logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಒಡಗಾಣ್
[ಕ್ರಿ] ಜೊತೆಜೊತೆಗೆ ಕಾಣು (ಪಸರಿಸಿದ ತಾರಹಾರದ ಪೊಸವೆಳ್ದಿಂಗಳುಮಂ ಅಮರ್ದ ಪೆರ್ದುಡುಗೆಗಳೊಳ್ ಮಿಸುಗುವ ಪೊಸಮಾಣಿಕದ ಎಳವಿಸಿಲುಮಂ ಒಡಗಾಣಲಾದುದು ಅರಿಗನ ಸಭೆಯೊಳ್: ಪಂಪಭಾ, ೧೪. ೨೬)

ಒಡಗೂಡು
[ಕ್ರಿ] ಜೊತೆಗೂಡಿಸು, ಸೇರಿಸು (ಸಮಸ್ತ ಭೂಪಟಲಮನಾಂ ತೊೞಲ್ದು ಅಱಸಿ ನಿನ್ನನೊಡಗೂಡಿ ನಿಜೇಶನಂ ಯಶಃಪಟಹನಿನಾದಮಂ ಪರಪುವೆಂ ದೆಸೆಯಂತುವರಂ: ಆದಿಪು, ೩. ೪೫); [ಕ್ರಿ] ಜೊತೆಗೆ ಸೇರು (ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲ್ ಒಡಗೂಡೆ ಗಂಗೆಯ ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ: ಪಂಪಭಾ, ೧. ೯೨); [ಕ್ರಿ] ಸಂಭೋಗಿಸು (ಸನ್ನತದಿಂ ರತಕ್ಕೆಳಸಿ ನಲ್ಲಳೊಳೋತು ಒಡಗೂಡಿದೆನ್ನನಿಂತು ಅನ್ನೆಯಂ ಎಚ್ಚುದರ್ಕೆ ಪೆಱತಿಲ್ಲದು ದಂಡಂ: ಪಂಪಭಾ, ೧. ೧೧೨); [ಕ್ರಿ] ಐಕ್ಯವಾಗು (ಕರ್ಣನೊಡಲಿಂದಾಗಳ್ ನಡೆ ನೋಡೆ ನೋಡೆ ದಿನಪನೊಳಗೂಡಿದುದು ಒಂದು ಮೂರ್ತಿ ತೇಜೋರೂಪಂ: ಪಂಪಭಾ, ೧೨. ೨೧೫)

ಒಡನಾಡಿ
[ನಾ] ಜೊತೆಗಾರ (ತನ್ನ ಒಡನಾಡಿಯಪ್ಪ ಕೆಳೆಯಂ ದ್ರುಪದಂ ಛತ್ರಾವತಿಯೊಳ್ ಅರಸುಗೆಯ್ದಪನೆಂದು ಕೇಳ್ದು ಆ ಪೊೞಲ್ಗೆ ವಂದು: ಪಂಪಭಾ, ೨. ೪೬ ವ)

ಒಡನಾಡಿಗ
[ನಾ] ಒಡನಾಡಿ (ಒಡನಾಡಿಯುಂ ಒಡನೋದಿಯುಂ ಒಡವಳೆದುಂ ಗುಳ್ಳೆಗೊಟ್ಟಿ ಬಟ್ಟು ಉಳಿಸೆಂಡುಂ ಪೊಡೆಸೆಂಡು ಇವಂ ಆಡುತ್ತ ಒಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್: ಪಂಪಭಾ, ೨. ೩೦)

ಒಡನಾಡು
[ಕ್ರಿ] ಜೊತೆಯಲ್ಲಿ ಆಡು, ಸ್ನೇಹಮಾಡು (ಒಡನಾಡಿಯುಂ ಒಡನೋದಿಯುಂ ಒಡವೆಳದುಂ: ಪಂಪಭಾ, ೨. ೩೦)

ಒಡನೀಗು
[ಕ್ರಿ] ಜೊತೆಯಲ್ಲಿ ಕಳೆ (ಅೞಲ್ ನಿನತಲ್ತು ಕೇಳ್ ಎನತು ತಂದೆಯ ಶೋಕಮಂ ಇರ್ವೆಮುಂ ಮುನಿವರಂ ತವೆ ಕೊಂದು ಒಡನೀಗುವಂ: ಪಂಪಭಾ, ೧೨. ೩೬)

ಒಡನುಣ್ಣು
[ಕ್ರಿ] ಜೊತೆಗೆ ಊಟಮಾಡು, ಸ್ನೇಹದಿಂದಿರು (ಪಾಟಿಸುವೆಂ ಒಯ್ಯನೆ ಮುಳ್ಳೊಳೆ ಮುಳ್ಳಂ ಎಂದು ತಾನೀ ನಯದಿಂದೆ ಪೆರ್ಚಿ ಪೊರೆದು ಅೞ್ಕಱೊಳ್ ಅಂದು ಒಡನುಂಡನಲ್ಲನೇ: ಪಂಪಭಾ, ೯. ೬೭)

ಒಡನೆ ವರ್
[ಕ್ರಿ] ಜೊತೆಯಲ್ಲಿ ಬಾ (ಮುನಿಗಣೇಶ್ವರರೊಡನೆ ದಾಳಿವೂಗೊಯ್ವೊಡನೆ ವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರ ತಪಃಪ್ರಭಾವಕ್ಕೆ ಚೋದ್ಯಂಬಟ್ಟು: ಪಂಪಭಾ, ೧. ೧೧೫ ವ)

ಒಡನೊಡನೆ
[ಅ] ಜೊತೆಜೊತೆಯಾಗಿ (ಗೆಡೆವಚ್ಚಿರ್ವರ್ ಮನಗೊಂಡು ಒಡನೊಡನೆ ಓರಂತು ತಗುಳ್ದು ಝೇಂಕರಿಸಿದೊಡೆ ಎಲ್ವಡಗಾಗೆ ಮೋದಲೆಂದಿರ್ದ ಎಡೆಯೊಳ್ ಗುರು ತನ್ನ ಮಗನಂ ಎಡೆವುಗವೇೞ್ದಂ: ಪಂಪಭಾ, ೨. ೭೩)

ಒಡನೋಡುವಡು
[ಕ್ರಿ] ಜೊತೆಯಲ್ಲಿ ನೋಡಲ್ಪಟ್ಟ (ಕಣ್ಮಲರ ಬೆಳ್ಪುಗಳ್ ಆಲಿಯ ಕರ್ಪಿನೊಳ್ ಪೊದಳ್ದು ಒಡನೋಡುವಟ್ಟ ಎನಗೆ ಸಂತಸಮಂ ಮಱುಕಕ್ಕೆ ಮಾಣ್ದೊಡೆ: ಪಂಪಭಾ, ೪. ೭೮)


logo