logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಒಡ್ಡಿಸು
[ಕ್ರಿ] ಮೀರಿಸು (ವನಧಿಧ್ವಾನಮನೊಡ್ಡಿಸುತ್ತಿರೆ ನದದ್ಗಂಭೀರಭೇರೀಬೃಹದ್ಧ್ವನಿ ನಾನಾವಿಧಮಂಗಳಾನಕರವಂ ಕೈಗಣ್ಮೆ: ಆದಿಪು, ೧೪. ೧೪೯); [ಕ್ರಿ] ಒಡ್ಡಯಿಸು, ಒಡ್ಡವಿಸು, ಒಡ್ಡುವಂತೆ ಮಾಡು (ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಂ ಅಡಂಗಲುಂ ಅಡಂಗಿಸಲುಂ ಒಡ್ಡಲುಂ ಒಡ್ಡಿಸಲುಂ .. .. ಆನೆ ಬಲ್ಲೆಂ: ಪಂಪಭಾ, ೫. ೪೩ ವ); [ಕ್ರಿ] ಪ್ರತಿಭಟಿಸು, ಎದುರಿಸು (ಒಡ್ಡಿಸೆ ಕಾದಂ ಆಗಳ್ ಅರ್ವಿಸೆ ತೆಗೆದೆಚ್ಚ ವೈಷ್ಣವಮಂ ಒಡ್ಡಿಸಿ ವೈಷ್ಣವದಿಂ ಮುರಾಂತಕಂ; ಪಂಪಭಾ, ೧೨. ೩೨); [ಕ್ರಿ] ಹೊಂಚು ಹಾಕು (ನಿನಗಪ್ಪಪಾಯಮಂ ನೆನೆದು ಮದೇಭರೂಪಮನೆ ತೋಱಿ ನಿಜಾಶ್ರಮದಿಂದಗಲ್ಚಿ ನಿನ್ನನುಜರಂ ಈ ಉಪಾಯದೊಳೆ ಕೀರ್ತಿಗೆಯೊಡ್ಡಿಸೆ ಕಾದೆನಾಂ: ಪಂಪಭಾ, ೮. ೪೮); [ಕ್ರಿ] ಒದಗಿಸು (ಬಿಸುಟಾ ಧರಾಧಿಪತಿಯಂ ನಾರಾಯಣಾದೇಶಂ ಒಡ್ಡಿಸೆ ಪಾಂಡುಪ್ರಿಯಪುತ್ರರೊಳ್ ನೆರೆಯಲೆಂದಿಂತೀಗಳಾಂ ಪೋದಪೆಂ: ಪಂಪಭಾ, ೧೩. ೧೦೦)

ಒಡ್ಡಿಱಿ
[ಕ್ರಿ] ಮುತ್ತಿಕೊ (ನಿನ್ನ ಮೆಯ್ ದೊಂಬದಡ್ಡಿಸಕ್ಕೆ ಗುಱಿಯಪ್ಪುದು ಒಡ್ಡಿಱಿದು ತಿಂಬರ್ ಅನ್ಯರ್: ಆದಿಪು, ೩. ೬೦)

