logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಒಳ್ನುಡಿ
[ನಾ] ಒಳ್ಳೆಯ ಮಾತು (ಒಳ್ನುಡಿಗೇಳ್ದೊಡಂ ಇಂಪನಾಳ್ದ ಗೇಯಂ ಕಿವಿವೊಕ್ಕೊಡಂ .. .. ನೆನೆವುದೆನ್ನ ಮನಂ ಬನವಾಸಿ ದೇಶಮಂ: ಪಂಪಭಾ, ೪. ೩೦)

ಒಳ್ಪನಾಳ್
[ಕ್ರಿ] ಒಳ್ಳೆಯತನ ಅಥವಾ ಸೊಗಸನ್ನು ಹೊಂದು (ಅಪೂರ್ವ ಶುಭಲಕ್ಷಣ ದೇಹದೊಳ್ಪನಾಳ್ದು ಸಂದ ಅಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ: ಪಂಪಭಾ, ೧. ೪)

ಒಳ್ಪು
[ನಾ] ಒಳ್ಳೆಯತನ, ಸಜ್ಜನಿಕೆ (ಗುಣಾರ್ಣವನೊಳ್ಪು ಮನ್ಮನೋವಾಸಮನೆಯ್ದೆ ಪೇೞ್ದಪೆನಲ್ಲದೆ ಗರ್ವಮೆ ದೋಷಮ್ ಅೞ್ತಿಗಂ ದೋಷಮೆ: ಪಂಪಭಾ, ೧. ೧೩); [ನಾ] ಚೆಲುವು (ಪಿಡಿದೆಡಗಯ್ಯ ಚಾಮರದದಕ್ಷಿಣಹಸ್ತದ ಪದ್ಮದ ಒಳ್ಪು ಒಡಂಬಡೆ: ಪಂಪಭಾ, ೩. ೯೯); [ನಾ] ಒಳಿತು (ಅವನೀನಾಥನ ಗೆಯ್ದ ಪೊಲ್ಲಮೆಗಂ ಎನ್ನ ಒಳ್ಪಿಂಗಂ ಇಂ ಸಕ್ಕಿಯಾಗಿ ಅವಂ ಈವಂತುಟಂ ಅದಂ ಬಲ್ಲಂತು ಕಾಲ್ಗುತ್ತಿ ನೋಡು: ಪಂಪಭಾ, ೯. ೨೬)

ಒಳ್ಪೊಗು
[ಕ್ರಿ] ಒಳಹೊಗು (ಮುಗಿಲ ಬೆಳ್ಪೊಳಪೊಕ್ಕು ತಳ್ಪೊಯ್ಯೆ ಬಳ್ವಳ ನೀಳ್ದಿರ್ದ ದಿಶಾಳಿ: ಪಂಪಭಾ, ೭. ೭೧)

ಒಳ್ಮೊಗ
[ನಾ] ಚೆಲುವಾದ ಮುಖ (ನಲ್ಲರ ಒಳ್ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡೆ: ಪಂಪಭಾ, ೪. ೨೮)

ಒಳ್ವರಕೆ
[ನಾ] [ಒಳ್+ಪರಕೆ] ಒಳ್ಳೆಯ ಆಶೀರ್ವಾದ (ರಜಂಬೊರೆದಳಿಮಾಲೆ ಮಾಲೆಯನೆ ಪೋಲೆ ಪಯೋಜಜ ಪಾರ್ವತೀಶರ ಒಳ್ವರಕೆಯನಾಂತು: ಪಂಪಭಾ, ೧೨. ೨೨೧)

ಒಳ್ವಾತು
[ನಾ] ಒಳ್ಳೆಯ ಮಾತು (ಅಕ್ಕರಗೊಟ್ಟಿಯುಂ ಚದುರರ ಒಳ್ವಾತುಂ ಕುಳಿರ್ ಕೋೞ್ಪ ಜೊಂಪಮುಂ ಏವೇೞ್ಪುದನುಳ್ಳ ಮೆಯ್ಸುಕಮುಂ: ಪಂಪಭಾ, ೪. ೩೧)

ಒಳ್ವೆಂಡಿರ್
[ನಾ] ಸುಂದರ ಹೆಣ್ಣು (ಕುಡುಮಿಂಚಂ ಮಸೆದನ್ನರಪ್ಪ ಪಲರ್ ಒಳ್ವೆಂಡಿರ್ ಮನಂಗೊಂಡು ಬಂದೊಡಮಾ ರಾಜಕುಮಾರನೊಲ್ಲದೆ: ಆದಿಪು, ೩. ೧೨)

ಒಳ್ವೆಸ
[ನಾ] ಚೆನ್ನಾದ ಸೇವೆ (ಪತ್ತಿದಂಗನೆಯರ ಒಳ್ವೆಸಕೆಯ್ವ ಅಮರೇಂದ್ರ ರಾಗಸಂಪತ್ತು ಮನಂಗೊಳುತ್ತುಮಿರೆ: ಆದಿಪು, ೮. ೬೧)

ಒಳ್ವೊಕ್ಕು ನಿಲ್
[ನಾ] ಬಲವಾದ ಆಶ್ರಯ ಪಡೆದಿರು (ಇದಿರೊಳ್ ನಿಂದೊಡೆ ವಜ್ರಿ ಸೈರಿಸಂ ಇರಲ್ವೇಡ ಎಮ್ಮ ಒಳ್ವೊಕ್ಕು ನಿಲ್ ನೀನೆಂದು ಕಡಂಗಿ ಕಾಲ್ವಿಡಿವವೊಲ್: ಪಂಪಭಾ, ೪. ೨೪)


logo