೆಯಂ ಒಳ್ಗಲಿ ಮಾೞ್ಪ ತಕ್ಕನಂ ಪೊಲೆಯನೆ ಮಾೞ್ಪ: ಪಂಪಭಾ, ೧೨. ೯೨)

ಕಡುವಿಣ್ಣಿತ್ತು
[ನಾ] [ಕಡು+ಬಿಣ್ಣಿತ್ತು] ತುಂಬ ಭಾರ (ತುಡುಗೆಗಳೊಳ್ ಸರಿಗೆಯುಮಂ ಕಡುವಿಣ್ಣಿತ್ತೆನಿಸಿ ನಡೆದುಂ ಓರಡಿಯನಣಂ ನಡೆಯಲುಂ ಆಱದೆ ಕೆಮ್ಮನೆ ಬಿಡದಾರಯ್ವನಿತುಮಾಗೆ ಬಳೆದುದು ಗರ್ಭಂ: ಪಂಪಭಾ, ೧. ೧೪೪)

ಕಡುವಿಣ್ಪು
[ನಾ] [ಕಡು+ಬಿಣ್ಪು] ಅತಿಶಯವಾದ ಭಾರ (ಮುಡಿಯ ಕುಚಯುಗದ ಜಘನದ ಕಡುವಿಣ್ಪಿಂ ಮಣಲೊಳ್ ಅೞ್ದುಬರೆ ಮೆಲ್ಲಡಿಗಳ್: ಪಂಪಭಾ, ೭. ೮೫)

ಕಡುವಿತ್ತೆಗ
[ನಾ] ಬಹು ನಿಪುಣ (ಕೆಂಗಱಿಯ ಮೊನೆಯಂಬುಗಳ್ ಕಣ್ದೆಱೆಯಿಸಿದುವು ಪೊಣರ್ವ ಬಿಲ್ಲ ಕಡುವಿತ್ತೆಗರಂ: ಪಂಪಭಾ, ೧೦. ೭೩)

ಕಡುವಿನ್ನವಾಗು
[ಕ್ರಿ] ನಿಶ್ಚೇಷ್ಟಿತವಾಗು (ಆ ಸರಸಿಜಬಾಂಧವನ ಪಿಂಬಡಿನೊಳ್ ಕಡುವಿನ್ನನಾದುವಿಂತೀ ಸರಸೀರುಹಂಗಳ್ ಅವನೀಪದದೊಳ್: ಪಂಪಭಾ, ೪. ೪೭); [ಕ್ರಿ] ಬಾಡು, ಖಿನ್ನಗೊಳ್ಳು (ನಾರದಂ ಮನದೊಳೆ ಪೇಸುಗುಂ ಸುರಪಂ ನಗುಗುಂ ಕಡುವಿನ್ನನಕ್ಕುಂ ಅಯ್ಯನ ಮುಖಂ: ಪಂಪಭಾ, ೬. ೨೪ ವ)

ಕಡುವಿಲ್ಲ
[ನಾ] ಗಟ್ಟಿಗನಾದ ಬಿಲ್ಲುಗಾರ (ಎರಡುಂ ಬಲದ ಕಡುವಿಲ್ಲರ್ ಭೋರ್ಗರೆದು ಇಸೆ ಕೂರ್ಗಣೆಯೊಳ್ ಪಂದರ್ ಇಕ್ಕಿದಂತಾಯ್ತು ಗಗನಮಂಡಲಮೆಲ್ಲಂ: ಪಂಪಭಾ, ೧ . ೭೨)

ಕಡುವೆಂಕೆ
[ನಾ] [ಕಡು+ಬೆಂಕೆ] ತೀವ್ರವಾದ ಶಾಖ (ಕಡುವೆಂಕೆಯಿಂ ಕಟಾಕ್ಷಂ ಬಿಡದಿೞಿವ ಲಲಾಟಕುಂಕುಮಸ್ವೇದಜಳಂ ಕಿಡಿಸಿದುದು ಕದಪಿನೊಳ್ ಪೊೞ್ತಡೆ ಬರೆದರಸಿಯರ ಪತ್ರಲೇಖಾವಳಿಯಂ: ಆದಿಪು, ೧೧. ೫೪)


logo