ಒಡ್ಡು
[ನಾ] ಗುಂಪು, ಸಮೂಹ (ಬಳೆದ ತಮೋಮದೇಭಘಟೆಯ ಒಡ್ಡೊಡೆವನ್ನೆಗಂ ಉನ್ನತೋದಯಾಚಳಗುಹೆಯಿಂ ಲಸತ್ಕಿರಣಕೇಸರಮಂ ಪರಪುತ್ತುಂ: ಆದಿಪು, ೧೨. ೫); [ಕ್ರಿ] ಮುಂಚಾಚು (ಒಡ್ಡಿದ ಪೆರ್ಮೊಲೆ ತೆಳ್ವಸಿಱ್ ಕರಂ ನೆಱೆದ ನಿತಂಬ ಇಂಬುವಡೆದ ಒಳ್ದೊಡೆ ನೆಕ್ಕರವದ್ದೆ ತಾನೆ ಪೋ ಕಿಱುದೊಡೆ ಎಂದು ಧಾತ್ರಿ ಪೊಗೞ್ಗುಂ ಪೊಗೞ್ವನ್ನರೆ ಕುಂತಿ ಮಾದ್ರಿಗಳ್: ಪಂಪಭಾ, ೧. ೧೦೮); [ಕ್ರಿ] ಇರಿಸು (ಛಾಯಾಲಕ್ಷ್ಯಮನೊಡ್ಡಿಯುಂ ಆಯದ ನೀರೊಳಗೆ ತನ್ನನಡಸಿದ ನೆಗೞಂ ಬಾಯೞಿವಿನಂ ಇಸಿಸಿಯುಂ: ಪಂಪಭಾ, ೨. ೬೦); [ಕ್ರಿ] ಪಣವಾಗಿ ಮುಂದಿಡು (ಪಲಗೆಗೆ ಪತ್ತು ಸಾಯಿರಮೆ ಗದ್ಯಣಂ ಎಂದಿರದೆ ಒಡ್ಡಿ ತಾಮ್ ಎರೞ್ವಲಗೆಯಂ ಆಡಿ ಸೋಲ್ತೊಡೆ: ಪಂಪಭಾ, ೬. ೭೨); [ಕ್ರಿ] ಸೈನ್ಯವನ್ನು ಯುದ್ಧಕ್ಕೆ ನಿಲ್ಲಿಸು (ಅದಿರದಿದಿರ್ಚಿ ತಳ್ತಿಱಯಲ್ ಈ ಮಲೆದೊಡ್ಡಿದ ಚಾತುರಂಗಬಲಮೆಂಬುದು ನಿನಗೊಡ್ಡಿ ನಿಂದುದು: ಪಂಪಭಾ, ೧೦. ೬೪); [ಕ್ರಿ] ಉಂಟಾಗು (ಅಳವು ಅಮರ್ದು ಒಡವುಟ್ಟಿತ್ತು ಪೂಣ್ದೀವ ಚಾಗಂ ಕರ್ಣಂಗೆ ಒಡ್ಡಿತ್ತು ದಲ್: ಪಂಪಭಾ, ೧೨. ೧೦೪); [ಕ್ರಿ] ಏರ್ಪಡು (ನಿನಗೆ ಎನ್ನೊಳಂ ಪಿರಿದು ಕಲುಷಂ ಕರ್ಣಂಗೊಡ್ಡಿತ್ತು ಭಾರತಂ: ಪಂಪಭಾ, ೧೨. ೧೭೩)

ಒಡ್ಡೋಲಗ
[ನಾ] [ವೃದ್ಧ>ವಡ್ಡ>ಒಡ್ಡ ಮತ್ತು ಅವಲೋಕನ>ಓಲಗ = ದೊಡ್ಡ ದರ್ಶನ ಎಂಬ ಮೂಲಾರ್ಥ] ರಾಜನ ಆಸ್ಥಾನ, ಸಭೆ (ಸುಯೋಧನನ ಒಡ್ಡೋಲಗಂ ಇಂದ್ರನ ಓಲಗಮುಮಂ ಕೀೞ್ಮಾಡಿ ಕಣ್ಗೊಪ್ಪುಗುಂ: ಪಂಪಭಾ, ೯. ೨೯)

ಒಡ್ಡೋಲಗಂಗುಡು
[ಕ್ರಿ] ರಾಜಸಭೆ ನಡೆಸು (ಸಿಂಹಾಸನಮಸ್ತಕ ಸ್ಥಿತನುಂ ವಿರಾಜಮಾನಧವಳಚ್ಛತ್ರಚಾಮರ ಸಹಸ್ರ ಸಂಛಾದಿತನುಂ ಆಗಿ ವಿಕ್ರಾಂತತುಂಗಂ ಒಡ್ಡೋಲಗಂಗೊಟ್ಟಿರೆ: ಪಂಪಭಾ, ೧೪. ೨೧ ವ)

