logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಕಡಂಗಿಸು
[ಕ್ರಿ] ಉತ್ಸುಕಗೊಳಿಸು (ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಂ ಅಡಂಗಲುಂ ಅಡಂಗಿಸಲುಂ ಒಡ್ಡಲುಂ ಒಡ್ಡಿಸಲುಂ ಪುಗಿಸಲುಂ ಮಿಗಿಸಲುಂ: ಪಂಪಭಾ, ೫. ೪೩ ವ)

ಕಡಂಗು
[ಕ್ರಿ] ಉತ್ಸುಕಗೊಳ್ಳು (ಪಗಲಿರುಳೆನ್ನದೆನ್ನೊಳೆ ಕಡಂಗುವನೆನ್ನೊಳೆ ಬಲ್ಪುದೋರ್ಪಂ: ಆದಿಪು, ೧೨. ೩೩); [ಕ್ರಿ] ಆವೇಶಗೊಳ್ಳು (ಪಿಂದೆ ಕಡಂಗಿ ತೇರಂ ಎಸಗು ಎಂಬವಂ ಅಂಬಿಗಂ ಆಜಿರಂಗದೊಳ್: ಪಂಪಭಾ, ೧೨. ೯೪)

ಕಡಕು
[ನಾ] ಚೂರು ಕಲ್ಲು (ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ: ಪಂಪಭಾ, ೩. ೯)

ಕಡಲ್
[ನಾ] ಸಮುದ್ರ (ಕಡಲ ತಡಿಯೆಯ್ದೆ ನೆಲನಂ ಪಡೆದರ್ ಭವದೀಯ ಪುತ್ರರ್: ಆದಿಪು, ೯. ೯೮)

ಕಡಲುರಿ
[ನಾ] ಸಮುದ್ರದ ಬೆಂಕಿ, ಬಡಬಾಗ್ನಿ (ಕಡಲುರಿಯಂತೆ ಅಕಾಲಘನಗರ್ಜನೆಯಂತೆ ಸಮಸ್ತದಿಕ್ತಟಂ ಪಿಡುಗುವಿನಂ ರಣಾನಕರವಂಗಳಸುಂಗೊಳೆ: ಪಂಪಭಾ, ೧೩. ೩೩)

ಕಡವು
[ನಾ] [ಕದಂಬ] ಕಡವಾಲದ ಮರ (ಕಡವಿನ ಕಂಪು ಅಡಂಗಿದುದು ಜಾದಿಯ ಕಂಪು ಒದವಿತ್ತು ಸೋಗೆಯ ಉರ್ಕು ಉಡುಗಿದುದು ಅಂಚೆಯುರ್ಕು ಪೊಸತಾಯ್ತು: ಪಂಪಭಾ, ೭. ೬೯); [ನಾ] ಒಂದು ಬಗೆಯ ಜಿಂಕೆ, ಸಾರಂಗ (ಅಡಂಗಿ ಪರಿವ ಪುಲಿಗಳುಮಂ ಸೋಂಕಿ ಪರಿವ ಎಯ್ಗಳುಮಂ ತಡಂಮೆಟ್ಟಿ ಪರಿವ ಕಡವಿನ ಕಾಡೆಮ್ಮೆಯ ಮರೆಯ ಪಿಂಡುಗಳುಮಂ: ಪಂಪಭಾ, ೫. ೪೮ ವ)

ಕಡಿ
[ಕ್ರಿ] ಕತ್ತರಿಸು (ಶರಮನಿದಂ ಕಡಿದುಡಿದು ಎರಡೆರಡಪ್ಪಂತು ತಱಿದು ರಿಪುಬಲಗಹನಾಂತರಮಂ ಸುಡಲೊಗೆವುದು ದುರ್ಧರ ಕೋಪಾಗ್ನಿ: ಆದಿಪು, ೧೨, ೧೦೨)

ಕಡಿತಮಿಕ್ಕು
[ಕ್ರಿ] ಕಡತದಲ್ಲಿ ಬರೆ (ಕಡಿತಮಿಕ್ಕಿದಂತಿರ್ದ ಸಮಚತುರಶ್ರಂ ನಾಲ್ವತ್ತೆಣ್ಗಾವುದು ಪರಿಪ್ರಮಾಣಮೆನಿಪ ಕುರುಕ್ಷೇತ್ರಮಂ ಎಯ್ದೆವಂದು: ಪಂಪಭಾ, ೯. ೧೦೪ ವ)

ಕಡಿತಲೆ
[ನಾ] ಕತ್ತಿ (ಎರಡುಂ ಬಲದ ಕಡಿತಲೆಯ ನಾಯಕರ್ ಕೆಯ್ಕೊಂಡು ಬಳ್ಳುಗೆಡೆದು ಎಕ್ಕೆವಾಱುವಾಱಿ ಪಲಗೆವಾಱಿ ಗೂಳಿಸೊರ್ಕಿ ಮಾರ್ಕೊಂಡು ಕಾದೆ: ಪಂಪಭಾ, ೧೦. ೮೦ ವ)

ಕಡಿದೀ
[ಕ್ರಿ] ಕತ್ತರಿಸಿ [ದಾನ] ಕೊಡು (ಸಿಡಿಲ್ವೊಡೆದವೊಲಟ್ಟಿ ಮುಟ್ಟಿ ಕಡಿದಿಕ್ಕಿದುದಾದುದೆಡಱಂ ನಿರಂತರಂ ಕಡಿಕಡಿದಿತ್ತ ಪೊನ್ನೆ ಬುಧಮಾಗಧವಂದಿಜನಕ್ಕೆ: ಪಂಪಭಾ, ೧. ೯೯)


logo