logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಒತ್ತಿ ಪುಗು
[ಕ್ರಿ] ಆಕ್ರಮಿಸು (ವಿಜಯಾದ್ರೀಂದ್ರಮನುರ್ಚಿ ಬರ್ಪ ಅಳವಿದೇಂ ಸಾಮಾನ್ಯಮೇ ದೇಶಮಂ ಭುಜವಿಕ್ರಾಂತದಿಂ ಒತ್ತಿ ಪೊಕ್ಕದಟಿದೇನಾಶ್ಚರ್ಯಮಲ್ತೇ: ಆದಿಪು, ೧೩. ೫೭)

ಒತ್ತು
[ನಾ] ಸಂಗಿತದ ಕಾಲ, ತಾಳ (ಒಂದೊತ್ತಂ ನಡೆಯಿಸುವುದು ಅದೊಂದೊತ್ತಿನ ಲಯಕೆ ಲಕ್ಕೆತೆಱನಾಡುವುದು: ಆದಿಪು, ೯. ೩೩); [ಕ್ರಿ] ಸೋಲಿಸು (ಧರಿತ್ರಿಯಂ ಜೀಯ ಎನೆ ಬೇಡಿ ಕೊಳ್ಳದೆ ವಿರೋಧಿನರೇಂದ್ರರಂ ಒತ್ತಿ ಕೊಂಡುಂ: ಪಂಪಭಾ, ೧. ೧); [ಕ್ರಿ] ಚುಚ್ಚು, ತಿವಿ, ನಾಟು (ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ: ಪಂಪಭಾ, ೩. ೯); [ಕ್ರಿ] ಬಲವಾಗಿ ಅದುಮು (ಪಗೆವರ ಗಂಟಲನೊತ್ತುವಂತೆ ಪೌಂಡ್ರವೆಂಬ ಶಂಖಮನೊತ್ತಿ ಮುಂದೊಡ್ಡಿದೊಡ್ಡೆಲ್ಲಮಂ ಅಂಬಿನ ಬಂಬಲೊಳೆ ಪಡಲ್ವಡಿಸುತ್ತುಂ: ಪಂಪಭಾ, ೧೦. ೯೭ ವ); [ನಾ] ಅಮುಕುವಿಕೆ (ಉಸಿರೊತ್ತಿಂ ತಿದಿಯಂತಿರೆ ಒತ್ತಿದ ಬಸಿಱ್ ಪೋತಂದ ಕಣ್ ಬಿಟ್ಟ ಬಾಯ್ ಮಸಕಂಗುಂದಿದ ಮೆಯ್: ಪಂಪಭಾ, ೧೨. ೧೫೧)

ಒತ್ತುಗೊಳ್
[ಕ್ರಿ] ಆಶ್ರಯಿಸು, ಮರೆಯಾಗು (ಕೆಲಬರ್ ಕಂಡೊಡೆ ಕರೆಗುಂ ಎಂದು ಕೆಲದ ಮರಂಗಳಂ ಒತ್ತುಗೊಂಡುಂ: ಆದಿಪು, ೯. ೯೨ ವ)

ಒತ್ತೆ
[ನಾ] ಜೂಜಿನ ಪಣದ್ರವ್ಯ (ರಪಣಮಂ ತೋಱಿಯುಂ ಒತ್ತೆಯಂ ಉಗ್ಗಡಿಸಿಯುಂ ಆಡಿಂ ಎನೆ ಪೆಱತೇನುಪಾಯಮಿಲ್ಲದೆ ಎಮ್ಮಾಳ್ವ ನೆಲಂ ಒತ್ತೆಯೆಂದೊಡೆ: ಪಂಪಭಾ, ೭. ೩ ವ)

ಒತ್ತೆಯಿಡು
[ಕ್ರಿ] ಅಡವಿಡು (ಸಮಂತಾವಗಂ ತಲೆಯಂ ಮೂಗುಮಂ ಒತ್ತೆಯಿಟ್ಟು ನೆರೆವಂತುಟೇನವರ್ ಗಾಂಪರೇ: ಪಂಪಭಾ, ೪. ೮೪)

ಒತ್ತೆವಿಡಿಸು
[ಕ್ರಿ] ಒತ್ತೆಯಿಂದ ಬಿಡಿಸು (ಸುಣ್ಣದೆಲೆಯಂ ಒತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮಂ ಒತ್ತೆವಿಡಿಸಲಟ್ಟುವ ಚಿಕ್ಕ ಪೋಖುೞಿ ಬೊಜಂಗರುಮಂ ಪಂಪಭಾ, ೪. ೮೭ ವ)

ಒತ್ತೆವಿಡಿ
[ಕ್ರಿ] ಒತ್ತೆಯಾಗಿ ಸ್ವೀಕರಿಸು (ನಿನ್ನ ನನ್ನಿಯೊಳಂ ವರ್ಷಾವಧಿಯೊಳಲ್ಲದೆ ನೆಲನಂ ಒತ್ತೆವಿಡಿಯೆಂ ಎಂದೊಡೆ; ಪಂಪಭಾ, ೭. ೩ ವ)

ಒತ್ತೆವೋಗು
[ಕ್ರಿ] ಜೂಜಿನ ಪಣವಾಗಿ ಕಳೆದುಹೋಗು (ದಾಯಿಗಂಗೆ ನೆಲಂ ಜೂದಿನೊಳ್ ಒತ್ತೆವೋಗೆ ಬನಮಂ ಪೊಕ್ಕಣ್ಣಂ ಎಂದೊಂದು ಮಾತಂ ಅಣಂ ಮೀಱದೆ: ಪಂಪಭಾ, ೮. ೫)

ಒದವಿದ ಗರ್ಭ
[ನಾ] ಉಂಟಾದ ಬಸಿರು (ಮುಂ ಬೇಡಿದ ವರಮಂ ಕುಡದೆ ಅಂಬುಜಮುಖಿ ಪುತ್ರನೆನ್ನ ದೊರೆಯಂ ನಿನಗಕ್ಕೆ ಎಂಬುದುಂ ಒದವಿದ ಗರ್ಭದೊಳಂಬುಜಮಿತ್ರನನೆ ಪೋಲ್ವ ಮಗನೊಗೆತಂದಂ: ಪಂಪಭಾ, ೧. ೯೪)

ಒದವಿಸು
[ಕ್ರಿ] (ಅರಲ್ದ ತಾವರೆಯೆಸಳ್ಗಳೊಳ್ ಪುದಿಸು ಪುದುಂಗೊಳಿಸಿದಂತಾನುಂ ಅನಂಗಾಮೃತ ವರ್ಷಮಂ ಒದವಿಸಿ: ಪಂಪಭಾ, ೪. ೪೧ ವ)


logo