ಒಣರ್
[ಕ್ರಿ] ಗಮನಿಸು, ತಿಳಿ (ಸಂತತ ವ್ಯಸನೋದ್ರೇಕದ ಕುಂದಂ ಒಣರನೋ ಶಕ್ತಿಕ್ಷಯಂಗಾಣನೋ: ಆದಿಪು, ೨. ೪೫)

ಒಣರ್ಚು
[ಕ್ರಿ] ಸೇರಿಸು, ಒಂದುಗೂಡಿಸು (ದೊಣೆಗಳಿಂ ಉರ್ಚುವ ತಿರುವಾಯ್ ಒಣರ್ಚಿ ತೆಗೆನೆಱೆವ ಬೇಗಮಂ ಕಾಣದೆ: ಪಂಪಭಾ, ೧೨. ೧೮೪)

ಒತ್ತಂಬ
[ನಾ] ಒತ್ತರಿಸುವಿಕೆ, ಒತ್ತಡ (ಪುಳಕಪ್ರೋದ್ಭೇದ ಘರ್ಮೋದಕವಿಸರಮಂ ಒತ್ತಂಬದಿಂ ತಾಗೆಯುಂ: ಆದಿಪು, ೪. ೫೧); [ನಾ] ಒತ್ತಾಯ, ಬಲಾತ್ಕಾರ (ನುಡಿದುದಂ ಪಡಿಯಱಂ ಬಂದು ಆ ಮಾೞ್ಕೆಯೊಳ್ ಅಱಿಪೆ ದ್ರೋಣಂ ಒತ್ತಂಬದಿಂದೆ ಒಳಗಂ ಪೊಕ್ಕು ದ್ರುಪದನಂ ಕಂಡು: ಪಂಪಭಾ, ೨. ೪೭ ವ); [ನಾ] ಪ್ರಯತ್ನಪೂರ್ವಕವಾಗಿ (ಯೋಗಾಭ್ಯಾಸದೊಳ್ ಅರೆಮುಗುಳ್ದ ರಕ್ತಾಂಭೋಜದಳ ವಿಳಾಸ ಉಪಹಾಸಿಗಳಪ್ಪ ಕಣ್ಗಳಂ ಒತ್ತಂಬದಿಂ ತೆಱೆದು: ಪಂಪಭಾ, ೧೩. ೬೩ ವ)

ಒತ್ತರಂ
[ನಾ] ಒಂದೇ ಸಲ (ಆಗಳದಂ ಕಂಡು ಉತ್ತರಂ ಒತ್ತರಂ ಒತ್ತಿದಂತೆ ಬೆರ್ಚಿ ಬೆಗಡುಗೊಂಡು: ಪಂಪಭಾ, ೮. ೯೯ ವ)

ಒತ್ತರಿಸು
[ಕ್ರಿ] ಗಾಢವಾಗು (ಕತ್ತುರಿಯ ಕಂಪುಮಂ ಬೆಮರೊತ್ತರಿಸಿ ಪೊದಳ್ದ ಕಂಪನೀಯುತ್ತಿರೆ ವೃತ್ತೋತ್ತುಂಗಸ್ತನೆಯರ್ ಶ್ರಮಮುತ್ತುಂ ಅದೇಂ ಸುರಭಿಗಂಧಮಂ ಬೀಱಿದರೋ: ಆದಿಪು, ೧೧. ೭೩); [ಕ್ರಿ] ದಟ್ಟವಾಗು (ಕುಳಿರ್ವ ಆಲಿನೀರ್ಗಳಿಂ ತುರಿಪದೆ ಸೂಸುತುಂ ಕೆಳದಿಯರ್ ನದಿಪುತ್ತುಮಿರೆ ನೋಡೆ ದಾಹಂ ಒತ್ತರಿಸಿದುದು: ಪಂಪಭಾ, ೫. ೮); [ಕ್ರಿ] ಒಂದೆಡೆಗೆ ತಳ್ಳು (ಘೂರ್ಣಿತ ಅರ್ಣವಮಂ ಒತ್ತರಿಸಿತ್ತು ಚತುರ್ಬಲ ಆರ್ಣವಂ: ಪಂಪಭಾ, ೧೦. ೨೮)


logo